ಯಲ್ಲಾಪುರ: ಇತ್ತಿಚೀನ ಅರಣ್ಯ ಸಿಬ್ಬಂದಿಗಳ ವರ್ತನೆಯು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದ್ದು, ಅರಣ್ಯ ಸಿಬ್ಬಂದಿಗಳ ವರ್ತನೆಯಿಂದ ಸಾರ್ವಜನಿಕವಾಗಿ ಉಂಟಾದ ಗೊಂದಲವನ್ನು ನಿವಾರಿಸುವ ದಿಶೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಬಹಿರಂಗವಾಗಿ ಪತ್ರ ಬರೆದು, ಪ್ರಮುಖ ಏಳು ಪ್ರಶ್ನಾವಳಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಮುಂದಿನ ಹತ್ತು ದಿನಗಳಲ್ಲಿ ಕಾನೂನಾತ್ಮಕ ಅಂಶದಿoದ ಪ್ರಶ್ನಾವಳಿಗಳಿಗೆ ಸ್ಪಷ್ಟ ಉತ್ತರವನ್ನು ನೀಡಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಇಲಾಖೆಗೆ ಅಗ್ರಹಿಸಿದೆ.
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಅರಣ್ಯವಾಸಿಗಳ ಸಾಗುವಳಿ ಹಕ್ಕು, ವಹಿವಾಟು ಮತ್ತು ಅರಣ್ಯ ಸಿಬ್ಬಂದಿಗಳು ಅರಣ್ಯ ವಾಸಿಗಳಿಗೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ, ಕಿರುಕುಳ, ಅರಣ್ಯ ವಾಸಿಗಳ ಹಕ್ಕಿಗೆ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಅರಣ್ಯ ಸಿಬ್ಬಂದಿಗಳ ವರ್ತನೆಯು ಸಂಶಯಾಸ್ಪದವಾಗಿದೆ. ಇದರಿಂದ ಸಾರ್ವಜನಿಕವಾಗಿ ವ್ಯಾಪಕವಾದ ಚರ್ಚೆಗೆ ಆಸ್ಪದವಾಗಿದೆ. ಹಿಗಿದ್ದಾಗ್ಯೂ ಅರಣ್ಯ ಅಧಿಕಾರಿಗಳು ಸ್ಪಷ್ಟನೆ ಹಾಗೂ ಸ್ಪಷ್ಟೀಕರಣ ನೀಡದಿರುವದರಿಂದ, ಹೋರಾಟಗಾರರ ವೇದಿಕೆಯು ಅರಣ್ಯ ಅಧಿಕಾರಿಗಳಿಗೆ ಸ್ಪಷ್ಟೀಕರಣ ಬಯಸಿ ಇಂದು ಸ್ಥಳೀಯ ಯಲ್ಲಾಪುರ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಇವರಿಗೆ ಪ್ರಮುಖ ಏಳು ಪ್ರಶ್ನಾವಳಿಯ ಬಹಿರಂಗ ಪತ್ರವನ್ನು ಹಸ್ತಾಂತರಿಸಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಗೆ ಸಲ್ಲಿಸಲ್ಪಟ್ಟ ಪ್ರಶ್ನಾವಳಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ಆತಂಕ ಪಡಿಸಲು ಇರುವ ಅವಕಾಶ, ಜೀರ್ಣಾವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಕಟ್ಟಡ ನಂಬರ ಇರುವ ಇಮಾರತ್ತಿಗೆ ಪುನರ್ ನಿರ್ಮಾಣಕ್ಕೆ ಅವಕಾಶ, ಸಾಂಕ್ರಾಮಿಕ ರೋಗ ನಿಯಂತ್ರಣ, ನಿಯಮ ಮತ್ತು ನೀತಿ ಜಾರಿಯಲ್ಲಿರುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಖಕವಚ(ಮಾಸ್ಕ) ಧರಿಸದೇ ಅತಿಕ್ರಮಣ ಸ್ಥಳಕ್ಕೆ ಪ್ರವೇಶ ಮಾಡುವುದು, ಜನಸಾಮಾನ್ಯರಿಗಾಗಲಿ ಅಥವಾ ಅರಣ್ಯ ಗುನ್ನೆಯಲ್ಲಿ ಅಪರಾಧಿಸಲ್ಪಟ್ಟ ಆರೋಪಿತನ ಮೇಲೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವ ಕುರಿತು, ಖಾಸಗಿ ವ್ಯಕ್ತಿಯ ಆವರಣಕ್ಕೆ ಶೋಧಕ್ಕೆ, ತನಿಖೆಗೆ, ಬಂಧಿಸಲಾಗಲಿ ನ್ಯಾಯಾಲಯದ ಪರವಾನಿಗೆ ಇಲ್ಲದೇ ಪ್ರವೇಶಿಸುವ ಹಾಗೂ ಭಾರತ ದಂಡಸoಹಿತೆ ಕಲಂ ಅಡಿಯಲ್ಲಿ ಅರಣ್ಯ ಸಿಬ್ಬಂದಿಗಳು ಪ್ರಥಮ ವರ್ತಮಾನ ದಾಖಲಿಸುವ ಕುರಿತು ಪ್ರಮುಖ ಏಳು ಪ್ರಶ್ನಾವಳಿಗಳಿವೆ. ಅರಣ್ಯ ಸಿಬ್ಬಂದಿಗಳು ಇತ್ತಿಚೀಗೆ ಕರ್ತವ್ಯ ಚ್ಯುತಿ ಮತ್ತು ಕಾನೂನು ಬಾಹಿರ ಕೃತ್ಯಕ್ಕೆ ಸಂಬoದಿಸಿ ಸ್ಪಷ್ಟನೆ ಬಯಸಿ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಯಲ್ಲಿ ಅರಣ್ಯ ವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿoದ ಆಗುವ ಕಾನೂನು ಬಾಹಿರ ಕೃತ್ಯಕ್ಕೆ ಸ್ಪಷ್ಟನೆ ಕೋರಿ ಪತ್ರ ಬರೆಯಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕಛೇರಿಗೆ ಮುತ್ತಿಗೆ;
ಅರಣ್ಯ ಇಲಾಖೆಯಿಂದ ನಿರ್ಧಿಷ್ಟಪಡಿಸಿದ ಕಾಲಾವಧಿಯಲ್ಲಿ ಉತ್ತರ ಬರದಿದ್ದಲ್ಲಿ ಅರಣ್ಯವಾಸಿ ಮತ್ತು ಸಾರ್ವಜನಿಕ ಹಿತಾಸಕ್ತಿಯಂದ ನೇರವಾಗಿ ಅರಣ್ಯವಾಸಿಗಳೊಂದಿಗೆ ಅರಣ್ಯಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ನಿರ್ದಿಷ್ಟ ಉತ್ತರಕ್ಕಾಗಿ ಪ್ರಶ್ನಿಸಲಾಗುವುದು ಎಂದು ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಭೀಮ್ಸಿ ವಾಲ್ಮೀಕಿ, ನೂರು ಅಹ್ಮದ ಸೈಯದ್ ಸಾಬ ಮುಜಾವರ ಸಿದ್ಧಿ, ಅನಂತ ಗೌಡ, ಫಕರುಸಾಬ ಜುಮ್ಮಾಸಾಬ ಮುಜಾವರ ಸಿದ್ಧಿ, ಮುಂತಾದವರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆಗೆ ಪ್ರಶ್ನಿಸಲಾದ ಪ್ರಶ್ನಾವಳಿ:
• ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ವಾಸಿಗಳ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗೆ ಅರಣ್ಯ ಸಿಬ್ಬಂದಿಗಳು ಆತಂಕ ಪಡಿಸಲು ಅವಕಾಶ ಇದೆಯೋ ಹೆಗೇ?
• ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ, ಜಿಪಿಎಸ್ ಸರ್ವೇ ಆಗಿ ಕೃಷಿ ಚಟುವಟಿಕೆಗೆ ಪೂರಕವಾದ ಹಾಗೂ ಅರಣ್ಯವಾಸಿಯ ವಾಸ್ತವ್ಯದ ಇಮಾರತ್ತು ದುರಸ್ಥಿ ವ ಬದಲಾವಣೆಗೆ ಅಥವಾ ಸ್ಥಳೀಯ ಸಂಸ್ಥೆಯಲ್ಲಿ ಕಟ್ಟಡ ನಂಬರ ಇರುವ ಜಿರ್ಣಾವ್ಯಸ್ಥೆ ಕಟ್ಟಡಕ್ಕೆ ಪುನರ್ ನಿರ್ಮಾಣಕ್ಕೆ ಅವಕಾಶ ಇದೆಯೋ ಹೇಗೆ?
• ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿಗೊಳಿಸುತ್ತಿರುವ ಸಾಗುವಳಿಗೆಗೆ ಆತಂಕಗೊಳಿಸುವ ಅರಣ್ಯ ಸಿಬ್ಬಂದಿಗಳ ‘ಕೃತ್ಯ’ ಕಾನೂನು ಬಾಹಿರ ಕೃತ್ಯವ್ಯವಾಗುವುದೋ ಹೇಗೆ?
• ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಕ್ಷೇತ್ರಕ್ಕೆ ಕೋವೀಡ್ ಸಾಂಕ್ರಾಮಿಕ ರೋಗ ನಿಯಂತ್ರಣ, ನಿಯಮ ಮತ್ತು ನೀತಿ ಜಾರಿಯಲ್ಲಿ ಇರುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮುಖಕವಚ(ಮಾಸ್ಕ) ಧರಿಸದೇ ಪ್ರವೇಶ ಮಾಡಿದ್ದಲ್ಲಿ ಅಪರಾಧ ಆಗುವುದೋ ಹೇಗೆ?
• ಅರಣ್ಯ ಕಾಯಿದೆಯಲ್ಲಿ ಜನಸಾಮಾನ್ಯರಿಗಾಗಲಿ ಅಥವಾ ಅರಣ್ಯ ಗುನ್ನೆಯಲ್ಲಿ ಅಪರಾಧಿಸಲ್ಪಟ್ಟ ಆರೋಪಿತನ ಮೇಲೆ ಆರೋಪಿತನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಅವಕಾಶ ವಿದೆಯೋ?
• ಅರಣ್ಯ ಕಾಯ್ದೆಯಲ್ಲಿ ಅರಣ್ಯ ಗುನ್ನೆಗೆ ಸಂಬoಧಿಸಿ ಖಾಸಗಿ ವ್ಯಕ್ತಿಯ ಕಬಜಾ ಭೋಗ್ವಟೆಯಲ್ಲಿ ಇರುವ ಸ್ಥಳಕ್ಕೆ ಶೋಧಕ್ಕಾಗಲಿ, ತನಿಖೆಗಾಗಲಿ, ಬಂಧಿಸಲಾಗಲಿ, ನ್ಯಾಯಾಲಯದ ಪರವಾನಗಿ ಇಲ್ಲದೇ ಪ್ರವೇಶಿಸಲು ಅವಕಾಶ ವಿದೆಯೋ ?
• ಭಾರತೀಯ ದಂಡಸoಹಿತೆಯ ಕಲಂ ಅಡಿಯಲ್ಲಿ ಅರಣ್ಯ ಸಿಬ್ಬಂದಿಗಳು ಪ್ರಥಮ ವರ್ತಮಾನ ದಾಖಲಿಸಲು ಬರುತ್ತದೆಯೋ ಹೇಗೆ?
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.