December 22, 2024

Bhavana Tv

Its Your Channel

ಮಣಿಪಾಲ ಆರೋಗ್ಯ ಕಾರ್ಡ ೨೦೨೦ರ ನೋಂದಣಿಗೆ ಅಕ್ಟೋಬರ್ ೩೧ ಕೊನೆಯ ದಿನಾಂಕ.

ಭಟ್ಕಳ: ಮಣಿಪಾಲ ಆರೋಗ್ಯ ಕಾರ್ಡ ೨೦೨೦ರ ನೋಂದಣಿಗೆ ಅಕ್ಟೋಬರ್ ೩೧ ಕೊನೆಯ ದಿನಾಂಕವಾಗಿದ್ದು, ಈ ಬಾರಿ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಕಾರ್ಡ ಆದ ಸ್ಪಾರ್ಟ ಕಾರ್ಡ ಪರಿಚಯಿಸುತ್ತಿದ್ದೇವೆ ಎಂದು ಕಸ್ತೂರಬಾ ಆಸ್ಪತ್ರೆ ಮಣಿಪಾಲ ಮಾರುಕಟ್ಟೆ ವಿಭಾಗದ ಉಪವ್ಯವವಸ್ಥಾಪಕ ಮೋಹನ ಶೆಟ್ಟಿ ವಿವರಿಸಿದರು.

ಅವರು ಇಲ್ಲಿನ ಖಾಸಗಿ ಹೋಟೇಲನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.

‘ಕಳೆದ ಜಿಲ್ಲೆಯಲ್ಲಿ ೭೦ ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ ೧೭-೧೮% ಯೋಜನೆ ಫಲಾನುಭವ ಪಡೆದುಕೊಂಡಿದ್ದಾರೆ. ಭಟ್ಕಳದಲ್ಲಿ ೮-೧೦ ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಹೆಚ್ಚು ಜನರು ಕಾರ್ಡ ನೋಂದಣಿಗೆ ಗುರಿ ಇಟ್ಟುಕೊಂಡಿದ್ದೇವೆ. ಅದರಲ್ಲಿ ಈ ಬಾರಿ ಕೋರೊನಾ ಹಿನ್ನೆಲೆ ಕಾರ್ಡ ಯೋಜನೆಯ ನೋಂದಣಿಗೆ ಅವಧಿ ವಿಸ್ತರಣೆ ಮಾಡಿದ್ದೇವೆ. ಅದರಲ್ಲಿ ತಿಂಗಳ ಕೊನೆಯಲ್ಲಿ ಕಾರ್ಡಗಳ ನೋಂದಣಿ ಹೆಚ್ಚಾಗಲಿದೆ ಎಂದ ಅವರು ಹೇಳಿದರು

ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ೨೦ ವರ್ಷಗಳನ್ನು ಪೂರೈಸಿರುವುದು ನಮಗೆ ಸಂತಸ ತಂದಿದೆ. ೨೦ನೇ ವರ್ಷದ ಅಂಗವಾಗಿ ನಾವು ಕಾರ್ಡಗಳನ್ನು ಸುಲಭವಾಗಿ ನೋಂದಾಯಿಸಲು, ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಕಾರ್ಡ ಸ್ಪಾರ್ಟ ಕಾರ್ಡನ್ನು ಪರಿಚಯಿಸಿದ್ದೇವೆ. ಮತ್ತು ಸಂಖ್ಯಾ ಮುದ್ರಿತ ಸ್ಪಾರ್ಟ ಕಾರ್ಡನ್ನು ಕಾರ್ಡುದಾರರಿಗೆ ಸ್ಥಳದಲ್ಲಿಯೇ ನೀಡಲಾಗುವ ವ್ಯವಸ್ಥೆ ಮಾಡಿದ್ದೇವೆ. ಹಾಗೂ ಸ್ಪಾರ್ಟ ಕಾರ್ಡನ್ನು ತಮ್ಮ ಪೋಕೇಟನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಮತ್ತು ಅವರು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ ಎಂದು ವಿವರಿಸಿದರು.

೨೦ನೇ  ವರ್ಷದ ಮಣಿಪಾಲ ಆರೋಗ್ಯ ಕಾರ್ಡ ಯೋಜನೆಯು ಒಂದು ವರ್ಷ ಮತ್ತು ಎರಡು ವರ್ಷದ ಯೋಜನೆಯಾಗಿ ಲಭ್ಯವಿದ್ದು, ಈ ವರ್ಷದಿಂದ ಕಟೀಲಿನ ದುರ್ಗಾಸಂಜೀವಿನಿ ಮಣಿಪಾಲ್ ಆಸ್ಪತ್ರೆಯನ್ನು ನೆಟ್ ವರ್ಕ ಆಸ್ಪತ್ರೆಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಣಿಪಾಲ ಆರೋಗ್ಯ ಕಾರ್ಡ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ರೂ. ೨೫೦., ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, ೨೫ ವರ್ಷದ ಒಳಗಿನ ಮಕ್ಕಳಿಗೆ ರೂ. ೫೦೦ ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, ೨೫ ವರ್ಷದ ಒಳಗಿನ ಮಕ್ಕಳು ಮತ್ತು ೪ ಪೋಷಕರು, (ತಂದೆ, ತಾಯಿ, ಅತ್ತೆ ಮತ್ತು ಮಾವ) ರೂ. ೬೫೦, ಇದೊಂದು ಹೆಚ್ಚುವರಿ ಲಾಭವಾಗಿದೆ. ೨ ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರೂ. ೪೦೦, ಕುಟುಂಬಕ್ಕೆ ರೂ.೭೦೦ ಮತ್ತು ಕುಟುಂಬ ಪ್ಲಸ್ ಯೋಜನೆಗೆ ರೂ. ೮೫೦ ಇರುತ್ತದೆ. ಮಣಿಪಾಲ ಆರೋಗ್ಯ ಕಾರ್ಡನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು.

ಈ ಪೈಕಿ ಮಣಿಪಾಲ ಆರೋಗ್ಯ ಕಾರ್ಡ ಉಪಯೋಗಿಸಿ ಅದರಲ್ಲಿ ವೈದ್ಯರ ಸಮಾಲೋಚನೆ ೫೦% ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆ ೩೦% ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತು ಪಡಿಸಿ ೨೫% ರಿಯಾಯಿತಿ, ಸಿ.ಟಿ., ಎಂ.ಆರ್.ಐ., ಅಲ್ಟ್ರಾಸೌಂಡ್ ಗೆ ೨೦% ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು  ಮಧುಮೇಹ ಪಾದ ತಪಾಸಣೆಯಲ್ಲಿ ೨೦% ರಿಯಾಯಿತಿ, ಔಷಧಾಲಯಗಳಲ್ಲಿ ೧೨% ರ ವರೆಗೆ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.

೨೦೨೦ ರ ನೋಂದವಣಿಗಾಗಿ ಅಧೀಕೃತ ಪ್ರತಿನಿಧಿಗಳಾದ ಸೈಂಟ್ ಮಿಲಾಗ್ರೆಸ್ ಸೌಹಾರ್ದದ ಎಲ್ಲಾ ಶಾಖೆಗಳು: ಭಟ್ಕಳ- ೯೫೩೮೮೯೪೫೯೦, ಮುರುಡೇಶ್ವರ- ೯೫೩೮೦೨೦೩೦೩, ಶಿರಾಲಿ- ೮೨೭೭೦೯೧೫೬, ಗೌರಿಶಂಕರ ಮೋಗೇರ- ೮೭೨೨೫೪೦೪೯೬ ಹಾಗೂ ಯುವರಾಜ್- ೯೯೬೪೮೮೮೭೫೫ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ವರದಿ: ಶೈಲೇಶ್ ವೈದ್ಯ ಮುರ್ಡೇಶ್ವರ

error: