December 22, 2024

Bhavana Tv

Its Your Channel

ಅಕ್ರಮ ಗೋ ಮಾಂಸ ಸಾಗಾಟಕ್ಕೆ ಯತ್ನ; ಮಹ್ಮದ್, ಭಾಷಾಸಾಬನ ಬಂಧನ

ಶಿರಸಿ: ಇಲ್ಲಿನ ಕರಿಗುಂಡಿ ರಸ್ತೆಯಲ್ಲಿ ಅಕ್ರಮ ಗೋಮಾಂಸ ಸಾಗಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿದ ಆಧರಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕರಿಗುಂಡಿ ರಸ್ತೆಯಲ್ಲಿ ಗೋಮಾಂಸ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಅಕ್ಕಿಆಲೂರು ಮೂಲದ ಮಹ್ಮದ್ ಸಲಿಂ ಮಾಬುಸಾಬ ಬೇಪಾರಿ ಮತ್ತು ಭಾಷಾಸಾಬ ಅಬ್ದುಲ್ ಖಾದರಸಾಬ ಬಹದ್ದೂರ ಬಂಧನಕ್ಕೊಳಗಾದವರು. ಬಂಧಿತರಿಂದ ಪೊಲೀಸರು ಅಂದಾಜು 4950 ಮೌಲ್ಯದ 16 ಕೆಜಿ 460 ಗ್ರಾಂ ಗೋಮಾಂಸ, 3300 ರೂ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಲಾದ 2 ಮೊಬೈಲ್‍ಗಳು ಮತ್ತು ಅಂದಾಜು 30,000 ರೂ ಮೌಲ್ಯದ ಸ್ಲೆಂಡರ್ ಬೈಕನ್ನು ಜಪ್ತಿಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಸಿಬ್ಬಂದಿಗಳಾದ ಚಿದಾನಂದ ನಾಯ್ಕ, ಹನುಮಂತ ಮಾಕಾಪುರ, ಮೋಹನ ನಾಯ್ಕ ರವರನ್ನು ಒಳಗೊಂಡ ತಂಡ ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.

error: