December 22, 2024

Bhavana Tv

Its Your Channel

ಭಟ್ಕಳದ ಬೆಳಕೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ ಸಮೀಪದ ಮನೆಯೊಂದರ ಮೇಲೆ ಹಾಡುಹಗಲೇ ದರೋಡೆ

ಭಟ್ಕಳ: ತಾಲೂಕಿನ ಗಡಿ ಭಾಗವಾದ ಬೆಳಕೆಯ ಅರಣ್ಯ ಇಲಾಖೆಯ ಚೆಕ್ ಪೋಸ್ಟ ಸಮೀಪದ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿದ ಕಳ್ಳರು ೬ ಸಾವಿರ ರೂ ಹಣ, ಗೇರುಬೀಜ ತುಂಬಿದ್ದ ಚೀಲ ಹಾಗೂ ಕೆಲವು ದಾಖಲಾತಿಯನ್ನು ಕದ್ದುಕೊಂಡು ಪರಾರಿಯಾದ ಘಟನೆ ಸೋಮವಾರ ನಡೆದಿದೆ.
ಬೆಳಕೆಯ ತಿಮ್ಮಯ್ಯ ಕುಪ್ಪಯ್ಯ ನಾಯ್ಕ ಎಂಬುವವರಿಗೆ ಸೇರಿದ ಈ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿದೆ. ಪಟ್ಟಣದ ಯೂನಸ್ ಮತ್ತು ಮೂದಾಸೀರ್ ಬಂಧಿತ ಆರೋಪಿಗಳು.ಮನೆಯಲ್ಲಿ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಸುಮಾರು ೮ಸಾವಿರ ನಗದು, ಮೊಬೈಲ್ ಹಾಗೂ ಗೇರು ಬೀಜ ತುಂಬಿದ ಚೀಲವನ್ನು ಕದ್ದುಕೊಂಡು ಪರಾರಿಯಾಗಿದ್ದರು. ಈ ಸಂದರ್ಬದಲ್ಲಿ ತಮ್ಮ ಮೊಬೈ???ನ್ನು ಘಟನೆಯ ಸ್ಥಳದಲ್ಲಿ ಮರೆತು ಹೋಗಿದ್ದರು. ಬೆಳಕೆಯಲ್ಲಿ ಸೋಮವಾರ ಹೊಸ್ತು ಹಬ್ಬವನ್ನು ಆಚರಿಸುವ ಹಿನ್ನಲೆಯಲ್ಲಿ ಮನೆಯವರು ಮನೆಗೆ ಬಂದಿದ್ದಾರೆ. ಅದೆ ಸಮಯದಲ್ಲಿ ಕಳ್ಳರು ತಾವು ಬಿಟ್ಟ್ ಮೊಬೈಲ್‌ನ್ನು ತರಲೆಂದು ಅಲ್ಲಿ ಬಂದಿದ್ದಾರೆ. ಅನುಮಾನಗೊಂಡ ಗ್ರಾಮಸ್ಥರು ಕಳ್ಳರನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಒಟ್ಟು ಐವರು ಕಳ್ಳತನದಲ್ಲಿ ಇದ್ದಿರಬಹುದೆಂದು ಶಂಕಿಸಲಾಗಿದ್ದು ಇನ್ನು ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ೬ ತಿಂಗಳ ಹಿಂದೆಯೂ ಇದೆ ಮನೆಯಲ್ಲಿ ಕಳ್ಳತನ ನಡೆದಿದ್ದು ಘಟನೆ ಮತ್ತೆ ಪುನರಾವರ್ತನೆಯಾಗಿದೆ. ಗ್ರಾಮಸ್ಥರಲ್ಲಿ ಇದರಿಂದ ಆತಂಕ ಹೆಚ್ಚಿದ್ದು ಕಳ್ಳರನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ. ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ

error: