December 22, 2024

Bhavana Tv

Its Your Channel

ಕಾಯ್ಕಿಣಿ ಗ್ರಾಮ ಪಂಚಾಯತ ಕಛೇರಿಗೆ ನುಗ್ಗಿದ ಕಳ್ಳರು

ಭಟ್ಕಳ:- ತಾಲೂಕಿನ ಮುರ್ಡೇಶ್ವರ ಸಮೀಪದ ಕಾಯ್ಕಿಣಿ ಗ್ರಾಮ ಪಂಚಾಯತನಲ್ಲಿ ಬುಧವಾರ ತಡರಾತ್ರಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಪಂಚಾಯತ್ ಕಾರ್ಯದರ್ಶಿ ಸಿಬ್ಬಂದಿ ಗ್ರಾಮ ಪಂಚಾಯತಗೆ ದೌಡಾಯಿಸಿದರು.

ಗ್ರಾಮ ಪಂಚಾಯತ್ ನ ಬೀಗ ಒಡೆದು ಕಳ್ಳರು ಹಿಂದಿನ ದಿನದ ತೆರಿಗೆ ವಸೂಲಾತಿಯ ೧೪೭೪ ರೂಪಾಯಿ ಹಣ ಕಂಪ್ಯೂಟರ್ ಸಿಬ್ಬಂದಿಯವರ ಡ್ರಾವರನಲ್ಲಿನ ಹಾರ್ಡಡಿಸ್ಕ, ಎರಡು ಮೊಬೈಲ್ ಪೋನ್, ಒಂದು ಸಿಮ್ ಹಾಗೂ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಎಲ್ಲಾ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದಲ್ಲದೇ ಪಂಚಾಯತ್ ಕಾರ್ಯಾಲಯದ ಮುಂದುಗಡೆ ಇರುವ ಗ್ರಾಮಲೆಕ್ಕಾಧಿಕಾರಿ ಕಛೇರಿಯ ಬೀಗವನ್ನು ಒಡೆದು ಹೋಗಿದ್ದಾರೆ.ಸ್ಥಳಕ್ಕೆ ಮುರ್ಡೇಶ್ವರ ಠಾಣೆಯ ಎಸ್.ಐ, ಕ್ರೈಂ ವಿಭಾಗದ ಪೊಲೀಸರು ಸೇರಿದಂತೆ ಸಹ ಪೊಲೀಸರು ಆಗಮಿಸಿದ್ದು, ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೂಡಾ ಆಗಮಿಸಿದ್ದು, ಯಾವುದಾದರೂ ದಾಖಲೆಗೆ ಬೇಕಾಗಿ ಈ ಕೃತ್ಯ ನಡೆದಿರಬಹುದೆಂದು ಊರಿನವರು ಶಂಕಿಸಿದ್ದಾರೆ.

ವರದಿ:- ಶೈಲೇಶ ವೈದ್ಯ ಮುರ್ಡೇಶ್ವರ

error: