ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಳನುಗ್ಗಿದ ಕಳ್ಳರು ಮನೆಯಲ್ಲಿ ಕಪಾಟಿನಲ್ಲಿದ್ದ ಸುಮಾರು ೮ ಲಕ್ಷ ೬೫ ಸಾವಿರ ರೂ. ಮೌಲ್ಯದ ಚಿನ್ನವನ್ನು ಕದ್ದು ಪರಾರಿಯಾದ ಘಟನೆ ಮುರುಡೇಶ್ವರದ ಹೆರಾಡಿ ಬಳಿ ನಡೆದಿದೆ.
ಶಿಕ್ಷಕರಾದ ಗಜಾನನ ಗಣಪತಿ ನಾಯ್ಕ ಇವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಇವರು ಅ. ೨೩ರಂದು ತಮ್ಮ ಕುಟುಂಬದ ಜೊತೆಗೆ ಹೊನ್ನಾವರದ ಮೂಲ ಮನೆಗೆ ಹೋಗಿ ಮಾರನೇ ದಿನ ಸಂಜೆ ಮನೆಗೆ ವಾಪಾಸ್ಸು ಬಂದಾಗ ಕಳ್ಳತನವಾದ ವಿಷಯ ತಿಳಿದಿದೆ.
ಕಳ್ಳರು ಮನೆಯ ಹೊರಗಿನ ಬಾಗಿಲು ಮುರಿದು ಮನೆಯ ಒಳ ನುಗ್ಗಿ ಬೆಡ್ ರೂಮಿನ ಬೀಗವನ್ನು ಮುರಿದು ಕಪಾಟಿನ ಬಾಗಿಲು ಹಾಗೂ ಲಾಕರ್ ಒಡೆದು ಅದರಲ್ಲಿದ್ದ ೧೭೩ ಗ್ರಾಂ ತೂಕದ ಕರಿಮಣಿ ಸರ, ೩ ಚೈನ್, ೩ ಕಿವಿಯೋಲೆ, ೧೫ ಉಂಗುರ ಸೇರಿದಂತೆ ವಿವಿಧ ಮಾದರಿಯ ಚಿನ್ನದ ಆಭರಣ ಹಾಗೂ ೩೫ ಸಾವಿರ ರೂ ನಗದು ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ಮುರುಡೇಶ್ವರ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಶ್ವಾನದಳ ಹಾಗೂ ಬೆರಳಚ್ಚು ತಂಡವನ್ನು ಕಾರವಾರದಿಂದ ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ಸಿ.ಪಿ.ಐ. ದಿವಾಕರ ಮರ್ಗರ್ಶನದಲ್ಲಿ ಮುರುಢೇಶ್ವರ ಠಾಣಾ ಪಿ.ಎಸ್.ಐ. ರವೀಂದ್ರ ಬಿರಾದಾರ ತನಿಖೆ ಕೈಗೊಂಡಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.