December 22, 2024

Bhavana Tv

Its Your Channel

ಬಿ.ಎ ಮತ್ತು ಬಿ.ಕಾಂ ಪ್ರಥಮ ವರ್ಷದ ೪೯ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ

ಕುಮಟಾ:
ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾಡ ಇದರ ೨೦೧೯-೨೦ ಸಾಲಿನ ಬಿ.ಎ ಮತ್ತು ಬಿ.ಕಾಂ ಪ್ರಥಮ ವರ್ಷದ ೪೯ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮವನ್ನು ಬುಧವಾರ ಶಾಸಕದಿನಕರ ಶೆಟ್ಟಿ ಉದ್ಘಾಟಿಸಿ ಸಾಂಕೇತಿಕವಾಗಿ ಲ್ಯಾಪ್ ಟಾಪ್ ವಿತರಿಸಿದರು.

ಈ ವೇಳೆ ಜಿ.ಪಂ ಸದಸ್ಯ ಹಾಗೂ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ,” ಪರಿಣಾಮಕಾರಿ ಶಿಕ್ಷಣವನ್ನು ನೀಡುವ ದೃಷ್ಟಿಯಿಂದ ಸರ್ಕಾರ ಅನೇಕ ರೀತಿಯ ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಇದೀಗ ಬಿಜೆಪಿ ಸರ್ಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ನಿಜಕ್ಕೂ ಸ್ವಾಗತಾರ್ಹ. ಈ ಲ್ಯಾಪ್ ಟಾಪ್ ನಿಂದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕಿದೆ ಶಿಕ್ಷಣದ ದೃಷ್ಟಿಯಿಂದ ವಿದ್ಯಾರ್ಥಿಗಳು ಲ್ಯಾಪ್ ಟಾಪ್ ನ ಸದುಪಯೋಗ ಪಡೆದುಕೊಳ್ಳುವಂತೆ ಆಗಬೇಕು. ಲ್ಯಾಪ್ ಟಾಪ್ ನಿಂದ ಆಗುವ ದುರುಪಯೋಗವೂ ಸಾಕಷ್ಟಿದ್ದು, ಕೇವಲ ಒಳಿತನ್ನು ಮಾತ್ರ ಅಳವಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವತ್ತ ಗಮನ ಹರಿಸಬೇಕು “ಎಂದರು

ತಾ.ಪA ಸದಸ್ಯ ಜಗನ್ನಾಥ ನಾಯ್ಕ ಮಾತನಾಡಿ,” ಲ್ಯಾಪ್ ಟಾಪ್ ಒಂದು ಬಗೆಯ ನೋಟದ ಮನೆಯಿದ್ದಂತೆ. ಇದರ ಮೂಲಕ ಸಮಾಜವನ್ನು ತಿದ್ದುವ ಕೆಲಸ ವಾಗುವುದು ಬೇಡ. ಇತ್ತೀಚೆಗೆ ಕೆಲವರು ಮೊಬೈಲ್ ಸಮಾಜ ಸುಧಾರಕರು ಹುಟ್ಟಿಕೊಂಡಿದ್ದಾರೆ. ವೈಯಕ್ತಿಕವಾಗಿ ನಾವೆಷ್ಟು ಸರಿಯಾಗಿ ಇದ್ದೇವೆ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ನಿಮ್ಮ ಉದ್ಧಾರಕ್ಕಾಗಿ ಅದನ್ನು ಉಪಯೋಗಿಸಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಈ ಲ್ಯಾಪ್ ಟಾಪ್ ಉಪಯೋಗವಾಗಬೇಕು “ಎಂದರು. ನಾಗರಾಜ ಬಿ ಸ್ವಾಗರಿಸಿದರು. ವಿದ್ಯಾರ್ಥಿನಿಯರಾದ ಸ್ವಾತಿ ನಾಯ್ಕ ಹಾಗೂ ವೈಶಾಲಿ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ.ಗಂಗರಾಜು.ಎಸ್ ಪ್ರಾಸ್ತಾವಿಸಿದರು. ಡಿ.ಎಸ್.ದೊಡ್ಮನೆ ವಂದಿಸಿದರು.

ಈ ಸಂಧರ್ಭದಲ್ಲಿ ಬಾಡ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ದತ್ತಾ ಪಟಗಾರ, ಉಪಾಧ್ಯಕ್ಷ ರವಿ ನಾಯ್ಕ, ಸಿ.ಡಿ.ಸಿ ಸದಸ್ಯರಾದ ಎಸ್.ಎಸ್.ಹೆಗಡೆ, ಉಮೇಶ ದೇಶಭಂಡಾರಿ, ಶಾಂತಾರಾಮ, ಗ್ರಾ.ಪಂ ಸದಸ್ಯ ಹರೀಶ ನಾಯ್ಕ, ರಾಮ ಮಡಿವಾಳ, ಬಿ.ಡಿ.ಪಟಗಾರ ಸೇರಿದಂತೆ ಇತರರು ಇದ್ದರು.

error: