ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸರಕಾರಿ ಪ್ರೌಢ ಶಾಲೆ ರಬಕವಿಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರಣಿಸುವುದರ ಮೂಲಕ ಎಲ್ಲ ಅತಿಥಿ ಮಹೋದಯರು ಉದ್ಘಾಟಿಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಎಸ್.ಬಿ.ಮಟೋಳಿ ಮಾತನಾಡಿ ಭಾಷೆಯ ಬಗ್ಗೆ ಮಡಿವಂತಿಕೆಯನ್ನಿಟ್ಟುಕೊಳ್ಳದೆ ಎಲ್ಲಾ ಭಾಷೆಯನ್ನೂ ಪ್ರಿ?ತಿಸಿ, ಗೌರವಿಸಬೇಕು. ಆದರೆ, ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಬೇಕು, ನಾಡಿನಲ್ಲಿ ಕನ್ನಡ ಭಾಷೆ ಮೇಲೆ ಎಲ್ಲ ಕಡೆಯಿಂದಲೂ ಒತ್ತಡ ಇದೆ. ಪ್ರತಿಯೊಬ್ಬರಿಗೂ ಕನ್ನಡದ ನೆಲ, ಜಲ, ಭಾಷೆ ಬಗ್ಗೆ ಅಭಿಮಾನವಿರಬೇಕು. ಸ್ವಾಭಿಮಾನಿ ಕನ್ನಡಿಗರಾಗಬೇಕು. ಮಾತೃಭಾಷೆಯ ಮೂಲಕ ನಾವು ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಲು ಸಾಧ್ಯ. ಕಲಿಕೆಗೆ ಹಾಗೂ ಓದುವಿಗೆ ಯಾವುದೇ ವಯಸ್ಸು ಇಲ್ಲ. ವಿದ್ಯಾರ್ಥಿಗಳು ಸದಾ ಪುಸ್ತಕಗಳನ್ನು ಓದುವದರಿಂದ ತಮ್ಮ ಅರಿವಿನ ಹಾಗೂ ಜ್ಞಾನದ ಮಟ್ಟವನ್ನು ಹೆಚ್ಚಸಿಕೊಳ್ಳಲು ಸಾಧ್ಯ. ಕನ್ನಡ ಭಾಷೆಯ ಬಗ್ಗೆ ಕೀಳಿರಿಮೆ ಬೇಡ. ಭಾಷೆಯನ್ನು ಮೊದಲು ಪ್ರೀತಿಸಿ ಬೆಳಸೋಣವೆಂದು ಹೇಳಿದರು.
ಜಾನಪದ ಕಲಾವಿದರಾದ ಶ್ರೀಕಾಂತ ಕೆಂಧೂಳಿ ಅವರು ಮಾತನಾಡಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಜನಪದವೇ ಮೂಲ ಆಧಾರ. ಜನಪದ ಕನ್ನಡ ನಾಡಿನ ಸಂಸ್ಕೃತಿಯ ಪ್ರತಿಬಿಂಬ ಎಂದು ಹೇಳಿ ಜನಪದ ಹಾಡುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.
ರಬಕವಿ-ಬನಹಟ್ಟಿಯ ನಗರಸಭಾ ಸದಸ್ಯರಾದ ಸಂಜಯ ತೆಗ್ಗಿಯವರು ಮಾತನಾಡಿ ಎಲ್ಲ ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಮುಂದಿನ ದಿನಗಳಲ್ಲಿ ಸೈನಿಕರಾಗಿ ದೇಶಸೇವೆ ಸಲ್ಲಿಸುವಂತೆ ತಿಳಿಸಿದರು.
ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಬಾಬು ಡಿ.ಎನ್ ಅವರು ಮಾತನಾಡಿ ನಮ್ಮ ಶಾಲೆಯು ಪ್ರತಿವರ್ಷ ಪ್ರಗತಿ ಸಾಧಿಸುತ್ತಿದೆ,ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಹಾಗೂ ಶಾಲಾ ಸಾಧನೆ ಬಗ್ಗೆ ತಿಳಿಸಿದರು. . ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಶಾಲೆಯ ವತಿಯಿಂದ ಸನ್ಮಾನ ಮಾಡಲಾಯಿತು. ಶಿಕ್ಷಕರಾದ ಬಿ.ಎಸ್.ಪಾಟೀಲ ಶಾಲಾ ವರದಿವಾಚನ ಮಾಡಿದರು, ಸದಾಶಿವ ತಳಗೇರಿ ಗುರುಗಳು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು, ಎ.ಎ.ಅವಟೆ ಶಿಕ್ಷಕರು ನಗದು ಬಹುಮಾನಗಳನ್ನು ವಿತರಿಸಿದರು, ವಿದ್ಯಾರ್ಥಿಗಳಾದ ಅಮೃತಾ ಹಾದಿಮನಿ, ಸಂದೀಪ ಸಿಕ್ಕಲಗಾರ, ಲಕ್ಷ್ಮೀ ನಂದಿ ಇವರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು ಜೊತೆಗೆ ಶಿಕ್ಷಕರ ವತಿಯಿಂದ ಪಾಟೀಲ ಗುರುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಶೈಲ ದಲಾಲ ಹಾಗೂ ಸದಸ್ಯರು, ಗಣ್ಯರಾದ ಮಹಾದೇವ ಧೂಪದಾಳ, ಬಸವರಾಜ ಹನಗಂಡಿ, ಪ್ರಕಾಶ ಕುಂಬಾರ, ಚಿದಾನಂದ ಸೊಲ್ಲಾಪೂರ, ಯಶವಂತ ವಾಜಂತ್ರಿ, ಶಾಲೆಯ ಸಹಶಿಕ್ಷಕರಾದ ಆಯ್.ಬಿ.ತೇರಣಿ, ಬಿ.ಎಸ್.ಪಾಟೀಲ, ಎಮ್.ಆರ್.ಬಿದರಿ, ಮಹಾಂತಮ್ಮ ಹೆಚ್.ಬಿ, ಸದಾಶಿವ ತಳಗೇರಿ ಹಾಗೂ ಅನಿಲ ಅವಟೆ, ಊರಿನ ಗಣ್ಯರು, ಹಿರಿಯರು, ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಲಕ್ಷ್ಮೀ ಖವಾಸಿ ಪ್ರಾರ್ಥಿಸಿದಳು, ಬಿ.ಎಸ್. ತೇರಣಿ ಅತಿಥಿಗಳನ್ನು ಸ್ವಾಗತಿಸಿದರು.ಎಂ.ಆರ್.ಬಿದರಿ ನಿರೂಪಿಸಿದರು, ಬಿ.ಎಸ್ ಪಾಟೀಲ ವಂದಿಸಿದರು.
ವರದಿ : ರಮೇಶ ಇಟಗೋಣಿ
ರಬಕವಿ-ಬನಹಟ್ಟಿ
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.