June 15, 2024

Bhavana Tv

Its Your Channel

ಕೃಷಿ ಮತ್ತು ರಂಗಭೂಮಿ ಚಟುವಟಿಕೆ ಎರಡರಲ್ಲೂ ಸೈ… ನಮ್ಮ ಮಾಂಬಳ್ಳಿ ಸ್ವಾಮಿಗೌಡ್ರು…ಗೌಡರ ಸಾಧನೆಗೆ ಒಲಿದು ಬಂತು ಗೌರವ ಡಾಕ್ಟರೇಟ್ ಪದವಿ…

ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಾಂಬಳ್ಳಿ ಗ್ರಾಮದ ಪ್ರಗತಿಪರ ರೈತರಾದ ಸ್ವಾಮಿಗೌಡರು ಕೃಷಿ ಚಟುವಟಿಕೆ ಹಾಗೂ ರಂಗಭೂಮಿಯಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ಗ್ಲೋಬಲ್ ಪೀಸ್ ಯೂನಿವರ್ಸಿಟಿಯು ನೀಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ ….

ತಮ್ಮ ಸಾಧನೆಯನ್ನು ಗುರುತಿಸಿ ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿರುವುದಕ್ಕೆ ಪುಳಕಿತರಾಗಿರುವ ಗೌಡರು ತಮ್ಮ ಈ ಸಾಧನೆಗೆ ಕನ್ನಡದ ವರನಟ, ನಟಸಾರ್ವಭೌಮ ಡಾ.ರಾಜಕುಮಾರ್ ಅವರೇ ಕಾರಣ ಎಂದು ಭಾವುಕರಾಗುತ್ತಾರೆ….

ಕನ್ನಡದ ವರನಟ, ಅಭಿನಯ ಚಕ್ರವರ್ತಿ ಡಾ.ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ ಕೃಷಿಕನಾಗಿ ಪ್ರಗತಿಪರ ರೈತನಾದ ನಾನು ಬಬ್ರುವಾಹನ, ಭಕ್ತಪ್ರಹ್ಲಾದ, ಭಕ್ತಕುಂಬಾರ, ಕವಿರತ್ನಕಾಳಿದಾಸ ಸಿನಿಮಾಗಳನ್ನು ನೋಡಿ ರಂಗಕಲಾ ಚಟುವಟಿಕೆಗಳತ್ತ ಮುಖಮಾಡಿದೆ…ಅಂದಿನಿಂದ ಇಂದಿನವರೆಗೂ ನೂರಾರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ …ತಾಲ್ಲೂಕು ಆಡಳಿತ ನೀಡುವ ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಜಯಕರ್ನಾಟಕ ಸಂಘನೆ, ಕರವೇ, ಪತ್ರಕರ್ತರ ಸಂಘ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಒಲಿದು ಬಂದಿದ್ದರೂ ಗ್ಲೋಬಲ್ ಪೀಸ್ ಯೂನಿವರ್ಸಿಟಿಯು ನನ್ನಂತ ಒಬ್ಬ ಗ್ರಾಮೀಣ ಭಾಗದ ರೈತನಿಗೆ ನೀಡಿದ ಗೌರವ ಡಾಕ್ಟರೇಟ್ ಪದವಿಯು ಭಾರೀ ಸಂತೋಷ ನೀಡಿದೆ…ನನ್ನ ಜೀವನವು ಕಲಾಸೇವೆ, ರಂಗಭೂಮಿ ಹಾಗೂ ಕೃಷಿಗೆ ಮೀಸಲಾಗಿದೆ…

ನಾನೊಬ್ಬ ರೈತ ಎನ್ನಲು ನನಗೆ ಅಭಿಮಾನ ಹೆಚ್ಚಿದೆ ಎಂದು ಮಾಂಬಳ್ಳಿ ಸ್ವಾಮಿಗೌಡ್ರು ಹೇಳಿದ್ದು ಅವರ ತನ್ಮಯತೆ ಹಾಗೂ ಸಾಧಿಸುವ ಛಲಕ್ಕೆ ಸೆಲ್ಯೂಟ್ ನೀಡುವ ಮನಸ್ಸಾಗಿದೆ…
ಸ್ವಾಮಿಗೌಡರಿಗೆ ಶುಭವಾಗಲಿ… ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಗೌಡರಿಗೆ ದೊರೆಯಲಿ ಎಂದು ಶುಭ ಹಾರೈಸಲಾಯಿತು….
ವಿಶೇಷ ವರದಿ…ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ …

error: