April 20, 2024

Bhavana Tv

Its Your Channel

ಗಂಜಿಗೆರೆಕೊಪ್ಪಲು ಗ್ರಾಮದ ದೇವಿಕೆರೆಯ ಹೂಳೆತ್ತುವ ಕಾರ್ಯ ಪ್ರಗತಿಪಥದಲ್ಲಿ. …

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಊರು ನಮ್ಮಕೆರೆ ಕಾರ್ಯಕ್ರಮದ ಅಡಿಯಲ್ಲಿ ಜನಸಾಮಾನ್ಯರಿಗೆ ಜಲಸಾಕ್ಷರತೆ ಹಾಗೂ ಕೆರೆಕಟ್ಟೆಗಳ ಉಳಿವು ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 10ಲಕ್ಷರೂಪಾಯಿಗಳ ವೆಚ್ಚದಲ್ಲಿ ದೇವಿಕೆರೆಯ ಹೂಳನ್ನು ತೆಗೆಸಿ ಮಳೆಯ ನೀರು ಹಾಗೂ ಹೇಮಾವತಿ ಜಲಾಶಯದ ಕಾಲುವೆಯ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚಿಸಲು, ಜನಸಾಮಾನ್ಯರು, ರೈತಬಾಂಧವರು ಹಾಗೂ ಪಶುಪಕ್ಷಿಗಳು, ಜನಜಾನುವಾರುಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಗಂಜಿಗೆರೆ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಶ್ಲಾಘಿಸಿದ್ದಾರೆ….

7ನೇ ದಿನದ ಹೂಳೆತ್ತುವ ಕೆಲಸದಲ್ಲಿ ಮೂರು ಜೆಸಿಬಿ ಯಂತ್ರಗಳು, ನಾಲ್ಕೈದು ಟಿಪ್ಪರ್ ಗಳು ಹಾಗೂ 25ಕ್ಕೂ ಹೆಚ್ಚಿನ ಟ್ರ್ಯಾಕ್ಟರ್ ಗಳು ಭಾಗವಹಿಸಿವೆ ಈವರೆಗೆ ಕೇವಲ 80ಸಾವಿರ ರೂಪಾಯಿ ಹಣವು ಖರ್ಚಾಗಿದ್ದು ಇನ್ನೂ 9ಲಕ್ಷದ.20ಸಾವಿರ ರೂಗಳ ಕೆಲಸವಾಗುವುದು ಬಾಕಿಯಿದ್ದು, ಸರ್ಕಾರಿ ಕೆಲಸದ ಪ್ರಜಾರ 10ಲಕ್ಷ ರೂ ವೆಚ್ಚದಲ್ಲಿ ಕನಿಷ್ಠ 80ಲಕ್ಷರೂಗಳ ಕಾಮಗಾರಿಯು ನಡೆಯುವ ವಿಶ್ವಾಸವಿದೆ ಎಂದು ಸಂಸ್ಥೆಯ ಕೃಷಿಅಧಿಕಾರಿ ನಿಂಗಪ್ಪ ಅಗಸರ್ ತಿಳಿಸಿದರು…ಕೆರೆಯ ಫಲವತ್ತಾದ ಹೂಳು ಹಾಗೂ ಗೊಬ್ಬರ ಮಿಶ್ರಿತ ಮಣ್ಣನ್ನು ರೈತಬಾಂಧವರು ಪೈಪೋಟಿಯ ಮೇರೆಗೆ ತಮ್ಮ ಜಮೀನುಗಳು ಹಾಗೂ ತೋಟಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ…

ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ.

error: