September 14, 2024

Bhavana Tv

Its Your Channel

ಆದಿಹಳ್ಳಿ ಗೇಟ್ ಬಳಿಯಿರುವ ಸೋಗೆಗರಿ ಗುಡಿಸಲು ಹೋಟೆಲ್ ಗೆ ಕಿಡಿಗೇಡಿಗಳಿಂದ ಬೆಂಕಿ

ಕೃಷ್ಣರಾಜಪೇಟೆ ತಾಲೋಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗೇಟ್ ಬಳಿ ಮಾಳಗೂರು ಗ್ರಾಮದ ಮಂಜೇಗೌಡರವರಿಗೆ ಸೇರಿದ ಈ ಸೋಗೆಗರಿ ಗುಡಿಸಲು ಹೋಟೆಲ್ ಇಲ್ಲಿ ಬಡವರಿಂದ ಇಡಿದು ಶ್ರೀಮಂತರು ಕೂಡ ಈ ಹೋಟೆಲನ್ನು ಉಪಯೋಗಿಸುತ್ತಿದ್ದರು. ಸುತ್ತ ಮುತ್ತಲ ಪ್ರದೇಶದಲ್ಲಿ ಕಡಿಮೆ ಹಣಕ್ಕೆ ಊಟ ತಿಂಡಿ ಕೊಡುತ್ತಿದ್ದ ಮಂಜೇಗೌಡರ ಈ ಹೋಟೆಲ್ ತುಂಬಾ ಫೇಮಸ್ ಬೆಳಿಗ್ಗೆ ಇಡ್ಲಿ ಮದ್ಯಾನ ಬಿಸಿ ಬಿಸಿ ಊಟ ದೊರೆಯುತ್ತಿತ್ತು ಸುಮಾರು 30 ವರ್ಷಗಳಿಂದಲೂ ಕೂಡ ಹೋಟೆಲ್ ಇತ್ತು.
ಮಂಜೇಗೌಡರಿಗೆ ಈ ಹೋಟೆಲ್ ನಿಂದ ತನ್ನ ಜೀವನವನ್ನೇ ನಡೆಸುತಿದ್ದರು ಇಂದು ರಾತ್ರಿ ಸುಮಾರು 7:30ರಲ್ಲಿ ಯಾರೋ ದುಷ್ಕರ್ಮಿಗಳು ಬೆಂಕಿ ಇಟ್ಟು ಸರ್ವನಾಶ ಮಾಡಿದ್ದಾರೆ ಇದೆ ಮೊದಲಲ್ಲ ಇದಕ್ಕೂ ಮೊದಲು ಮೂರ್ನಾಲ್ಕು ಬಾರಿ ಬೆಂಕಿಯನ್ನು ಹಚ್ಚಿದ್ದಾರೆ ಸುಮಾರು ದಿನಸಿ ಹಾಗೂ ದಿನನಿತ್ಯ ಉಪಯೋಗಿಸುವ ವಸ್ತುಗಳು ಸುಟ್ಟು ಕರುಕಲಾಗಿವೆ.
ದಾರಿಹೋಕರು ಇದನ್ನು ನೋಡಿ ವಿಷಯವನ್ನು ಮಂಜೇಗೌಡರಿಗೆ ತಿಳಿಸಿದ್ದಾರೆ. ನಂತರ ಬಂದು ನೋಡುವಷ್ಟರಲ್ಲಿ ಜೀವನಾಧಾರವಾದ ಹೋಟೆಲ್ ತನ್ನ ಕಣ್ಣೆದುರಿನಲ್ಲಿಯೇ ಸುಟ್ಟು ಕರಕಲಾಗಿರುವುದನ್ನು ಕಂಡು
ತನ್ನ ನೋವನ್ನು ತಾಳಲಾರದೆ ಕುಸಿದು ಬಿದ್ದ ಘಟನೆ ನಡೆದಿದೆ….
ಸ್ಥಳಕ್ಕೆ ಸಂತೇಬಾಚಹಳ್ಳಿ ಪೊಲೀಸ್ ಹೊರ ಠಾಣೆಯ ಸಿಬ್ಬಂದಿಗಳಾದ ಮುಖ್ಯಪೇದೆ ಮಹೇಶ್ ಮತ್ತು ಪೇದೆ ಕುಮಾರ್ ಪರಿಶೀಲನೆ ನಡೆಸಿದ್ದಾರೆ.

ವರದಿ ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ .

error: