June 15, 2024

Bhavana Tv

Its Your Channel

ಲಲಿತ ಕಲೆಗಳಿಂದ ಸಂಸ್ಕಾರ ಸಾಧ್ಯ, ಮಂಕಾಳ ವೈದ್ಯ

ಭಟ್ಕಳ : ಶಾಸ್ತಿçÃಯ ನೃತ್ಯ ಸಂಗೀತಗಳು ಮಕ್ಕಳ ಮನಸ್ಸಿನಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿ ಮನಸ್ಸು ಒಂದೆಡೆ ಕೇಂದ್ರಿಕೃತಗೊಳಿಸುತ್ತದೆ ಹಾಗೂ ಉತ್ತಮ ಸಂಸ್ಕಾರವನ್ನು ಕೊಡುತ್ತದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.

ಅವರು ಭಟ್ಕಳದ ನಾಗಯಕ್ಷೆ ಸಭಾಭವನದಲ್ಲಿ ಝೇಂಕಾರ ಆರ್ಟ ಅಸೊಸಿಯೇಶನ್ ಇವರ ಕಲಾ ಉತ್ಸವ ೨೦೨೦ ಉದ್ಧಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ ಮಾತನಾಡುತ್ತಾ ಒತ್ತಡ ರಹಿತವಾಗಿ ಜೀವನ ಸಾಗಿಸಲು ಲಲಿತ ಕಲೆಗಳನ್ನು ಮೈಗೊಡಿಸಿಕೊಳ್ಳುವಂತೆ ಕರೆನೀಡಿದರು. ನಾಗಯಕ್ಷೆ ಸಭಾಗ್ರಹದ ಧರ್ಮದರ್ಶಿ ರಾಮದಾಸ ಪ್ರಭು ಮಾತನಾಡುತ್ತಾ ಶಾಸ್ತಿçÃಯತೆಯ ಬೀಜವನ್ನು ಬಿತ್ತಿ ಅದನ್ನು ಹೆಮ್ಮರವಾಗಿ ಬೆಳೆಸುತ್ತಿರುವ ಝೇಂಕಾರ ಕುಟುಂಬದ ಕಾರ್ಯ ಶ್ಲಾಘನಾರ್ಹ ಎಂದರು. ಖ್ಯಾತ ಹಿರಿಯ ತಬಲ ಮಾಂತ್ರಿಕ ಎನ್.ಎಸ್.ಹೆಗಡೆ. ಹೀರೆಮಕ್ಕಿ ಇವರ ಸಾಧನೆಗಾಗಿ ಝೇಂಕಾರ ಕಲಾಶ್ರೀ ೨೦೨೦ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಚಿತ್ರಕಲೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಝೇಂಕಾರ ಸಂಸ್ಥೆಯ ವಿದ್ಯಾರ್ಥಿ ಶಶಾಂಕ ಗಣೇಶ ಹೆಬ್ಬಾರನನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಸಭಾಧ್ಯಕ್ಷೀಯ ನುಡಿಗಳನ್ನಾಡಿ ಸಂಸ್ಥೆಯ ಸಾಧನೆಯನ್ನು ವಿವರಿಸಿ ಪಾಲಕರ ಸಹಕಾರವನ್ನು ಸ್ಮರಿಸಿದರು. ನೃತ್ಯ ವಿದೂಷಿ ನಯನಾ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ವಾಚಿಸಿದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭೆಯ ನಂತರ ಕರ್ಣಾಟಕ ಸಂಗೀತ, ಭರತನಾಟ್ಯ ಹಾಗೂ ಚಿಣ್ಣರ ರಸಮಂಜರಿ ಕಾರ್ಯಕ್ರಮ ಜರುಗಿತು.

error: