April 3, 2025

Bhavana Tv

Its Your Channel

ಗುರುವಾರ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ

ಭಟ್ಕಳ : ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಇದೇ ಬರುವ ೧೮ನೇ ತಾರೀಖಿನ ಗುರುವಾರದಂದು ನಡೆಯಲಿದೆ. ಆ ದಿನ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ನಡೆಯಲಿದೆ.ಪಲ್ಲಕ್ಕಿ ಉತ್ಸವದ ಮೆರವಣಿಗೆ ದೇವಾಲಯದಿಂದ ಹೊರಟು, ರಘುನಾಥ ರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ಹೋಗಿ ಅಲ್ಲಿಂದ ಹಿಂದಿರುಗಿ, ವೀರವಿಠ್ಠಲ ರಸ್ತೆಯ ಮಾರ್ಗವಾಗಿ ವಡೇರ ಮಠದ ಮೂಲಕ ನೆಹರು ರಸ್ತೆ ಅಲ್ಲಿಂದ ಹೂವಿನ ಚೌಕ- ಮುಖ್ಯರಸ್ತೆಯ ಮೂಲಕ ಮಾರಿಗುಡಿಯ ಮೂಲಕ ಜೈನ ಬಸದಿಯ ಎದುರಿನ ರಸ್ತೆಯ ಮೂಲಕ ಆಸರಕೇರಿ, ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯ ಅಲ್ಲಿಂದ ಸೊನಾರಕೇರಿಯ ಮೂಲಕ ಶಹರ ಪೋಲೀಶ ಠಾಣೆಯಲ್ಲಿ ಪೂಜೆ ಸ್ವೀಕರಿಸಿ ಮುಖ್ಯ ರಸ್ತೆಯ ಮೂಲಕ ಹಳೆಬಸ್ ನಿಲ್ದಾಣ ಅಲ್ಲಿಂದ ಕಳಿ ಹನುಮಂತ ರಸ್ತೆಯ ಮೂಲಕ ದೇವಾಲಯವನ್ನು ತಲುಪಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ ಸದ್ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುವಂತೆ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ

error: