April 3, 2025

Bhavana Tv

Its Your Channel

ಅಪರಿಚಿತ ವಾಹನ ಬಡಿದು ಪಾದಚಾರಿ ಸಾವು; ಮೃತ ಪಟ್ಟ ವ್ಯಕ್ತಿ ಸೈಯದ್ ಆಸೀಫ್

ಭಟ್ಕಳ: ತಾಲ್ಲೂಕಿನ ಕಾಮಾಕ್ಷಿ ಪೆಟ್ರೋಲ್ ಬಂಕ್ ಎದುರಿಗೆ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ರಸ್ತೆ ಮೇಲೆ ನಡೆದುಕೊಂಡು ಬರುತ್ತಿದ್ದ ಸೆಕ್ಯುರಿಟಿ ಗಾರ್ಡ್ ಓರ್ವ ನಿಗೆ ಅಪರಿಚಿತ ವಾಹನ ಬಡಿದು ಸ್ಥಳದಲ್ಲಿ ಮೃತ ಪಟ್ಟ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೃತ ಪಟ್ಟ ವ್ಯಕ್ತಿ ಸೈಯದ್ ಆಸೀಫ್ ತಂದೆ ಮೀರಾಸಾಬ್ ೬೫ ವರ್ಷ ಜಾಲಿ ದೇವಿನಗರ ನಿವಾಸಿ ಆಗಿದ್ದು. ಶಿರಾಲಿ ದಿಂದ ಕುಂದಾಪುರ ಕಡೆಗೆ ಅಪರಿಚಿತ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೂಂಡು ಹೋಗುತ್ತಾ ಶಿರಾಲಿ ಬದಿಯಿಂದ ಭಟ್ಕಳ ಸಂಶುದ್ದೀನ್ ಸರ್ಕಲ್ ಕಡೆಗೆ ನಡೆದುಕೊಂಡು ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಆರೋಪಿ ಚಾಲಕ ನಾಪತ್ತೆ ಯಾಗಿದ್ದಾನೆ.ಈ ಬಗ್ಗೆ ಮುಹಮ್ಮದ್ ಶಫಿ ತಂದೆ ಹಸನ ಸಾಬ್,ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: