April 4, 2025

Bhavana Tv

Its Your Channel

ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ ಚಿನ್ನ ಮಂಗಳೂರಿನಲ್ಲಿ ಪತ್ತೆ: ಮುರುಡೇಶ್ವರ ಮೂಲದ ಆರೋಪಿ ಬಂಧನ

ಮಂಗಳೂರು : ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಒಬ್ಬನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈತನಿಂದ 16,52,000 ರೂಪಾಯಿ ಮೌಲ್ಯದ 350 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಕರ್ನಾಟಕದ ಮುರುಡೇಶ್ವರ ಮೂಲದ ಮೊಹಮ್ಮದ್ ಅವಾನ್ ಎಂದು ಗುರುತಿಸಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಆಗಮಿಸಿದ ಮೊಹಮ್ಮದ್ ಅವಾನ್, ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಮರೆ ಮಾಚಿ ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾನೆ. ಮೊಹಮ್ಮದ್ ಅವಾನ್, ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿದ್ದ. ಗುಪ್ತಚರ ಮಾಹಿತಿ ಆಧರಿಸಿ, ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಉಪ ಆಯುಕ್ತ ಡಾ.ಕಪಿಲ್ ಗಡೆ ತಿಳಿಸಿದ್ದಾರೆ.
ಆರೋಪಿಯಿಂದ ರೂ .16,52,000 ಮೌಲ್ಯದ 350.00 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಮೊಹಮ್ಮದ್ ಅವಾನ್‌ನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನ ನಡೆಸುತ್ತಿದ್ದಾರೆ

error: