ಕುಮಟಾ:
ಭವಿಷ್ಯದ ಪೀಳಿಗೆಯಲ್ಲಿ ದೇಶಾಭಿಮಾನ ಮೂಡಿಸುವ ಕಾರ್ಯ ಮಹತ್ವದ್ದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು. ಅವರು ಗುರುವಾರ ಕುಮಟಾದ ಗಿಬ್ ಬುರ್ಡೇಕರ ಹಾಲ್ನಲ್ಲಿ ಆಯೋಜಿಸಲಾಗಿದ್ದ ಭಾರತ ಸೇವಾದಲದ ನಾಯಕ ನಾಯಕಿಯರ ಮಿಲಾಫ್ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ದೇಶಕಟ್ಟುವ ಸತ್ಪ್ರಜೆಗಳಾಗಿ ನಿರ್ಮಿಸುವ ಉನ್ನತ ಧ್ಯೇಯ ಭಾರತ ಸೇವಾದಲದಲ್ಲಿದೆ ಎಂದರು.
ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ, ಸೂರ್ತಿ ತುಂಬಿ ಸೇವೆಯ ಎಲ್ಲ ಮಜಲುಗಳನ್ನು ಕಲಿಸುವ ಕೆಲಸ ನಡೆಯಲಿ ಎಂದರು.
ವೇದಿಕೆಯಲ್ಲಿ ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕ, ಪುರಸಭೆಯ ಸದಸ್ಯೆ ಸುಶೀಲಾ ಜಿ. ನಾಯ್ಕ, ಸೇವಾದಲದ ಉಪಾಧ್ಯಕ್ಷ ಸಂತೋಷ ನಾಯ್ಕ, ಚಿದಾನಂದ ನಾಯ್ಕ, ಬಿಇಓ ರಾಜೇಂದ್ರ ಭಟ್, ಬಿಆರ್?ಸಿ ರೇಖಾ ನಾಯ್ಕ, ನಿವೃತ್ತ ಸೈನಿಕ ನಾಗೇಶ ಎನ್. ಪಟಗಾರ, ನಾರಾಯಣ ಗಾಂವಕರ ಇನ್ನಿತರರು ಇದ್ದರು.
ಡಿ.ಜಿ.ನಾಯ್ಕ ಪ್ರಾರ್ಥಿಸಿದರು. ಅಶ್ವಿನಿ ಆಯಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ನಾಯ್ಕ ನಿರೂಪಿಸಿದರು. ರಮೇಶ ನಾಯ್ಕ ಸ್ವಾಗತಿಸಿ, ವಂದಿಸಿದರು. ಶೈಲಾ ಗುನಗಿ ಸಹಕರಿಸಿದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.