December 22, 2024

Bhavana Tv

Its Your Channel

ಶಿರಾಲಿ ಗ್ರಾಮ ಪಂಚಾಯತ್ ಜಿಲ್ಲಾ ಪಿಶ್ ಪೆಡರೆಷನ್ ಅಧ್ಯಕ್ಷ ಗಣಪತಿ ಮಾಂಗ್ರೆಯವರೊoದಿಗೆ ಸಂಧಾನ ಸಭೆ

ಶಿರಾಲಿ ;ಭಟ್ಕಳ ತಾಲೂಕ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಮೀನು ಮಾರಟಗಾರರ ಮೇಲಾಗುತ್ತಿರುವ ದೌರ್ಜನ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಪಿಶ್ ಪೇಡರೇಶನ್ ಅಧ್ಯಕ್ಷರಾದ ಗಣಪತಿ ಮಾಂಗ್ರೆಯವರ ಮುಂದಾಳತ್ವದಲ್ಲಿ ಸಂದಾನ ಸಭೆಯನ್ನು ಹಮ್ಮಿಕೊಳ್ಳಲಾಯಿತು

ಹಲವಾರು ತಿಂಗಳುಗಳಿAದ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಮಿನು ಮಾರುಕಟ್ಟೆಯ ಪಕ್ಕದಲ್ಲಿ ಖಾಸಗಿ ಪುರುಷನೊರ್ವನು ಅನಧಿಕ್ರತವಾಗಿ ಮೀನು ಮಾರಾಟಮಾಡುವುದರ ಮಹಿಳಾ ಮೀನು ಮಾರಾಟಗಾರರಿಗೆ ತೊಂದರೆಯನ್ನು ನಿಡುತ್ತಿದ್ದನು ಈ ಹಿನ್ನೆಲೆಯಲ್ಲಿ ಮಹಿಳಾ ಮೀನು ಮಾರಾಟಗಾರರು ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದ ಮೂಲಕ ಪ್ರತಿಭಟನೆಗೆ ಇಳಿದಿದ್ದರು ಆದರೆ ಗ್ರಾಮ ಪಂಚಾಯತ್ ಯಾವುದೆ ಪ್ರತಿಕ್ರಿಯೆ ತೊರದೆ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಕೈ ಹಾಕಿತ್ತು ಇದನ್ನು ಮನಗಂಡ ಜಿಲ್ಲಾ ಪಿಶ್ ಪೇಡರೇಶನ್ ಅಧ್ಯಕ್ಷರಾದ ಗಣಪತಿ ಮಾಂಗ್ರೆಯವರು ಮಹಿಳಾ ಮೀನು ಮಾರಾಟಗಾರರ ಪರ ಸಂದಾನ ಸಭೆಯನ್ನು ನಡೆಸಿದರು
ಈ ಸಂದರ್ಬದಲ್ಲಿ ಮಾದ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಇಲ್ಲಿ ನಿಜಕ್ಕೂ ಮಹಿಳಾ ಮೀನು ಮಾರಾಟಗಾರರಿಗೆ ತೊಂದರೆ ಯಾಗುತ್ತಿದೆ ಖಾಸಗಿ ವ್ಯಕ್ತಿಯೊರ್ವನು ಅನದಿಕ್ರತವಾಗಿ ಮೀನು ಮಾರಾಟ ಮಾಡುತ್ತಿದ್ದಾನೆ ಆದರೆ ಈ ಬಗ್ಗೆ ಯಾವುದೆ ಅಧಿಕಾರಿ ಕ್ರಮ ಕೈಗೊಳ್ಳುತ್ತಿಲ್ಲಾ ಗ್ರಾಮ ಪಂಚಾಯತ್ ಈ ಹಿಂದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಲೂಕ ಪಂಚಾಯತ್ ಹಾಗು ತಾಲೂಕ ತಹಶಿಲ್ದಾರರಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು ಸಹ ಯಾರು ಕ್ರಮವನ್ನು ಕೈಗೊಂಡಿರುವುದಿಲ್ಲಾ. ಈಗ ನಮ್ಮ ಸಂಘಟನೆ ಗ್ರಾಮ ಪಂಚಾಯತ್ ಅಲ್ಲಿ ಸಭೆ ನಡೆಸಿ ಖಾಸಗಿ ವ್ಯಕ್ತಿಯ ಅಂಗಡಿ ತೆರವುಗೊಳಿಸುವುದಾಗಿ ತಿರ್ಮಾನ ಕೈಗೊಂಡಿರುತ್ತೆವೆ ಪಂಚಾಯತ್ ಮಂಗಳವಾರದ ವರೆಗಿನ ಸಮಯ ತೆಗೆದುಕೊಂಡಿದೆ ಅಲ್ಲಿಯವರೆಗೆ ಮಹಿಳಾ ಮಿನುಗಾರರು ತಮ್ಮ ಪ್ರತಿಭಟನೆಯನ್ನು ಕೈ ಬಿಡುತ್ತಾರೆ . ಎಂದು ಹೇಳಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಮಹಿಳಾ ಮೀನು ಮಾರಾಟಗಾರರು ಕೆಳುತ್ತಿರುವ ಬೇಡಿಕೆ ನ್ಯಾಯೊಚಿತವಾದದ್ದು ಈ ಬಗ್ಗೆ ನಾವು ಪೋಲಿಸ್ ಇಲಾಖೆಗೆ ತಿಳಿಸಿದ್ದೆವೆ ಆದರೆ ಇಲಾಖೆ ಸಮರ್ಥ ರೀತಿಯಲ್ಲಿ ಸಹಕರಿಸಲಿಲ್ಲಾ ನಾವು ಅನದಿಕ್ರತ ಮೀನು ಮಾರಾಟದ ಅಂಗಡಿಗೆ ಸಿಲ್ ಮಾಡಿದ್ದರು ಸಹ ಮೀನು ಮಾರಾಟ ಮಾಡುತ್ತಿದ್ದಾರೆ ಆದ್ದರಿಂದ ಪೋಲಿಸ್ ಇಲಾಖೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಹೇಳಿದರು

ಈ ಸಂರ್ಬದಲ್ಲಿ ವಿಠಲ್ ದೈ ಮನೆ, ರಾಮಾ ಮೊಗೇರ್, ಹಾಗು ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಮಹಿಳಾ ಮೀನು ಮಾರಾಟಗಾರರು ಉಪಸ್ಥಿತರಿದ್ದರು.

error: