November 30, 2023

Bhavana Tv

Its Your Channel

ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ ಅವರ ಕ್ಷೇಮ ಸಮಾಚಾರ ವಿಚಾರಿಸಿದ ಕ್ಷಣ.

ಭಟ್ಕಳ: ಆಕಸ್ಮಿಕವಾದ ಅವಘಡದಿಂದಾಗಿ ನೊಂದು ತೀವ್ರ ಸಂಕಷ್ಟದಲ್ಲಿರುವ ಹಿರಿಯ ಯಕ್ಷಗಾನ ಕಲಾವಿದ ಹಡಿನಾಬಾಲ ಶ್ರೀಪಾದ ಹೆಗಡೆ ಅವರ ಮನೆಗೆ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಪದಾಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಶೀಘ್ರ ಚೇತರಿಸಿಕೊಂಡು ಮತ್ತೆ ಪುನಃ ಯಕ್ಷಗಾನದಲ್ಲಿ ಅಭಿನಯಿಸುವಂತಾಗಲಿ ಎಂದು ಹಾರೈಸಿದರು. ನಂತರ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅವರಿಗೆ ೩೧ ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ನಿಮ್ಮೊಂದಿಗೆ ತಾವಿದ್ದೇವೆ ಎನ್ನುವ ಭರವಸೆಯನ್ನು ಮೂಡಿಸಿದರು.

error: