May 19, 2024

Bhavana Tv

Its Your Channel

ಶಾಸಕ ಸುನಿಲ್ ನಾಯ್ಕ ಉಚಿತ ಲಾಪ್‌ಟಾಪ್ ವಿತರಣಾ ಕಾರ್ಯಕ್ರಮ

ಭಟ್ಕಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲಾಪ್‌ಟಾಪ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಲಾಪ್‌ಟಾಪ್ ವಿತರಣೆ ಮಾಡಿ ಮಾತನಾಡಿದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುನಿಲ್ ನಾಯ್ಕ ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಸಾಕ್ಷರತೆ ಅತಿ ಮುಖ್ಯವಾಗಿದ್ದು ಪ್ರತಿಯೊಬ್ಬರೂ ಕೂಡಾ ಕಂಪ್ಯೂಟರ್ ಕಲಿಯುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಸ್ವಾಲಂಬನೆಯ ಬದುಕಿಗೆ ಸರಕಾರ ಉಚಿತವಾಗಿ ನೀಡುವ ಲಾಪ್‌ಟಾಪ್ ಸಹಕಾರಿಯಾಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರ ಪರಿಣಾಮಕಾರಿಯಾಗಿ ಶಿಕ್ಷಣವನ್ನು ನೀಡುವ ಯೋಜನೆಯಡಿಯಲ್ಲಿ ಲಾಪ್‌ಟಾಪ್ ವಿತರಿಸುತ್ತಿರುವುದಲ್ಲದೇ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದರು. ವಿದ್ಯಾರ್ಥಿಗಳು ಉತ್ತಮ ಕಲಿಕೆಯೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಂಡು ತಮ್ಮ ಕಾಲೇಜಿಗೆ ಹಾಗೂ ಪಾಲಕರಿಗೆ ಕೀರ್ತಿ ತರುವಂತಾಗಬೇಕು ಎಂದು ಕರೆ ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದಸ್ತಗೀರ್ ಹಲ್ಯಾಳ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಎಂ.ಆರ್.ನಾಯ್ಕ, ರವಿ ನಾಯ್ಕ ಜಾಲಿ ಮುಂತಾದವರು ಉಪಸ್ಥಿತರಿದ್ದರು. ವಾಣಿಜ್ಯ ಡಾ.ಅಬ್ದುಲ್ ಮಜೀದ್, ಎನ್.ಎಸ್.ಎಸ್.ಸಂಚಾಲಕಿ ಪ್ರೊ. ವೈಶಾಲಿ ಜಿ.ಆರ್., ಪ್ರೊ. ಅಶ್ವಿಜಾ, ಪ್ರೊ. ನೇತ್ರಾವತಿ ನಾಯ್ಕ, ನಿಂಗಪ್ಪ ಗೋಟೂರು ಸಹಕರಿಸಿದರು.
ಕಾಲೇಜಿನ ಗ್ರಂಥಪಾಲಕ ನರಸಪ್ಪ ಕೆ.ಸಿ. ಸ್ವಾಗತಿಸಿದರು. ಪ್ರೊ. ಪ್ರೇಮಾ ಆಚಾರಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಮಾ ನಾಯ್ಕ ವಂದಿಸಿದರು.

error: