ಹೊನ್ನಾವರ ; ತಾಲೂಕಿನ ಸಾಲ್ಕೋಡ್ ಗ್ರಾಮದ ಅರೇಅಂಗಡಿಯಿAದ ಕೆರೆಕೋಣ ರಸ್ತೆ ಅಗಲೀಕರಣ ಹಾಗೂ ಅಠಾಠ ಸಮೀಪ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಸೋಮವಾರ ಗುದ್ದಲಿಪೂಜೆ ನೇರವೇರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಹಲವು ವರ್ಷದ ಬೇಡಿಕೆಯಾದ ಸೇತುವೆ ಕಾಮಗಾರಿ ೨೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ನನ್ನ ಅವಧಿಯಲ್ಲಿ ರಸ್ತೆ ಕುಡಿಯುವ ನೀರು ಹಾಗೂ ಸೇತುವೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಗ್ರಾಮದ ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಮುಂದಿನ ದಿನದಲ್ಲಿ ಹಲವು ರಸ್ತೆಗಳ ಡಾಂಬರಿಕರಣದ ಬಗ್ಗೆ ಮನವಿಗಳು ಬರುತ್ತಿದ್ದು ಹಂತಹAತವಾಗಿ ಎಲ್ಲಾ ಬೇಡಿಕೆಯನ್ನು ಈಡೇರಿಸುತ್ತೇನೆ. ಅಲ್ಲದೆ ಅರೆಂಅAಗಡಿಯಿAದ ಕೆರೆಕೋಣವರೆಗೆ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಗುದ್ದಲಿ ಪೂಜೆ ನೇರವೆರಿಸಿದ್ದು ೧ ಕೋಟಿ ೭೦ ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಮಳೆಗಾಲದಲ್ಲಿ ಈ ಭಾಗದ ಸಾರ್ವಜನಿಕರು ಓಡಾಡಲು ಸಂಕಷ್ಟಪಡುವುದನ್ನು ಗಮನಿಸಿ ರಸ್ತೆ ಮತ್ತು ಸೇತುವೆ ಅನುದಾನ ಸರ್ಕಾರದಿಂದ ಬಿಡುಗಡೆಮಾಡಿಸಲು ಪ್ರಯತ್ನಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಲಚಂದ್ರ ನಾಯ್ಕ, ಟಿ.ಎಸ್.ಹೆಗಡೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸುಬ್ರಹ್ಮಣ್ಯ ಶಾಸ್ತಿç, ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಮುಖಂಡರಾದ ಎಂ.ಎಸ್.ಹೆಗಡೆ ಕಣ್ಣಿ, ಜಿ.ಜಿ.ಭಟ್ ಬೊಳ್ಗರೆ, ಆರ್.ಎಂ.ಹೆಗಡೆ, ನಾರಾಯಣ ಹೆಗಡೆ, ಮೋಹನ ನಾಯ್ಕ, ಎಂ.ಎಸ್.ಹೆಗಡೆ, ಗಣಪತಿ ನಾಯ್ಕ ಪಿ.ಡಬ್ಲ್.ಡಿ ಅಧಿüಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.