ಕೋಲಾರ. ಜಿಲ್ಲೆಯ ಬಂಗಾರಪೇಟೆ ಹೊರವಲಯದ ಆನಂದಗಿರಿ ಬಳಿ ಇರುವ ಹನುಮಂತಪುರ ಸರ್ವೇ ನಂ. ೨೨ ರಲ್ಲಿ ಖಾಸಗೀ ಲೇ ಔಟ್ ನಿರ್ಮಾಣವಾಗಿದ್ದು ನಿರ್ಗತಿಕರಿಗೆ ನೀಡಬೇಕಾಗಿರುವ ಸುಮಾರು ಇಪ್ಪತ್ತು ಏಕರೆಯಷ್ಟು ಸರ್ಕಾರಿ ಜಮೀನನ್ನು ಅಕ್ರಮಿಸಿಕೊಳ್ಳಲಾಗಿದೆಯೆಂದೂ ಸದರೀ ಲೇ ಔಟ್ ನಲ್ಲಿ ಕರ್ನಾಟಕ ದಲಿತ ರೈತ ಸೇನೆ ಸಂಘಟನೆಗಳ ನೇತೈತ್ವದಲ್ಲಿ ನೂರಾರು ಜನ ರಾತ್ರಿ ಗುಡಿಸಲುಗಳನ್ನ ನಿರ್ಮಾಣ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಸಂಘಟನೆಗಳ ಮುಖ್ಯಸ್ಥರು ಇದು ಸರ್ಕಾರಿ ಜಮೀನು. ಇಲ್ಲಿ ಖಾಸಗೀ ಲೇ ಔಟ್ ನವರು ಅಕ್ರಮವಾಗಿ ಕಬಳಿಸಿ ಸುಮಾರು ೨೦ ಎಕರೆಯಷ್ಟು ಸರ್ಕಾರಿ ಗೋಮಾಳ ಜಮೀನುನನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬAಧ ನಾವು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ . ಇಲ್ಲಿನ ಗುಡಿಸಲು ನಿವಾಸಿಗಳು ನಲವತ್ತು ವರ್ಷಗಳಿಂದಲೂ ಮನೆಗಳಿಲ್ಲದೇ ವಂಚಿತರಾಗಿದ್ದಾರೆAದೂ ಈ ಕೂಡಲೇ ಅಧಿಕಾರಿಗಳು ಕ್ರಮ ಜರುಗಿಸದಿದ್ದಲ್ಲಿ ಪ್ರಗತಿಪರ ಸಂಘಟನೆಗಳೊoದಿಗೆ ಹೋರಾಟವನ್ನು ರೂಪಿಸಲಾಗುವುದೆಂದು ಹೇಳಿದ್ದಾರೆ
ವರದಿ: ವಿ ರಾಮಕೃಷ್ಣ ಮುಳಬಾಗಿಲು
ಕೋಲಾರ
More Stories
ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನ
ಬ್ಯಾಂಕ್ ಚಲನ್ನಲ್ಲಿ ಕನ್ನಡ ಇಲ್ಲ ಎಂದಿದ್ದಕ್ಕೆ ಬೇಜವಬ್ದಾರಿ ಉತ್ತರ ನೀಡಿದ ಸಿಬ್ಬಂದಿಗಳು
ಕೊರೊನಾ ಸಂಕಷ್ಟದ ನಡುವೆ ಕಾಡಾನೆಗಳ ದಾಳಿ. ಸುಮಾರು ೪ ಲಕ್ಷ ಮೌಲ್ಯದ ಬೆಳೆ ನಾಶ ಪಡಿಸಿರುವ ಆನೆಗಳ ಹಿಂಡು.