December 20, 2024

Bhavana Tv

Its Your Channel

ಬ್ಯಾಂಕ್ ಚಲನ್‌ನಲ್ಲಿ ಕನ್ನಡ ಇಲ್ಲ ಎಂದಿದ್ದಕ್ಕೆ ಬೇಜವಬ್ದಾರಿ ಉತ್ತರ ನೀಡಿದ ಸಿಬ್ಬಂದಿಗಳು

ಕೋಲಾರ: ಬ್ಯಾಂಕ್ ಚಲನ್ ನಲ್ಲಿ ಕನ್ನಡ ಇಲ್ಲ ಎಂದಿದ್ದಕ್ಕೆ ಬೇಜವಬ್ದಾರಿ ಉತ್ತರ ನೀಡಿದ ಸಿಬ್ಬಂದಿಗಳು ದರ್ಪ ಪ್ರದರ್ಶನ ಮಾಡಿರುವ ಘಟನೆ, ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿನ ಕೆನರಾ ಬ್ಯಾಂಕ್ ನಲ್ಲಿ ನಡೆದಿದೆ, ಇಲ್ಲಿನ ಬ್ಯಾಂಕ್ ನಲ್ಲಿ ಕನ್ನಡ ಇಲ್ಲ ಎಂದು ಕೇಳಿದ್ದಕ್ಕೆ, ಕೆರಳಿದ ಸಿಬ್ಬಂದಿ ತೆಲುಗು ಭಾಷೆಯ ಚಲನ್ ಬಗ್ಗೆ ಪ್ರಶ್ನೆ ಮಾಡಬೇಡಿ, ನೀವು ಕನ್ನಡ ಭಾಷೆಯ ಬಗ್ಗೆ ಕೇಳಿ, ಮುಳಬಾಗಿಲು ತಾಲೂಕು ಒಂದು ಕಾಲದಲ್ಲಿ ಆಂಧ್ರಕ್ಕೆ ಸೇರಿತ್ತು ಎಂದು ಗ್ರಾಹಕನಿಗೆ ಧಮ್ಕಿ ಹಾಕಿದ್ದಾರೆ, ಇನ್ನು ಗ್ರಾಹಕರಿಗೆ ದರ್ಪದಿಂದ ಉತ್ತರ ನೀಡಿದ ಬ್ಯಾಂಕ್ ಸಿಬ್ಬಂದಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಚಲನ್ ಏಕಿಲ್ಲ ಎಂದಿದ್ದಕ್ಕೆ, ಬೆಂಗಳೂರಿನ ಕೆನರಾ ಬ್ಯಾಂಕ್ ಕಚೇರಿಗೆ ಹೋಗಿ ದೂರು ನೀಡುವಂತೆ ಸಿಬ್ಬಂದಿ ತಿಳಿಸಿದ್ದಾರೆ, ಅಲ್ಲದೆ ಚಲನ್ ಇಲ್ಲದ್ದಕ್ಕೆ ಆಂದ್ರದಿAದ ಚಲನ್ ತರಿಸಿರೋದಾಗಿ ಬ್ಯಾಂಕ್ ಮ್ಯಾನೇಜರ್ ಹೇಳಿದ್ದು,
ಮುಳಬಾಗಿಲು ನಗರದ ಕೆನೆರಾ ಬ್ಯಾಂಕ್ ನಲ್ಲಿ ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಚಲನ್ ಇದೆ, ಆದರೆ ಕನ್ನಡವೇ ಮಾಯವಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ವಿ ರಾಮಕೃಷ್ಣ ಮುಳಬಾಗಿಲು
ಕೋಲಾರ

error: