December 22, 2024

Bhavana Tv

Its Your Channel

ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ; ಮೂರು ಮಂದಿಯ ಬಂಧನ

ಕೋಲಾರ. ಇಲ್ಲಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರ ಮೇಲೆ ಗುಂಪೊoದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ವೆಂಕಟರಾಮಯ್ಯ ಎಂಬುವರನ್ನು ಕೋವಿಡ್ ನಿಯಂತ್ರಣದ ಕರ್ತವ್ಯಕ್ಕಾಗಿ ಸದರಿ ಬಡಾವಣೆಗೆ ನಿಯೋಜಿಸಲಾಗಿದ್ದು ರಸ್ತೆಯಲ್ಲಿ ವಿನಾಕಾರಣ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ನಿಯಮವನ್ನು ಪಾಲಿಸುವಂತೆ ಹೇಳುತ್ತಿದ್ದಾಗ ಕೆಲವರು ಅವರ ಮೇಲೆ ವಿನಾಕಾರಣ ಜಗಳ ತೆಗೆದು ಮುಗಿಬಿದ್ದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅಷ್ಟರಲ್ಲಾಗಲೇ ಸುಮಾರು ೩೦೦ ಮಂದಿ ಅಲ್ಲಿ ನೆರೆದಿದ್ದರೆನ್ನಲಾಗಿದೆ. ಪರಿಸ್ಥಿತಿಯನ್ನು ಅರಿತ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಹತೋಟಿಗೆ ತಂದಿದ್ದು ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದರೆನ್ನಲಾದ ಹಿದಾಯತ್ ಮತ್ತು ನಾಸಿರ್ ಹಾಗೂ ಇಕ್ಬಾಲ್ ಎಂಬುವರನ್ನು ವಶಕ್ಕೆ ಠಾಣೆಗೆ ಕರೆತಂದು ತನಿಖೆ ನಡೆಸುತ್ತಿದ್ದಾರೆ. ಇವರನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಇವರ ವಿರುದ್ಧ ದೂರು ದಾಖಲಿಸದಂತೆ ಪೋಲೀಸರ ಮೇಲೆ ಹೆಚ್ಚಿನ ಒತ್ತಡಗಳು ಬರುತ್ತಿದೆ ಎನ್ನಲಾಗಿದೆ..

error: