May 6, 2024

Bhavana Tv

Its Your Channel

ಕೆ.ಆರ್.ಪೇಟೆ ಬಸ್ ಡಿಪೋನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವ ಆಚರಣೆ..

ಕೆಂಪೇಗೌಡರ ಕಾರ್ಯ ಸಾಧನೆಗಳ ಬಗ್ಗೆ ಗುಣಗಾನ ಮಾಡಿದ ಡಿಪೋ ಮ್ಯಾನೇಜರ್ ಕೆ.ಪಿ.ಮಂಜುನಾಥ್ ..

ಕೃಷ್ಣರಾಜಪೇಟೆ ; ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋನಲ್ಲಿ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಮಹೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು..
ವಿಜಯ ನಗರದ ಅರಸರ ಸಾಮಂತ ರಾಜರಾಗಿದ್ದರೂ ದೂರದರ್ಶಿತ್ವದ ಮಾದರಿಯ ಆಡಳಿತವನ್ನು ನೀಡಿದರು. ಸರ್ವ ಜನಾಂಗದ ಶಾಂತಿಯ ತೋಟದ ನಿರ್ಮಾಣದ ಹೊಂಗನಸನ್ನು ಇಟ್ಟುಕೊಂಡು ಮಾದರಿ ಆಡಳಿತವನ್ನು ನೀಡಿದ ಕೆಂಪೇಗೌಡರು ಸಮಾಜದ ಎಲ್ಲಾ ಜನಾಂಗಗಳ ಜನರು ಶಾಂತಿ ನೆಮ್ಮದಿಯ ಜೀವನವನ್ನು ನಡೆಸಲು ಅವರ ವೃತ್ತಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಾಣ ಮಾಡಿದ್ದರು. ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ಕುಡಿಯುವ ನೀರಿಗೆ ಮಹತ್ವವನ್ನು ನೀಡಿದ್ದರು. ಒಂದು ಮುಂದುವರೆದ ಪಟ್ಟಣಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಡುವ ಮೂಲಕ ಬೆಂಗಳೂರು ವಿಶ್ವಮಟ್ಟದಲ್ಲಿ ಹೆಸರನ್ನು ಗಳಿಸಲು ನಾಡಪ್ರಭು ಕೆಂಪೇಗೌಡರ ದೂರ ದೃಷ್ಟಿಯ ಆಡಳಿತವೇ ಕಾರಣ ಎಂದು ಡಿಪೋ ಮ್ಯಾನೇಜರ್ ಮಂಜುನಾಥ್ ಹೇಳಿದರು..
ಕಾರ್ಯಕ್ರಮದಲ್ಲಿ ಸಹ ಉಗ್ರಾಣ ಪಾಲಕರಾದ ಮುತ್ತೇಶ್ ಮೆಣಸಿನಕಾಯಿ, ಭದ್ರತಾ ವಿಭಾಗದ ಹವಾಲ್ದಾರರಾದ ಸ್ಟೀಫನ್ ಜಯಶೇಖರ್, ನಿರ್ವಾಹಕರಾದ ಎಂಎA ಯೋಗೇಶ್ ಕೆಂಪೇಗೌಡರ ಜೀವನದ ಸಾಧನೆಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.. ಬಸ್ ಡಿಪೋನ ಸಿಬ್ಬಂದಿಗಳು ಚಾಲಕರು ನಿರ್ವಾಹಕರು ಕೆಂಪೇಗೌಡರ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು..
ವರದಿ ಡಾ. ಕೆಆರ್ ನೀಲಕಂಠ ಕೃಷ್ಣರಾಜಪೇಟೆ

error: