May 6, 2024

Bhavana Tv

Its Your Channel

ಶಾಸಕ ಎಚ್.ಟಿ.ಮಂಜು ಅವರಿಗೆ ಹೃದಯಸ್ಪರ್ಶಿ ಸನ್ಮಾನ.

ಕೆ.ಆರ್.ಪೇಟೆ : ರೈತರು ಹಾಗೂ ವ್ಯಾಪಾರಸ್ಥರು ಸಹಕಾರ ಸಂಘಗಳ ಮೂಲಕವೇ ವ್ಯವಹರಿಸುವ ಮೂಲಕ ಸಹಕಾರ ಸಂಘಗಳ ಬಲವರ್ಧನೆಗೆ ಮುಂದಾಗಬೇಕು. ಶಾಸಕ ಹೆಚ್. ಟಿ.ಮಂಜು ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ವಾಣಿಜ್ಯ ಸಮುಚ್ಛಯದಲ್ಲಿರುವ ಶ್ರೀ ಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ವತಿಯಿಂದ ಆಡಳಿತ ಮಂಡಳಿಯ ನಿರ್ದೇಶಕರಾಗಿರುವ ಶಾಸಕ ಎಚ್.ಟಿ.ಮಂಜು ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು..

ಶ್ರೀಕೋಟೆ ಭೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಮಂಜು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಲು ತಾಲೂಕಿನ ಜನತೆಯ ಆಶೀರ್ವಾದದ ಜೊತೆಗೆ ಶ್ರೀಕೋಟೆ ಭೈರವೇಶ್ವರ ಸ್ವಾಮಿಯ ಕೃಪಾಶೀರ್ವಾದವೂ ಕಾರಣವಾಗಿದೆ. ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವನ್ನಿಟ್ಟು ಒಬ್ಬ ಸಾಮಾನ್ಯ ರೈತನ ಮಗನಾದ ನನ್ನನ್ನು ಈ ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿ ಗುರುತರವಾದ ಜವಾಬ್ದಾರಿಯನ್ನು ವಹಿಸಿದ್ದಾರೆ. ಜನತೆಯ ಅಶೋತ್ತರಗಳಿಗೆ ಭಂಗ ತರದಂತೆ ಪ್ರಾಮಾಣಿಕವಾಗಿ ತಾಲೂಕಿನ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಬದ್ಧತೆ ಯಿಂದ ಕೆಲಸ ಮಾಡುತ್ತೇನೆ. ನಾನು ಆಡಳಿತ ಪಕ್ಷದ ಶಾಸಕನಲ್ಲದಿದ್ದರೂ ತಾಲೂಕಿನ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಿಂದ ಹೋರಾಟವನ್ನು ಮಾಡಿಯಾದರೂ ತರುತ್ತೇನೆ. ತಾಲೂಕಿನ ಅಭಿವೃದ್ಧಿ, ಕ್ಷೇತ್ರದ ಜನತೆಯ ನೆಮ್ಮದಿಯ ಜೀವನ ನನಗೆ ಮುಖ್ಯವಾಗಿದೆ ಎಂದು ಹೇಳಿದ ಶಾಸಕ ಮಂಜು ವ್ಯಾಪಾರಸ್ಥರು ಹಾಗೂ ರೈತ ಭಾಂದವರು ಸಹಕಾರ ಸಂಘಗಳ ಮೂಲಕವೇ ವ್ಯವಹರಿಸಬೇಕು. ರೈತರು ಮತ್ತು ವ್ಯಾಪಾರಸ್ಥರ ಅಭಿವೃದ್ಧಿ ಸಹಕಾರ ತತ್ವದ ಅಡಿಯಲ್ಲಿ ನಿಂತಿರುವುದರಿAದ ಆಡಳಿತ ಮಂಡಳಿಯ ಸದಸ್ಯರು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಸರ್ಕಾರದ ವಿವಿಧ ಯೋಜನೆಗಳ ಫಲವನ್ನು ಅರ್ಹ ಫಲಾನುಭವಿಗಳಿಗೆ ಹಾಗೂ ಷೇರುದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ ಶಾಸಕರು ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘವು ದಿನದಿಂದ ದಿನಕ್ಕೆ ಅಭಿವೃದ್ಧಿಯ ದಿಕ್ಕಿನತ್ತ ಸಾಗುತ್ತಿದೆ, ಸಂಘದ ಅಧ್ಯಕ್ಷರಾಗಿರುವ ಸಹೋದರಿ ಕೆ. ಮಂಜುಳಾ ಚನ್ನಕೇಶವ ಹಾಗೂ ಉಪಾಧ್ಯಕ್ಷರಾದ ಬೋರೇಗೌಡ, ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಎಸ್. ರಾಮೇಗೌಡ, ಕೈಗೊನಹಳ್ಳಿ ಕುಮಾರ್, ನೋಟರಿಗಳಾದ ಎನ್.ಆರ್. ರವಿಶಂಕರ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಸಂಘದ ಮುನ್ನಡೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶ್ರೀಕೋಟೆ ಬೈರವೇಶ್ವರ ವ್ಯಾಪಾರಸ್ಥರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಅಶ್ವಿನಿ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವರದಿ:ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ,ಮಂಡ್ಯ .

error: