December 22, 2024

Bhavana Tv

Its Your Channel

ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖಾ ನೌಕರರ ಮೈಸೂರು ಶಾಖೆ ಸಂಘದ ವತಿಯಿಂದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಕಾರ್ಯಕ್ರಮ

ಮೈಸೂರು ಭೂಮಾಪನ ಇಲಾಖೆ ಮೈಸೂರು ಶಾಖಾ ಸಂಘದ ವತಿಯಿಂದ ಮುದ್ರಿಸಲಾದ ೨೦೨೨ನೇ ಸಾಲಿನ ಕ್ಯಾಲೆಂಡರನ್ನು ಮತ್ತು ಡೈರಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಿ ಎಸ್ ಷಡಕ್ಷರಿ , ಜಗದೀಶ್ ಗೌಡ ಪಾಟೀಲ್ ಬೆಳಗಾವಿ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ನೌಕರರ ಸಂಘ ಮೈಸೂರಿನ ನಮ್ಮ ಇಲಾಖೆಯ ತರಬೇತಿ ಕೇಂದ್ರ, ಹಡಜನ ಇಲ್ಲಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಡೈರಿ ಮತ್ತು ಕ್ಯಾಲೆಂಡರ್ ಸಮರ್ಪಣೆ ಗೊಳಿಸಿದರು. ಹಾಗೂ ಸಭೆಯಲ್ಲಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶಂಸಿ ನೌಕರರ ಕುಂದುಕೊರತೆಗಳನ್ನು ಸರ್ಕಾರದ ಮಟ್ಟದಲ್ಲಿ ಹಾಗೂ ಅಧಿಕಾರಿಗಳಲ್ಲಿ ಬಗೆಹರಿಸುವುದಾಗಿ ಆಶ್ವಾಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿ ಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾದ ಜಯಪ್ಪ ಬಡವರ್ಗದ ಜನರಿಗೆ ಮತ್ತು ಶ್ರಮಿಕ ವರ್ಗದವರಿಗೆ ಆದಷ್ಟು ತ್ವರಿತಗತಿಯಲ್ಲಿ ಗಣನೆಗೆ ತೆಗೆದುಕೊಂಡು ಕೆಲಸ ಮಾಡಿ ಎಂದು ನೌಕರರಿಗೆ ಈ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಷಡಕ್ಷರಿ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ, ಜೆ ಗೋವಿಂದರಾಜು ಅಧ್ಯಕ್ಷರು, ಎಂ ಕೆ ಪ್ರಕಾಶ್ ಉಪಾಧ್ಯಕ್ಷರು ಮೈಸೂರು ವಿಭಾಗ, ಬೀರೇಗೌಡ ಸಂಘಟನಾ ಕಾರ್ಯದರ್ಶಿ, ಹಾಗೂ ಮಾನ್ಯ ಜಂಟಿ ನಿರ್ದೇಶಕರಾದ ಪ್ರಸಾದ್ ವೀ.ಕುಲಕರ್ಣಿ, ಸಿಎಸ್ ರಮೇಶ್ ಗೋಪಾಲಯ್ಯ ಮತ್ತು ಜೆ. ಸೀಮಂತಿನಿ, ಸಮಸ್ತ ಜಿಲ್ಲೆಯ ಭೂಮಾಪನ ವೃಂದಕ್ಕೆ ಹಾಗೂ ಲಿಪಿಕ ನೌಕರರ ವೃಂದಕ್ಕೆ ಜಯಪ್ಪ ಅಧ್ಯಕ್ಷರು ಧನ್ಯವಾದ ತಿಳಿಸಿದ್ದಾರೆ.

ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: