ಮೈಸೂರು: ಮೈಸೂರು ಜಿಲ್ಲೆಯ ಸುತ್ತೂರು ಮಠಕ್ಕೆ ವಸತಿ ಸಚಿವರಾದ ವಿ ಸೋಮಣ್ಣನವರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಕರ್ನಾಟಕ ಸರ್ಕಾರ 5ಲಕ್ಷ ಆಶ್ರಯ ಮನೆಗಳನ್ನು ಬಿಡುಗಡೆ ಮಾಡಿ ಅದರಲ್ಲಿ 4 ಲಕ್ಷಗ್ರಾಮೀಣ ಭಾಗಕ್ಕೆ 1 ಲಕ್ಷ ಪಟ್ಟಣಕ್ಕೆ ನೀಡಿದ್ದೇವೆ. ಅದರ ಮೊದಲನೇ ಆದೇಶವನ್ನು ಮೈಸೂರಿನಲ್ಲಿ ನಡೆಸಲು ಬಂದಿದ್ದೇನೆ . ಮತ್ತು ಮೈಸೂರಿನ ಎಲ್ಲಾ ಶಾಸಕರನ್ನು ಮತ್ತು ಇದಕ್ಕೆ ಸಂಬAಧಪಟ್ಟ ಎಲ್ಲಾ ಅಧಿಕಾರಿಗಳನ್ನು ಭೇಟಿ ಮಾಡಿ ಇದೇ ತಿಂಗಳು 30ಕ್ಕೆ 5 ಲಕ್ಷ ಮನೆಗಳನ್ನು ಮಂಜೂರು ಮಾಡಿ ಮೂರು ಹಂತದಲ್ಲಿ 40 ಸಾವಿರದಂತೆ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. 2016-17, 2017-18 ಅಂದಿನ ಸರಕಾರ ಮಾಡಿರುವ ಲೋಪದಿಂದ ಕೇಂದ್ರ ಸರ್ಕಾರ ಒಂದು ಮನೆಗಳನ್ನು ಇಲ್ಲಿಯತನಕ ಕೊಟ್ಟಿರಲಿಲ್ಲ. ಈಗ ಅದನ್ನು ಸರಿಪಡಿಸಿ ರಾಷ್ಟ್ರದ ಪ್ರಧಾನಮಂತ್ರಿ ವಾರಣಾಸಿಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಟ್ಟಿಗೆ 18 ಲಕ್ಷ ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಚಿವರಾದ ವಿ . ಸೋಮಣ್ಣ , ಸಂಸದರಾದ ಪ್ರತಾಪ್ ಸಿಂಹ, ರಾಜೀವ್ ಪಿ., ಪ್ರೊಫೆಸರ್ ಮಲ್ಲಿಕಾರ್ಜುನಪ್ಪ, ಎಸ್ಪಿ ಸುರೇಶ್ ,ಶಿವಪ್ರಸಾದ್ ಎಸ್. ಎಂ. ಪಿ .,ಚಂದು, ಜಗದೀಶ್ ಮೈಸೂರು ,ನಾಗೇಂದ್ರ ಮಾಡ್ರಳ್ಳಿ, ಸುನಿಲ್, ಇತರರು ಉಪಸ್ಥಿತರಿದ್ದರು..
ವರದಿ; ಸದಾನ0ದ ಕನ್ನೆಗಾಲ ಗುಂಡ್ಲುಪೇಟೆ
More Stories
ಶತಮಾನೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕ್ರೀಡೋತ್ಸವ
ಎನ್ ಟಿ ಎಂ ಶಾಲೆ ಉಳಿವಿಗಾಗಿ ಕಾವಲುಪಡೆಯ ರಾಜ್ಯ ಅಧ್ಯಕ್ಷರಾದ ಎಂ ಮೋಹನ್ ಕುಮಾರ್ ಗೌಡರ ನೇತೃತ್ವದಲ್ಲಿ ಪ್ರತಿಭಟನೆ
ಒಕ್ಕಲಿಗರ ವಿಕಾಸ ವೇದಿಕೆ ಮೈಸೂರು ಇವರಿಂದ ಕರವೇ ಫ್ರಾನ್ಸ್ ಡಿಸೋಜ ರವರಿಗೆ ಕರ್ನಾಟಕ ವಿಕಾಸರತ್ನ ಪ್ರಶಸ್ತಿ ನೀಡಿ ಗೌರವ