
ಕಾರ್ಕಳ ಅ: 11: ಕುಕ್ಕುಂದೂರು ಗ್ರಾಮದ ನಕ್ರೆ ಅಂಗಡಿಬೆಟ್ಟು ನಿವಾಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಜಯರಾಮ್ ಆಚಾರ್ಯ ನಿಧನಕ್ಕೆ ಕಾರ್ಕಳ ಶಾಸಕರು, ಕರ್ನಾಟಕ ಸರ್ಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಖ್ಯಾತ ಶಿಲ್ಪಿಯಾಗಿದ್ದ ಇವರು ಕರಾವಳಿ ಭಾಗದಲ್ಲಿ ಆನೇಕ ದೈವ ದೇವಸ್ಥಾನಗಳ ಜೊತೆಗ ಪ್ರಮುಖ ಗರಡಿಗಳ ಜೀಣೋದ್ದಾರ ಸಂಧರ್ಭದಲ್ಲಿ ನೂತನ ದೇವಸ್ಥಾನ ನಿರ್ಮಾಣದಲ್ಲಿ ತಮ್ಮ ಅಪಾರ ಕೊಡುಗೆಯನ್ನು ಕಾರ್ಕಳಕ್ಕೆ ಹಾಗೂ ಕರಾವಳಿಗೆ ನೀಡಿದ್ದಾರೆ. ಅಷ್ಟೆ ಅಲ್ಲದೆ ಹೊರ ರಾಜ್ಯಗಳಾದ ಮಹರಾಷ್ಟç, ಪುಣೆ ಹಾಗೂ ಇತರ ರಾಜ್ಯಗಳಲ್ಲೂ ಇವರ ಶಿಲ್ಪಕಲೆ ಹೆಸರುವಾಸಿಯಾಗಿತ್ತು. ಶ್ರೀಯುತರ ಅಗಲುವಿಕೆ ಕಾರ್ಕಳದ ಜನತೆಗೆ ಹಾಗೂ ಶಿಲ್ಪಕಲಾ ಲೋಕಕ್ಕೆ ತುಂಬಲಾರದ ನಷ್ಠವಾಗಿದೆ.
ಸ್ವರ್ಗೀಯ ಜಯರಾಮ ಆಚಾರ್ಯ ಅವರ ಆತ್ಮಕ್ಕೆ ಸದ್ಗತಿ ಹಾಗೂ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಶೋಕ ಸಂದೇಶದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ