
ಕಾರ್ಕಳ: ಹಿಂದುತ್ವಕ್ಕೋಸ್ಕರ ನನ್ನ ಮೇಲೆ 107 ಕೇಸುಗಳು ದಾಖಲಾಗಿದ್ದು ಇದರಲ್ಲಿ ಬಿಜೆಪಿ ಸರಕಾರದ ಕೊಡುಗೆ ಅತೀ ಹೆಚ್ಚು ಹಿಂದುತ್ವಕ್ಕೋಸ್ಕರ ಇನ್ನೇಷ್ಟು ಕೇಸು ಹಾಕಿದರು ಹಿಂಜರಿಯುವುದಿಲ್ಲ ನನ್ನ ಹೋರಾಟ ಹಿಂದುತ್ವದ ಪರ ನಿರಂತರವಾಗಿರುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹೋಟೆಲ್ ಪ್ರಕಾಶ ಸಭಾಂಗಣದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೇಸ್ ಸರಕಾರ ರಕ್ಷಣೆಗಾಗಿ ನೀಡಿದ್ದ ಲೈಸೆನ್ಸ್ ರಿವಾಲ್ವರನ್ನು ಬಿಜೆಪಿ ಹಿಂಪಡೆದುಕೊAಡಿದೆ ಕಾಡಿಬೇಡಿದ ನಂತರ ಇದೀಗ ಗನ್ ಸರಕಾರ ನೀಡಿದೆ. ಮುತಾಲಿಕರ ಹತ್ಯೆಯಾದರೆ ನನ್ನ ಸಾವಿನಲ್ಲೂ ಬಿಜೆಪಿಗರು ವೋಟ್ ಬ್ಯಾಂಕ್ ರಾಜಕೀಯ ಮಾಡುವುದಕ್ಕೆ ಹಿಂಜರಿಯಲಾರರು ಎಂದರು.
ದೇಶಪ್ರೇಮ ಎಲ್ಲರಲ್ಲೂ ಇರಬೇಕು ಜಾತಿಭೇದ ಇಲ್ಲದೆ ಹಿಂದೂ ಎನ್ನುವ ಭಾವನೆ ನಮ್ಮಲ್ಲಿರಬೇಕು ದೇಶದ ಯಾವುದೇ ಮೂಲೆಯಲ್ಲಿ ಯಾವೊಬ್ಬನಿಗೋ ತೊಂದರೆಯಾದಾಗ ಸ್ಪಂದಿಸುವ ಗುಣ ನಮ್ಮಲ್ಲಿರಬೇಕು ಕೇವಲ ಸರಕಾರದಿಂದ ಇದು ಅಸಾಧ್ಯ ಪ್ರತಿಯೊಬ್ಬನ ಸಹಕಾರದಿಂದ ದೇಶ ಅಭಿಮಾನದಿಂದ ರಾಷ್ಟ್ರವನ್ನು ಕಟ್ಟಲು ಸಾಧ್ಯ ಭ್ರಷ್ಟ ವ್ಯವಸ್ಥೆ ದೂರವಾಗಬೇಕು ಭ್ರಷ್ಟ ರಾಜಕಾರಣಿಗಳಿಂದ ದೇಶಕ್ಕೆ ಅಪಾಯವಿದೆ ಕೊಡುವವನು ಕೊಳ್ಳುವವನು ಇಬ್ಬರು ಭ್ರಷ್ಟರೇ ಭ್ರಷ್ಟಾ ವ್ಯವಸ್ಥೆ ಬುಡದಿಂದ ಕಿತ್ತು ಹೋದರೆ ಸದೃಢ ದೇಶ ನಿರ್ಮಾಣವಾಗುತ್ತದೆ.
ರಾಜಕೀಯ ವ್ಯವಸ್ಥೆಯ ಹೊರಗಿದ್ದು ಏನನ್ನು ಸಾಧಿಸಲು ಸಾಧ್ಯವಿಲ್ಲ ರಾಜಕೀಯ ವ್ಯವಸ್ಥೆಯೊಳಗಿದ್ದು ದೃಢ ಸಂಕಲ್ಪವಿದ್ದರೆ ಏನನ್ನು ಸಾಧಿಸಬಹುದು ಅದಕ್ಕೆ ಹಿಂದು ಕಾರ್ಯಕರ್ತರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಇರುವ ಅಸಂಖ್ಯಾತರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸದಾ ಸಿದ್ಧ ಆದರೆ ಕ್ಷೇತ್ರ ಆಯ್ಕೆ ಇನ್ನಷ್ಟೇ ಆಗಬೇಕಾಗಿದೆ ಅದನ್ನು ಮುಂದಿನ ದಿನಗಳಲ್ಲಿ ಪತ್ರಕರ್ತರ ಮುಂದೆ ತಿಳಿಸುವುದಾಗಿ ಹೇಳಿದರು.
ಶ್ರೀರಾಮ ಸೇನೆಯ ಮುಖಂಡ ಆನಂದಶೆಟ್ಟಿ ಅಡ್ಯಾರು, ಹರೀಶ್ ಅಧಿಕಾರಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ