
ಕಾರ್ಕಳ:- ಸಪ್ತಸ್ವರ ಸಾಂಪ್ರದಾಯಿಕ ಮತ್ತು ಜಾನಪದ ವಾದ್ಯ ಕಲಾವಿದರ ಸಂಘ (ರಿ).ಇದರ ವತಿಯಿಂದ ನಡೆದ ಮಹಾಸಭೆಯು ಇಂದು ಶ್ರೀ ಕೃಷ್ಣ ಸಭಾಭವನ, ವೇಣುಗೋಪಾಲ ಕೃಷ್ಣ ದೇವಸ್ಥಾನದ ಸಭಾಂಗಣ ಇಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರು ನಾಗೇಶ್ ಎ.ಬಪ್ಪನಾಡು ನಾದಸ್ವರ ವಿಶಾರದ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಾರ್ಕಳದಲ್ಲಿ ಕಲಾವಿದರನ್ನು ಒಂದೇ ಸೂರಿನಡಿಯಲ್ಲಿ ಒಟ್ಟು ಕೂಡಿಸಬೇಕು.ಕಳೆದ ಆರು ವರ್ಷಗಳಿಂದ ಸತತವಾಗಿ ಸಪ್ತಸ್ವರ ಕಲಾವಿದರ ಸಂಘ ದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೇನೆ. ಸಂಘದ ಮಹಾಸಭೆಯಲ್ಲಿ ಸಂಘದ ಆಗು ಹೋಗುಗಳ ಬಗ್ಗೆ ಸಂಘದ ಸ್ಥಿತಿ ಗತಿ ಗಳ ಬಗ್ಗೆ ವಿಚಾರ ಮಾಡುವುದು ಮಹಾಸಭೆಯಲ್ಲಿ ,ಸಂಘದ ಮಹಾಸಭೆಯಲ್ಲಿ ಸಂಘದ ಸದಸ್ಯರು ಗೈರು ಹಾಜರಾಗದಂತೆ ವಿನಂತಿಯೆAದು ತಿಳಿಸಿದರು.
ಎಂದು ಸರ್ಕಾರಿ ವಕೀಲರಾದ ರವೀಂದ್ರ ಮೊಯ್ಲಿ ಮಾತನಾಡಿ ಕಾರ್ಕಳ ಉತ್ಸವದ ಸಮಯದಲ್ಲಿ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಶಿವರಾಮ ದೇವಾಡಿಗ ಗೌರವಾಧ್ಯಕ್ಷ ಸುಂದರ ಸಪಲಿಗ. ,ಕೋಶಾಧಿಕಾರಿ ಪಾಂಡು ದೇವಾಡಿಗ , ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ