
ಕಾರ್ಕಳ: ಇತಿಹಾಸ ಪ್ರಸಿದ್ದ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಿಯ ಪುನ: ಪ್ರತಿಷ್ಠಾನ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ ಉಚ್ಚಂಗಿ ದೇವಿಯ ಪ್ರತಿಷ್ಠಾ ಪೂರ್ವಕ ಮೆರವಣಿಗೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.

ಕಾರ್ಕಳದ ವೆಂಕಟರಮಣ ದೇವಸ್ಥಾನದ ಪರಿಸರದಿಂದ ಹೊರಟ ಶ್ರೀ ಉಚ್ಚಂಗಿ ದೇವಿಯ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಡೋಲು,ಕೊಳಲು ವಾದನ, ಚಂಡೆ,ವಿವಿಧ ಭಜನಾ ತಂಡಗಳ ನರ್ತನ, ವಿವಿಧ ಟ್ಯಾಬ್ಲೋಗಳು, ಛದ್ಮವೇಷ, ಭಾಗವಹಿಸಿ ಗಮನ ಸೆಳೆದವು.


ಶ್ರೀ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ.ಬಿ ಗೋಪಾಲಕೃಷ್ಣ, ಸುರೇಶ್ ರಾವ್, ರಾಘವೇಂದ್ರ ರಾವ್, ಉಚ್ಚಂಗಿ ದೇವಸ್ಥಾನ ಆಡಳಿತ ಮಂಡಳಿಯ ಸುರೇಂದ್ರ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿಜಯ ಶೆಟ್ಟಿ, ನವೀನ್ ನಾಯಕ್, ಪ್ರತಿಮಾ ರಾಣೆ, ನವೀನ್ ದೇವಾಡಿಗ, ಶುಭದರಾವ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಬಜಗೋಳಿ ಸುಧಾಕರ ಶೆಟ್ಟಿ ಸೇರಿದಂತೆ ರಣವೀರ ಸಮಾಜದ ಪ್ರಮುಖರು ಭಾಗವಹಿಸಿದರು.
ವರದಿ : ಅರುಣ ಭಟ್ಟ್,ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ