May 6, 2024

Bhavana Tv

Its Your Channel

ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಕಾರ್ಕಳ:- ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ ದಿನಾಂಕ 09-03-2023 ರಿಂದ 14-03-2023 ರ ತನಕ ನಡೆಯುತ್ತಿದ್ದು, ದಿನಾಂಕ 12/03/2023 ರಂದು ಬೆಳಿಗ್ಗೆ 7.25ಗೆ ಮೀನ ಲಗ್ನ ದಲ್ಲಿ ಶ್ರೀ ಮುಖ್ಯ ಪ್ರಾಣ ದೇವರ ಅಷ್ಟಬಂಧ ಸಹಿತ ಪ್ರತಿಷ್ಠೆ ,ಪ್ರತಿಷ್ಠಾ ಕಲಶಾಭಿಷೇಕ , ಪ್ರಸನ್ನ ಪೂಜೆ,108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ , ಪ್ರಸನ್ನ ಪೂಜೆ, ನ್ಯಾಸ ಪೂಜೆ,ಚಂಡಿಕಾ ಯಾಗ, ಮಾರಿಯಮ್ಮ ಮತ್ತು ಉಚ್ಚಂಗಿ ಮಾರಿಯಮ್ಮ ನ ಬಿಂಬ ಶುದ್ದಿ ಪ್ರಕ್ರಿಯೆ, ಬಿಂಬ ಶುದ್ದಿ ಹೋಮ ಗಳು ಮನ್ಯುಸುಕ್ತ ಯಾಗ, ಕಾಳಿ ಗಾಯತ್ರಿ ಮಂತ್ರ ಹೋಮ,ಮದ್ಯಾಹ್ನ ಅನ್ನ ಸಂತರ್ಪಣೆ ಸಾಯಂಕಾಲ ಘ 4-00ರಿಂದ ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ಮಾರಿಯಮ್ಮ ಬಿಂಬ ಶಯ್ಯಾದಿ ವಾಸ ಪ್ರಕ್ರಿಯೆ ಶಕ್ತಿ ದಂಡಕ ಮಂಡಲ ಪೂಜೆ , ಅದಿವಾಸ ಹೋಮ, ಶ್ರೀ ಕಾಳಿ ಕುರುಜಿ ತರ್ಪಣ , ಶಿಖರಾಧಿ ವಾಸ ,ನವರತ್ನ ಅಧಿವಾಸ , ಬ್ರಹ್ಮ ಕಲಶದ ಮಂಟಪದ ಸಂಸ್ಕಾರ ಪ್ರಕ್ರಿಯೆ ನಂತರ ರಾತ್ರಿ ಅನ್ನ ಸಂತರ್ಪಣೆ ನಡೆಯಿತು.

ವರದಿ: ಅರುಣ ಭಟ್ ಕಾರ್ಕಳ

error: