May 22, 2024

Bhavana Tv

Its Your Channel

ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,

ಕಾರ್ಕಳ ; ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಕಠಿಣ ಉಪವಾಸ ವ್ರತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವ ದಿನವಾಗಿದೆ ಅದಲ್ಲದೆ ರಂಜಾನ್ ಹಬ್ಬ ಭಾವೈಕ್ಯದ ದಿನವಾಗಿದೆ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಸ್ಮೀ ಕಾರ್ಕಳದ ಜಾಮಿಸಿದಿಯ ಇಧ್ಗಾದಲ್ಲಿ ಮೆರೆದಿರುವ ಮುಸ್ಲಿಂ ಬಾಂಧವರಿಗೆ ಉದ್ದೇಶಿಸಿ ಹೇಳಿದರು. ಇಂದು ಬೆಳಗಿನಿಂದಲೇ ಕಾರ್ಕಳದ ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವಿಶೇಷ ನಮಾಜಿಗೋಸ್ಕರ ಬೆಳಕಿನಿಂದಲೇ ಇದ್ದಗಾದಲ್ಲಿ ಜಮಾಹಿಸಿದ್ದರು. ನಂತರ ಮಾತನಾಡಿದ ನಂತರ ಮಾತನಾಡಿದ ಕಾರ್ಕಳ ಮುಸ್ಲಿಂ ಜಮಾತ್ ನ ಅಧ್ಯಕ್ಷರಾದ ಅಶ್ವಾಕ್ ಅಹಮದ್ ರಂಜಾನ್ ತಿಂಗಳಲ್ಲಿ ನಮ್ಮ ಮಸೀದಿಗಳಿಗೆ ಉತ್ತಮ ದೇಣಿಗೆಗಳನ್ನು ನೀಡಿದ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ನಂತರ ಮಾತನಾಡಿದ ಅವರು ಮುಂದೆ ಬರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ಕರೆ ನೀಡಿದರು. ನಂತರ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಶ್ಮೀ ಪವಿತ್ರ ನಮಾಜ್ ಅನ್ನು ನೆರವೇರಿಸಿದರು. ನಂತರ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಮತ್ತು ತಮ್ಮವರು ಮೃತಪಟ್ಟ ಹಿರಿಯರ ಸಮಾಧಿಗಳಿಗೆ ಪ್ರಾರ್ಥನೆ ಸಲ್ಲಿಸಿದರು.
ವರದಿ : ಅರುಣ ಭಟ್ ಕಾರ್ಕಳ

error: