November 22, 2024

Bhavana Tv

Its Your Channel

ಕಾರ್ಕಳ ಪುರಸಭೆಯಲ್ಲಿ ಸಾಮಾನ್ಯ ಸಭೆ

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ವಾರ್ಷಿಕ ತೆರಿಗೆ ಮರುಪರಿಶೀಲಿಸಿ ಅಳವಡಿಸುವ ವೇಳೆ ತೆರಿಗೆ ಹೆಚ್ಚಿಸದಂತೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಕಾರ್ಕಳ ಪುರಸಭೆ ಸಾಮಾನ್ಯ ಸಭೆ ಮಾರ್ಚ್ 20 ರಂದು ಪುರಸಭೆ ಕಚೇರಿ ಸಭಾಭವನದಲ್ಲಿ ನಡೆಯಿತು. ಪುರಸಭಾ ಅಧ್ಯಕ್ಷ ಸುಮಾಕೇಶವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಲ್ಲವಿ ವೇದಿಕೆಯಲ್ಲಿದ್ದರು ಮುಖ್ಯ ಅಧಿಕಾರಿ ರೂಪಾ ಶೆಟ್ಟಿ ಸರಕಾರದ ನಿಯಮಾವಳಿಯಂತೆ ತೆರಿಗೆ ಶುಲ್ಕವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಹೆಚ್ಚಳ ಮಾಡಬೇಕೆಂದು 23ನೇ ಸಾಲಿನ ಶೇಕಡ 15 ಹೆಚ್ಚಿಸುವ ಪ್ರಸ್ತಾವಕ್ಕೆ ಸದಸ್ಯರ ಒಪ್ಪಿಗೆಗೆ ಸಭೆ ಮುಂದಿಟ್ಟರು. ವಿಪಕ್ಷ ನಾಯಕ ಅಷ್ಪಾಕ್ ಅಹಮದ್ ಸಾರ್ವಜನಿಕ ಹಿತಾದೃಷ್ಟಿಯಿಂದ ತೆರಿಗೆ ಹೆಚ್ಚಳ ಸೂಕ್ತವಲ್ಲ ಎಂದು ಹೇಳಿದರು ಇತರ ಸದಸ್ಯರು ಧ್ವನಿಗೂಡಿಸಿದರು ಮುಖ್ಯ ಅಧಿಕಾರಿಯವರು ತೆರಿಗೆಹೆಚ್ಚಳಗೊಳಿಸುವುದರಿಂದ ಪುರಸಭೆ ಮೂಲ ನಿಧಿ ಬಳಕೆಗೆ ಅನುಕೂಲಕರವಾಗುತ್ತದೆ ಪುರಸಭೆಗೆ ಆದಾಯ ಬರಬೇಕು ಖರ್ಚು ವೆಚ್ಚ ಹೊರೆ ಸರಿದೂಗಿಸಿದಕ್ಕೆ ಅಗತ್ಯವಿದೆ ಎಂದರು. ಸದಸ್ಯ ನಳಿನಿ ಆಚಾರ್ಯ ಅವರು ತನ್ನ ವಾರ್ಡ್ನಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 58 ಮಂದಿ ಬಡವರಿದ್ದಾರೆ ಫಲಾನುಭವಿಗಳ ಆಯ್ಕೆ ಮಾಡಿಕೊಂಡಾಗ ಕೇವಲ ಎರಡು ಮಂದಿ ಅಷ್ಟೇ ಆಯ್ಕೆ ಮಾಡಿಕೊಂಡಿರುವಿರಿ ಹೆಚ್ಚು ಫಲಾನುಗಳು ಇರುವಇರುವ ನನ್ನ ವಾರ್ಡಿಗೆ ತುಂಬಾ ಅನ್ಯಾಯವಾಗಿದೆ ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಹೇಳಿದರು. ಇರುವ ಸೌಲಭ್ಯ ಇರುವ 16 ಸೌಲಭ್ಯಗಳನ್ನು ಹಂಚಿ ಕೊಟ್ಟಿದ್ದೇವೆ ಎಂದು ಅಧ್ಯಕ್ಷ ಸುಮಾಕೇಶ್ ಹೇಳಿದರು.
ಈ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಬಹಳ ಹೊತ್ತು ಚರ್ಚೆ ನಡೆಯಿತು. ಬಂಡಿಮಠ ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಅಪಾಯಕಾರಿ ಹಂಪ್ಗಳಿದ್ದು ತುಂಬಾ ಅಪಾಯಕಾರಿ ಆಗಿದೆ.ಒಂದು ಪ್ರಭಾ ಪ್ರಸ್ತಾಪಿಸಲು ಎದ್ದು ನಿಂತಾಗ ಅಧ್ಯಕ್ಷರ ನಡಾವಳಿ ಚರ್ಚೆ ಬಳಿಗೆ ಕೊನೆಗೆ ಅವಕಾಶ ನೀಡುವುದಾಗಿ ಹೇಳಿದರು. ಇದು ಸದಸ್ಯರನ್ನು ಕೆರಳಿಸಿತು ಕೊನೆಗೆ ಅವಕಾಶ ನೀವು ನೀಡುವುದಿಲ್ಲ ಇದು ಗಂಭೀರ ವಿಚಾರ ಇದು ಮನವರಿಕೆ ಮಾಡುವ ಪ್ರಯತ್ನ ನಡೆಸಿದರು. ಆಗ ಆಡಳಿತ ಪಕ್ಷದವರು ಮಾತನಾಡಲು ಆರಂಭಿಸಿದಾಗ ನೀವ್ಯಾಕೆ ಈಗ ಮಾತನಾಡುತ್ತೀರಿ ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದರು ಆಡಳಿತ ಪಕ್ಷದವರು ಇದನ್ನೇ ಪುನರುಚಿಸಿದರು ಆಡಳಿತ ವಿಪಕ್ಷ ಸದಸ್ಯರ ಕಾವೇರಿ ಚರ್ಚೆ ನಡೆದು ನೀವು ಯಾಕೆ ನೀವ್ಯಾಕೆ ಎಂದು ಗದ್ದಲ ನಡೆಸಿದರು ಪ್ರಭಾ ಅವರು ಒಳಚಂಡಿ ತೆರಿಗೆಯಲ್ಲಿ ಮಲತಾಯಿ ಧೋರಣೆ ಮಾಡಲಾಗುತ್ತದೆ ಎಂದು ಆರೋಪಿಸಿದರು. ಶುಭದ ರಾವ್ ಮಾತನಾಡಿ ಬಸ್ ಸ್ಟ್ಯಾಂಡ್ ಬಳಿ ವ್ಯಾಪಾರ ಪರವಾನಿಗೆ ಪಡೆದುಕೊಂಡು ಒಳ ಬಾಡಿಗೆಯಲ್ಲಿ ಇನ್ನೊಬ್ಬರಿಗೆ ವ್ಯಾಪಾರ ಮಾಡಲುನೀಡಲಾಗಿದೆ ಯಾರ ಹೆಸರಿನಲ್ಲಿ ಪರವಾನಿಗೆ ಇದೆ ಯಾರು ವ್ಯಾಪಾರ ಮಾಡುತ್ತಿದ್ದಾರೆ ಎನ್ನುವುದಕ್ಕೆ ಅಧಿಕಾರಿಗಳು ಉತ್ತರ ಕೊಡಿ ಪಾರ್ಕಿಂಗ್ ಜಾಗವನ್ನು ವ್ಯಾಪಾರಕ್ಕೆ ಬಳಸಿಕೊಳ್ಳಲಾಗಿದೆ ಬೀದಿಬದಿ ಪಾನಿಪುರಿ ವ್ಯಾಪಾರಿಗೆ ಒಂದು ನ್ಯಾಯ ಇನ್ನುಳಿದವರಿಗೆ ಇನ್ನು ಉಳಿದವರಿಗೆ ಇನ್ನೊಂದು ನ್ಯಾಯ ಸರಿಯಲ್ಲ ಅಂತ ಹೇಳಿದರು. ಜಾತ್ರೆ ಉತ್ಸವ ಇತ್ಯಾದಿ ಸಂದರ್ಭ ಬೀದಿಬದಿ ಸಂತೆ ವ್ಯಾಪಾರಕ್ಕೆ ಗುತ್ತಿಗೆ ನೀಡುತ್ತೇವೆ ಸರಕಾರಿ ಜಾಗಕ್ಕೆ ಶುಲ್ಕ ವಿಧಿಸುತ್ತೇವೆ ಖಾಸಗಿ ಜಾಗಕ್ಕೆ ಶುಲ್ಕ ವಿಧಿಸುವುದಿಲ್ಲ. ಅಂತಹ ಜಾಗಕ್ಕೂ ಶುಲ್ಕ ವಿಧಿಸಿ ಪುರಸಭೆ ಸುಂಕ ಪಡೆಯುವಂತಾಗಬೇಕು. ಈ ಬಗ್ಗೆ ಗೊಂದಲ ನಿವಾರಿಸಬೇಕು ಎಂದು ಸದಸ್ಯರು ಹೇಳಿದರು. ಬೀದಿ ನಾಯಿಗಳ ಸಮಸ್ಯೆಗೆ ಇನ್ನು ಪರಿಹಾರ ಸಿಗಲಿಲ್ಲ ಪ್ರತಿ ಬಾರಿಯೂ ಒತ್ತಾಯಿಸಿದಾಗ ಬಜೆಟ್ ನಲ್ಲಿ ಇಟ್ಟಿದ್ದೇವೆ ಎಂದು ನಾಯಿಕತೆ ಹೇಳುತ್ತಿದ್ದೀರಿ ವಿಪಕ್ಷ ನಾಯಕ ಅಷ್ಪಾಕ್ ಅಹಮದ್ ಪ್ರಶ್ನಿಸಿ ಬೀದಿ ನಾಯಿಗಳ ಜೊತೆ ಧರಣಿ ಕುಳಿತುಕೊಳ್ಳಬೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವರದಿ: ಅರುಣ ಭಟ್ ಕಾರ್ಕಳ

error: