May 8, 2024

Bhavana Tv

Its Your Channel

ಕಾರ್ಕಳದಲ್ಲಿ ಇನ್ನು ಮುಗಿಯದ ನೀತಿಸಂಹಿತೆ ?!!!!!!

ಕಾರ್ಕಳ ತಾಲೂಕಿನಲ್ಲಿ ನೀತಿಸಂಹಿತೆ ಪ್ರಯುಕ್ತ ಶಂಕುಸ್ಥಾಪನೆ ಹಾಗೂ ಕಾಮಗಾರಿ ಉದ್ಘಾಟನೆ ಫಲಕಗಳನ್ನು ಮುಚ್ಚಿದ್ದನ್ನು ಚುನಾವಣೆ ಮುಗಿದರು ತೆರೆವುಗೊಳಿಸದ ಪುರಸಭೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು 40 ದಿನಗಳಾದರೂ ಕಾರ್ಕಳದಲ್ಲಿ ಚುನಾವಣಾ ನೀತಿ ಸಂಹಿತೆ ಇನ್ನು ಜಾರಿಯಲ್ಲಿರುವುದು ತುಂಬಾ ಆಶ್ಚರ್ಯದಾಯಕ, ಮುಂಬರುವ ಲೋಕಸಭಾ ಚುನಾವಣೆ ಯ ವರೆಗೆ ಕಾರ್ಕಳದ ನೀತಿ ಸಹಿತ ಜಾರಿಯಲ್ಲಿ ಇರಬಹುದೆಂದು ಕಾರ್ಕಳ ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್ ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕಾರಣ ಚುನಾವಣೆ ಘೋಷಣೆಯಾದ ನಂತರ ಕಾರ್ಕಳ ತಾಲೂಕಿನಲ್ಲಿ ಎಲ್ಲೆಲ್ಲಿ ಶಂಕುಸ್ಥಾಪನೆ ಹಾಗೂ ಕಾಮಗಾರಿಗೆ ಉದ್ಘಾಟನೆ ಫಲಕಗಳ ಮೇಲೆ ಚುನಾವಣೆ ಅಧಿಕಾರಿಗಳು ಮತ್ತು ಪುರಸಭೆ ಸಿಬ್ಬಂದಿಗಳು ನಾಮ ಫಲಕಗಳ ಮೇಲೆ ಬಿತ್ತಿ ಪತ್ರ ಪತ್ರಗಳನ್ನು ಅಂಟಿಸಿ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಚುನಾವಣೆ ಮುಗಿದು ಹೊಸ ಸರಕಾರ ಬಂದು ಒಂದು ತಿಂಗಳಾದರೂ ಆ ಫಲಕಗಳ ಮೇಲೆ ಅಂಟಿಸಿದ ಬಿತ್ತಿಪತ್ರಗಳನ್ನು ಅಧಿಕಾರಿಗಳು ತೆಗೆಯುವ ಗೋಜಿಗೆ ಇಷ್ಟರ ತನಕ ಹೋಗದೆ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಇನ್ನಾದರೂ ಅಧಿಕಾರಿಗಳು ಆ ಬಿತ್ತಿಪತ್ರಗಳನ್ನು ತೆರವುಗೊಳಿಸ ಬಹುದೆಂದು ನಂಬಿರುತ್ತೇನೆ ಎಂದು ಪ್ರಕಾಶ್ ರಾವ್ ಮಾಧ್ಯಮದೊಂದಿಗೆ ಹೇಳಿಕೊಂಡರು.

ವರದಿ : ಅರುಣ ಭಟ್ ಕಾರ್ಕಳ

error: