
ಹೊನ್ನಾವರ; ಕಾಸರಕೋಡ ಟೊಂಕಾದಲ್ಲಿ ಹೊನ್ನಾವರ ಪೋರ್ಟ್ ಪ್ರೆöÊವೆಟ್ ಕಂಪನಿಯು ಕಾನೂನು ಬಾಹೀರವಾಗಿ ರಸ್ತೆಯ ಕಾಮಗಾರಿ ಮಾಡುತ್ತಿದೆ ಎಂದು ಆರೋಪಿಸಿ ತಕ್ಷಣ ಕಾಮಗಾರಿ ನಿಲ್ಲಿಸಬೇಕು ಎಂದು ಮೀನುಗಾರರು ವಿರೋಧಿüಸುತ್ತಿರುವ ಹಿನ್ನಲೆಯಲ್ಲಿ ಭಟ್ಕಳದ ಅಸಿಸ್ಟಂಟ್ ಕಮೀಶನರ್‌ರವರರ ಅಧ್ಯಕ್ಷತೆಯಲ್ಲಿ ಹೊನ್ನಾವರದ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ಸಭೆ ನಡೆಯಿತು.
ಮಾಜಿ ಶಾಸಕ ಮಂಕಾಳ ವೈದ್ಯ, ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಪೇಡರೇಷನ ಅಧ್ಯಕ್ಷ ರಾಜು ತಾಂಡೇಲ್, ವಿಜ್ಞಾನಿ ಪ್ರಕಾಶ ಮೇಸ್ತ ಸೇರಿದಂತೆ ಹಲವು ಮೀನುಗಾರರ ಮುಖಂಡರು ಅಧಿಕಾರಿಗಳೊಂದಿಗೆ ತೀವ್ರ ಚರ್ಚೆ ನಡೆಸಿದರು.
ಕಂಪನಿಯವರು ರಸ್ತೆ ಮಾಡುವ ಬಗ್ಗೆ ಎಲ್ಲಿಯು ಪರವಾನಿಗೆ ತೆಗೆದುಕೊಂಡಿಲ್ಲ. ಸರ್ಕಾರ ಕೂಡ ರಸ್ತೆ ನಿರ್ಮಿಸಲು ಯಾವದೇ ಭೂಮಿಯನ್ನು ಸೂಚಿಸಿಲ್ಲ. ಆದಾಗ್ಯು ಕೂಡ ಕಂಪನಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ನಿರ್ಮಿಸಲು ಹೋರಟಿದ್ದು ತಕ್ಷಣ ಕಾಮಗಾರಿ ನಿಲ್ಲಿಸಬೇಕೆಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು..
ಮಾಜಿ ಶಾಸಕ ಮಂಕಾಳ ವೈದ್ಯರವರು ಮಾತನಾಡಿ ರಸ್ತೆಯನ್ನು ಅನಧಿಕೃತವಾಗಿ ಮಾಡುತ್ತಿದ್ದಾರೆ, ಸರಿಯಾದ ಕಾಗದ ಪತ್ರಗಳು ಸಿದ್ದವಾಗದ ಹೊರತು, ಮೀನುಗಾರರಿಗೆ ಸಮರ್ಪಕ ಮಾಹಿತಿ ದೊರೆಯದ ಹೊರತು ಯಾವುದೇ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದರು.
ಉತ್ತರಕನ್ನಡ ಜಿಲ್ಲಾ ಮೀನುಗಾರರ ಪೇಡರೇಷನ ಅಧ್ಯಕ್ಷ ರಾಜು ತಾಂಡೇಲರವರು ಮಾತನಾಡಿ ಜಿಲ್ಲೆಯಲ್ಲಿ ಮೀನುಗಾರರಿಗೆ ಎಲ್ಲಾ ಕಡೆಯಲ್ಲಿ ಅನ್ಯಾಯವಾಗುತ್ತಿದೆ. ಆದಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸುಮಾರು ಮೂರು ತಾಸುಗಳ ಕಾಲ ದೀರ್ಘ ಚರ್ಚೆ ನಡೆಯಿತು. ವಿಜ್ಞಾನಿ ಪ್ರಕಾಶ ಮೇಸ್ತರವರು ಕಂಪನಿಯು ಕಾನೂನು ಬಾಹಿರವಾಗಿ ನಡೆಸುತ್ತಿರುವ ಕಾಮಗಾರಿಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು..
ಈ ಸಂದರ್ಭದಲ್ಲಿ ಪರ್ಸಿನ್ ಬೋಟ್ ಅಧ್ಯಕ್ಷ ಹಮ್ಜಾ, ಕಾರ್ಯದರ್ಶಿ ವಿವನ್ ಫರ್ನಾಡಿಂಸ್, ಮುಖಂಡರಾದ ಜಗದೀಶ ತಾಂಡೇಲ್, ಗಣಪತಿ ಈಶ್ವರ ತಾಂಡೇಲ್, ರಾಜೇಶ ತಾಂಡೇಲ್, ಶೇಷಗಿರಿ, ಗುರುದಾಸ ಬಾನವಳಿಕರ ಬೇಲೇಕೇರಿ, ಪ್ರಮೋದ ಬಾನಾವಳಿಕರ ಮುಂತಾದವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.