March 12, 2025

Bhavana Tv

Its Your Channel

ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ, ದೇಗುಲದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯಗಳು ಸೆರೆ

ಭಟ್ಕಳ ತಾಲ್ಲೂಕಿನ ಶಕ್ತಿದೇವತೆ ಎಂದೇ ಹೆಸರಾಗಿರುವ ಕೋಟೇಶ್ವರ ರಸ್ತೆಯಲ್ಲಿರುವ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದ್ದು,ದೇಗುಲದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯಗಳು ಸೆರೆ ಯಾಗಿದ ಘಟನೆ ನಡೆದಿದೆ.

ಭಾನುವಾರ ಮಧ್ಯರಾತ್ರಿ ಕಳ್ಳನು ಹಿಂಬದಿಯಲ್ಲಿರುವ ಬಾಗಿಲನ್ನು ತೆರೆದು ಪ್ರವೇಶಿಸಿದ್ದಾನೆ ದೇವಸ್ಥಾನದಲ್ಲಿ ಅಳವಡಿಸಿದ ಸಿ.ಸಿ ಕ್ಯಾಮರಾವನ್ನು ಒಡೆದು ಹಾನಿಪಡಿಸಿ, ದೇವಸ್ಥಾನದ ಒಳಗಡೆ ಇದ್ದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳುವು ಮಾಡಲು ಕಾಣಿಕೆ ಡಬ್ಬವನ್ನು ಒಡೆಯಲು ಪ್ರಯತ್ನಿಸಿದಾನೆ ನಂತರ ಹುಂಡಿಗಳನ್ನು ತೆರೆಯಲು ವಿಫಲ ಯತ್ನ ನಡೆದಿದೆ.ಯಾವ ವಸ್ತು, ನಗ-ನಾಣ್ಯವೂ ದೊರಕದಿದ್ದರಿಂದ ಕಳ್ಳನು ಅಲ್ಲಿಂದ ಕಾಲ್ಕಿತ್ತಿದ್ದಾನೆ ಈ ಸಂಬAಧ ನಗರ ಪೊಲೀಸ್ ಠಾಣೆಯಲ್ಲಿ ಮೋಹನ ತಂದೆ ಭದ್ರಾ ಶಿರಾಲೀಕರ ದೂರು ನೀಡಿದ್ದು ದೂರು ದಾಖಲಿಸಿ ಕೊಂಡ ಪಿ.ಎಸ್.ಐ ಹೆಚ್.ಕುಡಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆಗಾಗಿ ದೇವಸ್ಥಾನದ ಸಿಸಿ ಕ್ಯಾಮೆರಾದ ದೃಶ್ಯ ವನ್ನು ಪೋಲೀಸರು ಪಡೆದುಕೊಂಡಿದ್ದು, ಕಳ್ಳನು ಬಹುತೇಕ ಮುಖಮುಚ್ಚಿಕೊಂಡಿದ್ದು ಅಸಲಿ ಚಿತ್ರ ಪಡೆಯಲು ಕಷ್ಟಕರ ವಾಗಿದೆ,


ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದ್ದು ದೇಗುಲದಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳನ ಪತ್ತೆಗಾಗಿ ನಗರಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ.

error: