
ಭಟ್ಕಳ ; ದಿನಾಂಕ ೨೨-೧೨-೨೦೨೦ ರಂದು ನಡೆದ ಮಾವಳ್ಳಿ-೨(ಮುರ್ಡೇಶ್ವರ) ಪಂಚಾಯತ ಚುನಾವಣಾ ಪಲಿತಾಂಶದಲ್ಲಿ ಉದಯ ನಾಯಕ ೧೬೯ ಮತ ಪಡೆದು ಚುನಾಯಿತರಾಗಿದ್ದರು, ಅಣ್ಣಪ್ಪ ದೇವಾಡಿಗ ೧೬೮ ಮತ ಪಡೆದಿದ್ದರು. ಪಲಿತಾಂಶ ಸರಿ ಇಲ್ಲ ಮರು ಎಣಿಕೆ ಮಾಡಬೇಕು ಅಂತ ಅಣ್ಣಪ್ಪ ದೇವಾಡಿಗ ಪರವಾಗಿ ಅರ್ಜಿಸಲ್ಲಿಸಲಾಗಿತ್ತು. ೩೦-೧೨-೨೦೨೦ ರಂದು ಅರ್ಜಿ ತಿರಸ್ಕರಿಸಿ ಪಲಿತಾಂಶ ಪ್ರಕಟಿಸಲಾಗಿತ್ತು, ಈ ಆದೇಶ ಪ್ರಶ್ನಿಸಿ ಮಾನ್ಯ ಹೈಕೊರ್ಟ ಧಾರವಾಡದಲ್ಲಿ ರಿಟ್ ಪಿಟಿಷನ್ (ನಂ.೧೦೨೧೨೦/೨೦೨೧) ಸಲ್ಲಿಸಲಾಗಿದ್ದು ಅರ್ಜಿದಾರರ ಪರವಾಗಿ ದತ್ತಾತ್ರಯ ನಾಯ್ಕ ವಕೀಲರು ಹೈಕೋರ್ಟನಲ್ಲಿ ವಾದಮಂಡಿಸಿದ್ದರು, ಮಾನ್ಯ ನ್ಯಾಯಾಲಯ ಸರಕಾರ ಮತ್ತು ಚುನಾವಣಾ ಅಧಿಕಾರಿಗಳಿಗೆ ನೋಟಿಸ ಜಾರಿ ಮಾಡಿದೆ ಎಂದು ವಕೀಲರಾದ ದತ್ತಾತ್ರಯ ನಾಯ್ಕ ಮಾದ್ಯಮಕ್ಕೆ ತಿಳಿಸಿದ್ದಾರೆ..


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ