March 12, 2025

Bhavana Tv

Its Your Channel

ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತಜಾಲಿ ಇದರ ಮುಖ್ಯ ನಿರ್ವಾಹಕರಾಗಿ ನಿವೃತ್ತರಾದ ಶಾಂತಾರಾಮ ನಾಯ್ಕಅವರಿಗೆ ಹೃದಯಸ್ಫರ್ಶಿ ಬೀಳ್ಕೊಡುಗೆ

ಭಟ್ಕಳ ; ಜಾಲಿಯ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತಇದರ ಮುಖ್ಯಕಾರ್ಯ ನಿರ್ವಾಹಕರಾಗಿಅಮೂಲ್ಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಾಂತಾರಾಮ ನಾಯ್ಕಅವರಿಗೆ ಸಂಘದ ಆಡಳಿತ ಮಂಡಳಿಯಿAದ ಹೃದಯಸ್ಪರ್ಶಿ ಸನ್ಮಾನದೊಂದಿಗೆ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯಅಧ್ಯಕ್ಷ ಮಂಜಪ್ಪ ನಾಯ್ಕ ಮಾತನಾಡಿ ಶಾಂತಾರಾಮ ನಾಯ್ಕರವರ ನಿಷ್ಠೆ, ಕರ್ತವ್ಯಪರತೆ, ಪ್ರಾಮಾಣಿಕತಯೇ ಸಂಸ್ಥೆ ಅತ್ಯಂತ ಸದೃಢವಾಗಿ ಬೆಳೆಯಲು ಪ್ರಮುಖಕಾರಣವಾಗಿದೆ. ಅವರ ಈ ಅನುಪಮ ಸೇವೆ ಎಲ್ಲರಿಗೂ ಪ್ರೇರಣೆ ಹಾಗೂ ಮಾದರಿಯಾಗಿದೆಎಂದುಅವರ ನಿವೃತ್ತಿಯ ನಂತರವೂ ಸಂಸ್ಥೆಗೆ ಅವರ ಸಲಹೆ ಸೂಚನೆ ಮಾರ್ಗದರ್ಶನಅಗತ್ಯಎಂದು ನುಡಿದು ನಿವೃತ್ತಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಗಳನ್ನಾಡಿದ ಸಂಸ್ಥಾಪಕ ಸದಸ್ಯ ಮಾಜಿ ಅಧ್ಯಕ್ಷರಾದ ಡಿ.ಬಿ.ನಾಯ್ಕ ಮಾತನಾಡಿ ಶಾಂತಾರಾಮ ನಾಯ್ಕಅವರು ಸಂಬಳಕ್ಕಾಗಿ ಕೆಲಸಮಾಡಿದವರಲ್ಲ, ಸಂಸ್ಥೆಯನ್ನುಕಟ್ಟುವುದಕ್ಕಾಗಿ ಕೆಲಸ ಮಾಡಿರುವಂತಹಅಪರೂಪದ ವ್ಯಕ್ತಿ. ಅವರ ನಿರಂತರ ಪರಿಶ್ರಮ, ಎಲ್ಲರ ಸಹಕಾರವನ್ನು ಪಡೆದು ಕೆಲಸ ನಿರ್ವಹಿಸುವಂತಹಚಾತುರ್ಯ, ಸಂಘದ ಸದಸ್ಯರ ಹಿತದೃಷ್ಠಿಯ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದ್ದರಿಂದ ಸಂಸ್ಥೆಯನ್ನು ಸುಭದ್ರವಾಗಿಕಟ್ಟಲು ಸಾಧ್ಯವಾಗಿದೆ. ಅವರ ಸೇವೆ ಸದಾ ನೆನಪಿಡುವಂಥದ್ದುಎAದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತಾರಾಮ ನಾಯ್ಕತಮ್ಮ ಬದುಕನ್ನುರೂಪಿಸಲು ಕಾರಣರಾದಎಲ್ಲರನ್ನು ನೆನೆದುಕೃತಜ್ಙತೆ ಅರ್ಪಿಸಿದರು. ಸಂಸ್ಥೆಯನ್ನು ಬೆಳೆಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿದುಡಿದ ಸಂತೃಪ್ತಿಯಿAದಲೇ ನಿವೃತ್ತನಾಗಿದ್ದೇನೆ. ಒಂದು ಕಾಲಕ್ಕೆ ನಮ್ಮಜೀವನ ಸಂಸ್ಥೆಯಿAದ ಸಾಗಿಸಲು ಸಾಧ್ಯವೇ ಎಂಬ ಅನುಮಾನಗಳು ಇದ್ದಾಗ್ಯೂಎಲ್ಲ ಹಿರಿಯರ ಮಾರ್ಗದರ್ಶನದಿಂದ ಸಂಸ್ಥೆಯನ್ನು ಮುನ್ನಡೆಸಲು ಶ್ರಮಿಸಿದ್ದೇನೆ. ತಾನು ಓರ್ವ ಉತ್ತಮ ಕಾರ್ಯನಿರ್ವಾಹಕನಾಗಿ ರೂಪುಗೊಳ್ಳಲು ಅನೇಕ ಮಹನಿಯರು ಕಾರಣರಾಗಿದ್ದಾರೆ. ಸಹಕರಿಸಿದ ಪ್ರತಿಯೋರ್ವರ ಸಹಕಾರವನ್ನು ನೆನೆದುಕೃತಜ್ಙತೆ ಸಲ್ಲಿಸಿ ಮುಂದೆಯೂ ಸಂಸ್ಥೆಯಅಭಿವೃದ್ದಿಗೆತನ್ನಿAದಾದ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು..
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ನಿಕಪೂರ್ವ ಅಧ್ಯಕ್ಷರವಿ ನಾಯ್ಕ
ನಿರ್ದೇಶಕರತ್ನಾಕರಖಾರ್ವಿ ಮಾತನಾಡಿ ಶಾಂತಾರಾಮ ನಾಯ್ಕರವರ ನಿಷ್ಠೆ, ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.
ನೂರಾರುಗಣ್ಯ ವ್ಯಕ್ತಿಗಳು ಶಾಂತಾರಾಮ ನಾಯ್ಕಅವರನ್ನು ಅಭಿನಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಮಾಜಿಅಧ್ಯಕ್ಷ ಸಂಕಪ್ಪ ನಾಯ್ಕ, ಸಂಘದಉಪಾಧ್ಯಕ್ಷರು, ನಿರ್ದೇಶಕರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ನಿರ್ವಾಹಕಗೊಯ್ದಯ್ಯ ನಾಯ್ಕಎಲ್ಲರನ್ನು ಸ್ವಾಗತಿಸಿದರು. ಮಂಜುನಾಥ ನಾಯ್ಕ ಪ್ರಾರ್ಥಿಸಿದರೆ ಗಂಗಾಧರ ನಾಯ್ಕ ನಾರಾಯಣ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಬ್ಯಾಂಕಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

error: