
ಭಟ್ಕಳ ; ನಗರ ನಿವಾಸಿ ದೀಪಾ ಬಸ್ರೂರ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ ಪಿಎಚ್ .ಡಿ ಪದವಿ ಪ್ರಧಾನ ಮಾಡಿದೆ.
ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ರಾಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಶ್ರೀ ಬಾಲಕೃಷ್ಣ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ ವಿವಿಧ ವರ್ಣಗಳ ಮೇಲೆ ಸಸ್ಯ ಮೂಲದ ಕಾರ್ಬನ್ನ ಹೊರ ಹೀರುವಿಕೆಯ ಗುಣಲಕ್ಷಣಗಳು (An Investigation On The Adsorption Characteristics Of Plant Originated Carbon On Various Dyes )ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದರು.
ಉಮಾನಾಥ ಬಸ್ರೂರ ಮತ್ತು ಸುಮಾ ಬಸ್ರೂರ ಅವರ ಮಗಳಾದ ದೀಪಾ ಬಸ್ರೂರ ಅವರ ಈ ಸಾಧನೆಗೆ ಕುಟುಂಬಸ್ಥರು, ಶ್ರೀ ಕೆರೆಗದ್ಧೆ ಮಹಾಸತಿ ಯುವಕ ಸಂಘ ಹಾಗೂ ಊರಿನ ಮುಖಂಡರು ಅಭಿನಂದಿಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ