May 6, 2024

Bhavana Tv

Its Your Channel

ಭಟ್ಕಳ ತಾಲೂಕು ಯೋಜನಾ ಕಚೇರಿ ಉದ್ಘಾಟಿಸಿದ ಡಾ. ಎಲ್. ಎಚ್. ಮಂಜುನಾಥ.

ಭಟ್ಕಳ: ಮುರ್ಡೇಶ್ವರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟಿನ ನೂತನವಾಗಿ ಆರಂಭವಾದ ಯೊಜನೆಯ ಭಟ್ಕಳ ತಾಲೂಕು ಯೋಜನಾ ಕಚೇರಿಯನ್ನು ಉದ್ಘಾಟಿಸಿದ ಬಿ.ಸಿ. ಟ್ರಸ್ಟಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ.

ನಂತರ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಜನರು ಅತ್ಯಂತ ಸರಳವಾಗಿ ಜೀವನ ಪದ್ಧತಿಯನ್ನು ಹೊಂದಿದವರು, ಇಲ್ಲಿನ ವಿದ್ಯಾವಂತರು ದೇಶ ವಿದೇಶದಲ್ಲಿ ಉದ್ಯೋಗ ವ್ಯವಹಾರ ಮಾಡಿಕೊಂಡಿರುವವರು ಎಂದು ಹೇಳಿದರು.

೨೦೦೫ರಲ್ಲಿ ಹೊನ್ನಾವರದಿಂದ ಆರಂಭವಾದ ನಮ್ಮ ಯೋಜನೆಯ ಕಾರ್ಯಕ್ರಮ ಇಂದಿನ ತನಕವೂ ಅತ್ಯಂತ ಯಶಸ್ವೀಯಾಗಿ ನಡೆಯುತ್ತಿದೆ. ಹೊನ್ನಾವರ ಯೋಜನಾ ಕಚೇರಿಯ ಕಾರ್ಯ ಆರಂಭದಿAದಲೂ ಉತ್ತಮವಾಗಿಯೇ ನಡೆದುಕೊಂಡು ಬಂದಿದ್ದು ಇಲ್ಲಿನ ತನಕ ಸುಮಾರು ೪೦೦೦ ಸಂಘಗಳು ಕೆಲಸ ಮಾಡುತ್ತಿವೆ. ಉತ್ತರ ಕನ್ನಡ ಜಿಲ್ಲೆಗೆ ಒಟ್ಟೂ ೩೦೦೦ ಕೋಟಿ ರೂಪಾಯಿ ಸಾಲ ನೀಡಿದ್ದೇವೆ. ನಮ್ಮಲ್ಲಿ ಯಾವುದೆ ಜಾತಿ ಬೇಧವಿಲ್ಲ, ಬಡವ ಶ್ರೀಮಂತ ಎನ್ನುವ ಬೇಧವೂ ಇಲ್ಲ, ಎಲ್ಲರೂ ಒಟ್ಟಾಗಿ ಯೋಜನೆಯನ್ನು ಕೊಂಡು ಹೋಗುವ ಕಾರ್ಯ ಮಾಡುತ್ತಿರುವುದು ಯೋಜನೆಯ ಯಶಸ್ಸಿಗೆ ಮುಖ್ಯ ಕಾರಣವಾಗಿದೆ ಎಂದ ಅವರು ಎಲ್ಲರೂ ಸೇರಿಕೊಂಡು ಮುನ್ನೆಡೆದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದೂ ಹೇಳಿದರು.
ಯೋಜನೆಯ ವಿವಿಧ ಆರೋಗ್ಯ ವಿಮೆಯ ಕುರಿತು ವವರಿಸಿದ ಅವರು ಅನೇಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಯಾವುದೇ ರೀತಿಯ ಕಾಯಿಲೆ ಬಂದರೂ ಸಹ ನಮ್ಮ ಯೋಜನೆಯಡಿಯಲ್ಲಿ ವಿಮಾ ಹಣವನ್ನು ಪಡೆಯಬಹುದು. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು ಹಣ ಕಟ್ಟುವ ಅಗತ್ಯವೂ ಇಲ್ಲ, ಕ್ಯಾಶ್‌ಲೆಸ್ ವ್ಯವಸ್ಥೆ ಕೂಡಾ ಇದೆ ಎಂದ ಅವರು ನೂತನವಾಗಿ ಆರೋಗ್ಯ ರಕ್ಷಾ ಯೋಜನೆಯನ್ನು ತಂದಿದ್ದು ಅತ್ಯಂತ ಕಡಿಮೆ ವಿಮಾ ಮೊತ್ತ ಪಾವತಿಸಿ ಇದರ ಸೌಲಭ್ಯ ಪಡೆಯಬಹುದು ಎಂದೂ ಹೇಳದರು. ಸದಸ್ಯರು ಯಾವುದೇ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳಬಾರದು, ಅದೇ ರೀತಿಯಾಗಿ ವಿಮಾ ಯೋಜನೆಯನ್ನು ಸಹ ದುರುಪಯೋಗ ಪಡಿಸಿಕೊಳ್ಳದೇ ಪ್ರಯೋಜನ ಪಡೆಯಿರಿ ಎಂದೂ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಾಭಾಂಶ ವಿತರಣೆ, ಸೋಲಾರ್ ದೀಪ ವಿತರಣೆ ಮಾಡಿ ಪ್ರಗತಿ ರಕ್ಷಾ ಕವಚ ಸೌಲಭ್ಯವನ್ನು ವಿತರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಮೀಣ ಭಾಗದಲ್ಲಿನ ಜನತೆಗೆ ಇದು ಅತ್ಯಂತ ಸಹಕಾರಿಯಾಗಿದ್ದು, ಯೋಜನೆಯಿಂದಾಗಿ ಇಂದು ಲಕ್ಷಾಂತರ ಜನರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಭಟ್ಕಳದಲ್ಲಿಯೇ ಯೋಜನಾ ಕಚೇರಿಯನ್ನು ಹೊಂದಿರುವುದು ಇನ್ನಷ್ಟು ಅಭಿವೃದ್ಧಿಗೆ ಸಹಕಾರಿಯಾಗಿದೆ, ಇನ್ನೂ ಹೆಚ್ಚಿನ ಸೌಲಭ್ಯ ನಮ್ಮ ಜನತೆಗೆ ದೊರೆತು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದೂ ಅವರು ಹಾರೈಸುತ್ತಾ, ತಮ್ಮ ಎಲ್ಲಾ ರೀತಿಯ ಸಹಕಾರ ಯೋಜನೆಗೆ ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಮದೇವಿ ತಿಮ್ಮಪ್ಪ ಮೊಗೇರ ವಹಿಸಿದ್ದರು.
ಎಸ್.ಬಿ.ಐ. ವಿಭಾಗೀಯ ಪ್ರಾದೇಶಿಕ ಕಚೇರಿ ಕಾರವಾರದ ಪ್ರಧಾನ ವ್ಯವಸ್ಥಾಪಕ ವಿಜಯ ಕೆ.ಟಿ. ಮಾತನಾಡಿ ಸ್ವ ಸಹಾಯ ಸಂಘಗಳಿಗೆ ಬ್ಯಾಂಕಿನಿAದ ದೊರೆಯುವ ಸಾಲ ಸೌಲಭ್ಯದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್ ಶೆಟ್, ಹೊನ್ನಾವರ ಭಾಗದ ಪ್ರಮುಖರಾದ ಚಂದ್ರಶೇಖರ ಗೌಡ, ಕಟ್ಟಡ ಮಾಲೀಕರ ಸಹೋದರ ನಾಗೇಶ ಭಟ್ಟ ಉಪಸ್ಥಿತರಿದ್ದರು.
ಶಕುಂತಲಾ ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕ ನಾಗರಾಜ ನಿರೂಪಿಸಿದರು. ಭಟ್ಕಳ ತಾಲೂಕಾ ಯೋಜನಾಧಿಕಾರಿ ಚಂದ್ರಹಾಸ ಬಿ. ವಂದಿಸಿದರು.

error: