May 7, 2024

Bhavana Tv

Its Your Channel

ಮೈಸೂರಿನ ದೇವಾಲಯ ಧ್ವಂಸ ಪ್ರಕರಣಕ್ಕೆ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹಿಂ.ಜಾ.ವೇ.ಯಿOದ ಸೆಪ್ಟೆಂಬರ್ ೨೭ ರ ವರೆಗೆ ಗಡುವು’

ಭಟ್ಕಳ: ದೇವಾಲಯಗಳ ಧ್ವಂಸ ಪ್ರಕರಣಗಳಿಗೆ ಸಂಬAಧಿಸಿದAತೆ ಹಿಂದೂ ಜಾಗರಣ ವೇದಿಕೆಯ ಇಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಗಡುವಿನ ಒಳಗಾಗಿ ಒಪ್ಪಿಕೊಂಡು ಸರ್ಕಾರಕ್ಕೆ ಸೂಚಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕದ ವತಿಯಿಂದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಹಾಗೂ ಆದೇಶದ ಪೂರಕವಾಗಿ ೨೦೦೯ ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಧಿಕ್ಕರಿಸಿ ರಾಜ್ಯದ ಅಧಿಕಾರಿಶಾಹಿಗಳು ಕರ್ನಾಟಕದೆಲ್ಲೆಡೆ ಹಿಂದೂ ದೇವಾಲಯಗಳ ನಾಶಪಡಿಸುವ ಕೃತ್ಯವನ್ನು ಮೈಸೂರಿನಿಂದ ಆರಂಭಿಸಿದ್ದು, ಅದಕ್ಕೆ ಮೊಟ್ಟ ಮೊದಲ ಬಲಿ ನಂಜನಗೂಡು ತಾಲ್ಲೂಕಿನ ಹುಚ್ಚ ಗಣಿ ಗ್ರಾಮದ ಪುರಾಣ ಪ್ರಸಿದ್ಧ ‘ಶ್ರೀ ಆದಿಶಕ್ತಿ ಮಹಾದೇವಮ್ಮ ಹಾಗೂ ಶ್ರೀ ಭೈರವೇಶ್ವರ ದೇವಸ್ಥಾನ’ ವಾಗಿದ್ದು, ಇದರ ವಿರುದ್ಧ ಕರ್ನಾಟಕ ಹಿಂದೂ ಸಮಾಜ ಕೆಂಡಾಮAಡಲವಾಗಿ ಸಿಡಿದೆದ್ದಿದ್ದು, ರಾಜ್ಯದೆಲ್ಲೆಡೆ ತೀವ್ರ ಪ್ರತಿಭಟನೆ ಆರಂಭವಾಗಿದೆ.

ಈ ವಿಷಯದಲ್ಲಿ ಕರ್ನಾಟಕ ಹಿಂದೂ ಜಾಗರಣ ವೇದಿಕೆಯು ನಿನ್ನೆ ಮೈಸೂರಿನಲ್ಲಿ ಭಾರೀ ಪ್ರತಿಭಟನಾ ಪ್ರದರ್ಶನವನ್ನು ನಡೆಸಿ ರಾಜ್ಯ ಸರ್ಕಾರಕ್ಕೆ ತೀವ್ರ ರೀತಿಯ ಎಚ್ಚರಿಕೆಯನ್ನು ನೀಡಿ, ತುಂಬಿದ ಸಭೆಯು ಈ ಕೆಳಕಂಡ ಮಹತ್ವದ ೪ ನಿರ್ಣಯಗಳನ್ನು ಕೈಗೊಂಡಿದ್ದು, ಅವುಗಳ ಈಡೇರಿಕೆಗಾಗಿ ಸರ್ಕಾರ ಹತ್ತು ದಿನಗಳ ಕಾಲಾವಕಾಶವನ್ನು ಕೊಟ್ಟಿರುತ್ತದೆ. ಆ ಸಿಡಿದೆದ್ದ ಹಿಂದೂ ಜನಸ್ತೋಮದ ಆ ಸಭೆಯೂ ಒಕ್ಕೊರಲಿನಿಂದ ಸ್ವಿ?ಕರಿಸಿದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

೧. ಹುಚ್ಚು ಗಣಿ ಗ್ರಾಮದ ಆ ಪುರಾತನ ದೇವಸ್ಥಾನವನ್ನು ಕಾನೂನುಬಾಹಿರವಾಗಿ ಧ್ವಂಸಗೊಳಿಸಲು ಕಾರಣವಾದ ಮೈಸೂರಿನ ಜಿಲ್ಲಾಧಿಕಾರಿಗಳ ಹಾಗೂ ನಂಜನಗೂಡು ತಹಸೀಲ್ದಾರ್ ತಲೆದಂಡವನ್ನು ಸರ್ಕಾರ ಪಡೆಯಬೇಕು.

೨. ಸರ್ಕಾರಿ ಅಧಿಕಾರಿಗಳು ಎಸಗಿದ ಈ ಕೃತ್ಯಕ್ಕಾಗಿ ರಾಜ್ಯ ಸರ್ಕಾರವು ರಾಜ್ಯದ ಹಿಂದೂಗಳಲ್ಲಿ ಬಹಿರಂಗ ಕ್ಷಮೆ ಕೇಳಬೇಕು.

೩. ಅಧಿಕಾರಿಗಳು ಎಸಗಿರುವ ಮಹಾ ಅಪರಾಧದ ಪ್ರಾಯಶ್ಚಿತಕ್ಕಾಗಿ ಆ ಮಂದಿರದ ಪುನರ್ ನಿರ್ಮಾಣ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೆuಟಿಜeಜಿiಟಿeಜಳ್ಳಬೇಕು.

೪. ರಾಜ್ಯದ ಸಾರ್ವಜನಿಕ ಹಿಂದೂ ದೇವಾಲಯಗಳ ಶಾಶ್ವತ ಸುರಕ್ಷತೆಗಾಗಿ ಸುಪ್ರೀಂಕೋರ್ಟ್ ನ ಆದೇಶದ ಅನ್ವಯ ವಿಶೇಷ ಕಾನೂನನ್ನು ರಚಿಸಿ ತಕ್ಷಣವೇ ಜಾರಿಗೊಳಿಸಬೇಕು.

೫. ಅದೇ ರೀತಿ ದೇವಸ್ಥಾನ ಧ್ವಂಸ ಪ್ರಕರಣಗಳು ತಮ್ಮ ಕಾರವಾರ ಜಿಲ್ಲೆಯಲ್ಲಿ ನಡೆದರೆ ಅಲ್ಲಿಯೂ ಸಮಗ್ರ ಪ್ರತಿಭಟನೆಯನ್ನು ಮಾಡಲಾಗುವುದು. ಅದಕ್ಕಾಗಿ ಅಧಿಕಾರಿಗಳು ಈಗಾಗಲೇ ಜಿಲ್ಲೆಯ ದೇವಸ್ಥಾನಗಳನ್ನು ಧ್ವಂಸಗೊಳಿಸುವ ಸೂಚನೆಯು ಗಮನಕ್ಕೆ ಬಂದಿದ್ದಲ್ಲಿ ಕೂಡಲೇ ನಿಲ್ಲಿಸಬೇಕು.

ಜಾಗರಣೆ ಜಾಗರಣೆ ವೇದಿಕೆ ನೀಡಿರುವ ಗಡುವನ್ನು ಸೆಪ್ಟೆಂಬರ್ ೨೭ ರಂದು ಮುಕ್ತಾಯಗೊಳ್ಳಲಿದ್ದು ಅಷ್ಟರೊಳಗಾಗಿ ಸರ್ಕಾರವು ದಿಟ್ಟ ನಿಲುವನ್ನು ತೆಗೆದುಕೊಳ್ಳಬೇಕು. ಅಕಸ್ಮಾತ್ ಸರ್ಕಾರ ಇದನ್ನು ನಿರ್ಲಕ್ಷಿಸಿದರೆ ಹಿಂದೂ ಜಾಗರಣ ವೇದಿಕೆ ತೀವ್ರ ರೀತಿಯ ಜನಾಂದೋಲನವನ್ನು ನಡೆಸಲು ನಿರ್ಧರಿಸಿರುತ್ತದೆ.

ಅದರ ಮೊದಲ ಹಂತವಾಗಿ ಸೆಪ್ಟೆಂಬರ ೨೮ ರಂದು ಮೈಸೂರಿನಿಂದ ಬೆಂಗಳೂರಿಗೆ ‘ಪಾದಯಾತ್ರೆ’ ಯನ್ನು ಹಮ್ಮಿಕೊಂಡಿರುತ್ತದೆ. ಅನಾವಶ್ಯಕ ಸಂಘರ್ಷಕ್ಕೆ ಅವಕಾಶವನ್ನು ನೀಡದೇ ಅಷ್ಟರೊಳಗೆ ಹಿಂದೂ ಜಾಗರಣ ವೇದಿಕೆ ನೀಡಿರುವ ನಾಲ್ಕು ವಿಷಯದ ಕುರಿತು ರಾಜ್ಯ ಸರ್ಕಾರ ಗಂಭೀರ ತೀರ್ಮಾನವನ್ನು ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರ್ನಾಟಕ ಹಿಂದೂ ಜಾಗರಣ ವೇದಿಕೆ ಮನವಿಯಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಿಂ.ಜಾ.ವೇ. ತಾಲೂಕು ಘಟಕದ ಅಧ್ಯಕ್ಷ ವಾಸು ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ದಿನೇಶ ಗವಾಳಿ, ಹಿರಿಯ ಕಾರ್ಯಕರ್ತ ರಾಮಕೃಷ್ಣ ನಾಯ್ಕ, ಹನುಮಂತ ನಾಯ್ಕ, ತುಳಸಿದಾಸ ನಾಯ್ಕ, ಹಿಂ.ಜಾ.ವೇ. ಶ್ರೀನಿವಾಸ ನಾಯ್ಕ, ದೀಪಕ ನಾಯ್ಕ, ಉದಯ ನಾಯ್ಕ, ವೆಂಕಟೇಶ ನಾಯಕ ಮುಂತಾದವರು ಇದ್ದರು.

error: