May 8, 2024

Bhavana Tv

Its Your Channel

ಭಾರತ್ ಬಂದ್‌ಗೆ ಭಟ್ಕಳ ಕಾಂಗ್ರೆಸ್ ಪಕ್ಷ ಬೆಂಬಲ; ಶಂಶುದ್ಧೀನ್ ಸರ್ಕಲ್‌ನಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಭಟ್ಕಳ: ಕೇಂದ್ರದಲ್ಲಿರುವ ಎನ್.ಡಿ.ಎ. ಸರಕಾರ ರೈತ ವಿರೋಧಿಯಾಗಿದ್ದು ರೈತರು ಧರಣಿ ಮಾಡುತ್ತಿರುವುದನ್ನು ಹತ್ತಿಕ್ಕಲು ಹವಣಿಸುತ್ತಿದೆ ಎಂದು ಆರೋಪಿಸಿ ಕರೆ ನೀಡಿದ್ದ ಭಾರತ್ ಬಂದ್ ಭಟ್ಕಳ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದು ಇಲ್ಲಿನ ಶಂಶುದ್ಧೀನ್ ಸರ್ಕಲ್‌ನಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಾ ಮೊಗೇರ ಅವರು ಕೇಂದ್ರದಲ್ಲಿರುವ ಎನ್.ಡಿ.ಎ. ನೇತೃತ್ವದ ಸರಕಾರ ಜನವಿರೋಧಿ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರು ಹಲವಾರು ತಿಂಗಳುಗಳಿAದ ಪ್ರತಿಭಟನೆಯನ್ನು ನಡೆಸುತ್ತಿದ್ದರೂ ಸಹ ಸರಕಾರ ಅವರೊಂದಿಗೆ ಮಾತುಕತೆಗೆ ಮುಂದಾಗದಿರುವುದು ಖಂಡನೀಯವಾಗಿದೆ ಎಂದರು. ರೈತರ ಮೂರು ಕರಾಳ ಕಾನೂನು ತಂದಿರುವುದನ್ನು ವಾಪಾಸು ಪಡೆಯಬೇಕು. ರೈತರು ಈ ದೇಶದ ಬೆನ್ನುಲುಬಾಗಿದ್ದಾರೆ, ಅವರು ಬೆಳೆಯನ್ನು ಬೆಳೆದರೆ ಮಾತ್ರ ನಾವು ಆಹಾರ ಸೇವಿಸಬಹುದು. ಆದರೆ ಬಿ.ಜೆ.ಪಿ.ಯವರಿಗೆ ಇವರ ಬಗ್ಗೆ ಕನಿಷ್ಟ ಸೌಜನ್ಯವೂ ಇಲ್ಲದೇ ಆರೇಳು ತಿಂಗಳಿನಿAದ ಗಾಳಿ, ಮಳೆ, ಚಳಿಯಿಂದ ಪ್ರತಿಭಟನೆಯನ್ನು ಮುಂದುವರಿಸುವವರನ್ನು ಮಾತುಕತೆಗೆ ಕರೆಯದೇ ಅನ್ಯಾಯ ಮಾಡಿದೆ ಎಂದರು. ಕೃಷಿ ಕಾಯ್ದೆ, ಕಾರ್ಮಿಕ ಕಾಯಿದೆಯನ್ನು ತಕ್ಷಣ ಹಿಂಪಡೆಯಬೇಕು ಎಂದೂ ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರ ಜನವಿರೋಧಿಯಾಗಿದೆ. ರೈತರು ಹಲವಾರು ಸಮಯದಿಂದ ಪ್ರತಿಭಟನೆ ನಡೆಸಿದರೂ ಸಹ ಅವರನ್ನು ಮಾತನಾಡಿಸುವ ಸೌಜನ್ಯವನ್ನು ತೋರಿಸಿಲ್ಲ, ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಿದೆ. ಮಹಿಳೆಯರ ಕುರಿತು ಗೌರವವನ್ನು ಹೊಂದಿರದ ಸರಕಾರ ಒಂದು ದಿನವೂ ಅಧಿಕಾರದಲ್ಲಿರಲು ಹಕ್ಕಿಲ್ಲ. ಕೇಂದ್ರ ಸರಕಾರ ತೈಲ ಬೆಲೆಯನ್ನು ಇಳಿಸಬೇಕು, ಕೃಷಿ ಕಾಯ್ದೆಯನ್ನು ರದ್ದುಪಡಿಸಬೇಕು, ಕಾರ್ಮಿಕ ಕಾಯಿದೆ ತಿದ್ದುಪಡಿಯನ್ನು ಸಹ ರದ್ದು ಪಡಿಸಬೇಕು. ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಭರವಸೆ ನೀಡಿದ ಅವರು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕನೂ ಕೂಡಾ ಪ್ರತಿಭಟನೆಗೆ ಇಳಿಯಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದೂ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ರಾಜ್ಯದಲ್ಲಿ ಅನೇಕ ಮಹಿಳೆಯರ ಮೇಲೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಅವರು ಮಾತನಾಡಿ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಯುವಕ ಕಾಂಗ್ರೆಸ್ ಪ್ರಮುಖರು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮಟ್ಟಾ ಸಾಧಿಕ್, ಕಾಂಗ್ರೆಸ್ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

error: