March 14, 2025

Bhavana Tv

Its Your Channel

ಯುವತಿ ನಾಪತ್ತೆ, ತಂದೆಯಿ0ದ ಪೊಲೀಸರಿಗೆ ದೂರು,

ಭಟ್ಕಳ ; ಕೆಲಸಕ್ಕೆ ಹೋಗುತ್ತೆನೆ ಎಂದು ಕುಂದಾಪುರಕ್ಕೆ ತೆರಳಿದ ಯುವತಿಯೊರ್ವಳು ಆತ್ತ ಕೆಲಸಕ್ಕೂ ತೆರಳದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾಳೆ ಎಂದು ತಂದೆ ಭಟ್ಕಳ ಶಹರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೊನ್ನಾವರ ತಾಲೂಕಿನ ಮಂಕಿಯ ಅಡುಕಾಲ್ ಯತ್ನಳ್ಳಿ ನಿವಾಸಿ ತಾರಾ ನಾರಾಯಣ ಮರಾಠಿ (೧೯) ನಾಪತ್ತೆಯಾದ ಯುವತಿ. ಇವಳು ನ.೫ರಂದು ಕುಂದಾಪುರಕ್ಕೆ ಕೆಲಸಕ್ಕೆಂದು ಹೋಗುತ್ತೇನೆಎಂದು ಮನೆಯಿಂದ ಹೊರಟ್ಟಿದ್ದಳು. ಬಳಿಕ ಕುಂದಾಪುರಕ್ಕೂ ತೆರಳದೆ ಮನೆಗೂ ಮರಳಲಿಲ್ಲ. ಸಂಬAಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದು ಇವಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಾರಾಯಣ ಮರಾಠಿ ಭಟ್ಕಳ ಶಹರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: