May 4, 2024

Bhavana Tv

Its Your Channel

ಶ್ರೀ ವಾಸುಕಿ ಸೌಹಾರ್ದ ಸಹಕಾರಿ ನಿಯಮಿತ ಉದ್ಘಾಟಣೆ

ಭಟ್ಕಳ: ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಸೇವೆಯ ಧೈಯೋದ್ದೇಶಗಳೊಂದಿಗೆ ಭಟ್ಕಳ ಸರ್ಪನಕಟ್ಟೆಯಲ್ಲಿ ಸ್ಥಾಪಿಸಲಾದ ಶ್ರೀ ವಾಸುಕಿ ಸೌಹಾರ್ದ ಸಹಕಾರಿ ನಿಯಮಿತ ಇದರ ಉದ್ಘಾಟನೆ ಯನ್ನು ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಿ. ಶೆಟ್ಟಿ ಉದ್ಘಾಟಿಸಿದರು.

ಸ್ಟಾçಂಗ್ ರೂಮ್ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸುನಿಲ್ ಬಿ. ನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬ್ಯಾಂಕಿAಗ್ ವ್ಯವಸ್ಥೆ ಅತ್ಯಗತ್ಯವಾಗಿದೆ. ತಾಲೂಕಿನ ಸರ್ಪನಕಟ್ಟೆ ಪ್ರದೇಶ ಉದ್ಯಮ, ಕೈಗಾರಿಕೆಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಇಂತಹ ಪ್ರದೇಶದಲ್ಲಿ ಶ್ರೀ ವಾಸುಕಿ ಸಹಕಾರಿ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಭಟ್ಕಳ ಅರ್ಬನ್ ಬ್ಯಾಂಕ್‌ನAತಹ ಜನ ಸ್ನೇಹಿ ಬ್ಯಾಂಕಿನಲ್ಲಿ ಕ್ಲರ್ಕ ಹುದ್ದೆಯಿಂದ ಪ್ರಧಾನ ವ್ಯವಸ್ಥಾಪಕ ಹುದ್ದೆಯವರೆಗೆ ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸುಭಾಶ್ ಶೆಟ್ಟಿಯವರ ಮಾರ್ಗದರ್ಶನ ವಾಸುಕಿ ಸಹಕಾರಿಗೆ ಸಿಗುತ್ತಿರುವುದು ನೂತನ ಸಹಕಾರಿಯ ಹೆಚ್ಚುಗಾರಿಕೆಯಾಗಿದೆ. ಗ್ರಾಹಕರಿಗೆ
ಉತ್ತಮವಾಗಿ ಸ್ಪಂಧಿಸುವ ಮೂಲಕ ವಾಸುಕಿ ಸಹಕಾರಿಯು ಎತ್ತರಕ್ಕೆ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಸುರಕ್ಷಿತ ಠೇವಣಿ ಲಾಕರ್ ಅನ್ನು ಭಟ್ಕಳ ಮುಂಡಳ್ಳಿ ಲೇಡಿ ಲೂರ್ಡ್ಸ್ ಚರ್ಚಿನ ಫಾದರ್ ಪ್ರೇಮಕುಮಾರ್ ಡಿಸೋಜಾ, ಮೊಬೈಲ್ ಬ್ಯಾಂಕಿAಗ್ ಉದ್ಘಾಟನೆಯನ್ನು ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ಕಂಪ್ಯೂಟರ್ ಉದ್ಘಾಟನೆಯನ್ನು ಚಾರ್ಟೆಡ್ ಅಕೌಂಟೆAಟ್ ಮಂಜುನಾಥ ಶೆಟ್ಟಿ ಉದ್ಘಾಟಿಸಿದರು.
ಯಲ್ವಡಿಕವೂರು ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಶ್ರೀ ಗೋಪಾಲಕೃಷ್ಣ ಶ್ರೀ ಲಕ್ಷ್ಮೀನಾರಾಯಣ ಮತ್ತು ಹನುಮಂತ ದೇವಸ್ಥಾನ ಭಟ್ಕಳ ಇದರ ಮೊಕ್ತೇಸರ ಮಹಾಬಲೇಶ್ವರ ಎನ್.ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ವಾಸುಕಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಗಜೇಂದ್ರ ಆರ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಕಾರಿಯ ವೃತ್ತಿಪರ ನಿರ್ದೇಶಕ ಸುಭಾಶ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಾಸುಕಿ ಸಹಕಾರಿಯ ವ್ಯವಸ್ಥಾಪಕ ಕಿಶನ್ ಶೆಟ್ಟಿ ವಂದಿಸಿದರು. ಯಮುನಾ ದಿನೇಶ ನಾಯ್ಕ ಪ್ರಾರ್ಥನೆಯನ್ನು ಹಾಡಿದರು.

error: