May 10, 2024

Bhavana Tv

Its Your Channel

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿಗೆ ನಡೆದ ಮತದಾನದಲ್ಲಿ ಶೇ . ೬೪.೫೮ ಮತದಾನ

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿಗೆ ನಡೆದ ಮತದಾನದಲ್ಲಿ ಶೆ. ೬೪.೫೮ ಮತದಾನವಾಗಿದ್ದು, ಹುರಳಿಸಾಲ ಮತ್ತು ಜಾಲಿಯಲ್ಲಿ ಸ್ವಲ್ಪ ಬಿಗುವಿನ ವಾತಾವರಣ ಎರ್ಪಟ್ಟಿರುವುದು ಬಿಟ್ಟರೆ ಇತರೆಡೆಯಲ್ಲಿ ಶಾಂತಿಯುತವಾದ ಮತದಾನ ನಡೆದಿದೆ.

ವಾರ್ಡ ನಂ ೧೮ ಮದಿನಾ ಕಾಲನಿಯ ಉತ್ತರಭಾಗದಲ್ಲಿ ಅತಿ ಕಡಿಮೆ ೩೭.೫೪ ಪ್ರತಿಶತ ಮತಚಲಾವಣೆ ಆದರೆ ವಾರ್ಡ ನಂ ೧೦ ಜಾಲಿಕೋಡಿಯಲ್ಲಿ ೮೦.೯೮ ಪ್ರತಿಶತ ಮತಚಲಾವಣೆ ಆಗಿದೆ. ತಂಜೀA ವಿರುದ್ದ ಬಂಡಾಯ ಅಭ್ಯರ್ಥಿಗಳಿದ್ದಲ್ಲೆಲ್ಲಾ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಂಜೀo ವಿರುದ್ದ ಇದೆ ಮೊದಲ ಬಾರಿ ೮ ಅಭ್ಯರ್ಥಿಗಳು ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದರು.
ಪಟ್ಟಣದ ಹುರಳಿಸಾಲನಲ್ಲಿ ಮುಂಜಾನೆಯಿoದಲೆ ಬಿಗುವಿನ ವಾತಾವರಣ ನಿರ್ಮಾಣವಾಗಿ ತಂಜೀo ಮತ್ತು ಬಂಡಾಯ ಅಭ್ಯರ್ಥಿಗಳ ನಡುವೆ ಬೆಳಿಗ್ಗೆಯಿಂದಲೆ ಮಾತಿನ ಚಕಮಕಿ ನಡೆಯುತಿತ್ತು. ಮದ್ಯಾಹ್ನ ೧೧ ಗಂಟೆಯ ಸಮಯದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪಿಎಸ್‌ಐ ಭರತ ನಾಯಕ ಕಡಕ್ ಎಚ್ಚರಿಕೆ ನೀಡಿದ ಬಳಿಕ ಒಂದು ಹಂತಕ್ಕೆ ಪರಿಸ್ಥಿತಿ ಹತೋಟಿ ಬಂದಿದೆ.

ಹುರಳಿಸಾಲನಲ್ಲಿ ಮತದಾನ ಪ್ರಕ್ರಿಯೆ ವೇಗ ಪಡೆಯುತ್ತಿರುವಂತೆ ಮಹಿಳೆಯರ ಬುರ್ಖಾ ತೆಗಿಸುವಂತೆ ಬಂಡಾಯ ಅಭ್ಯರ್ಥಿಗಳು ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ. ಹುರಳಿಸಾಲ ಪೊಲೀಂಗ್ ಸ್ಟೇಶನ್‌ನಲ್ಲಿ ಹೆಚ್ಚಿನ ಮಹಿಳಾ ಪೊಲೀಸ್ ಪೇದೆಗಳನ್ನು ಇಟ್ಟಿದ್ದು ಅವರು ಅಲ್ಲಿಯೆ ತಪಾಸಣೆ ನಡೆಸಿ ಒಳಗೆ ಬಿಡುತ್ತಾರೆ. ಈ ಕುರಿತು ಗೊಂದಲ ಬೇಡ ಎಂದು ಪೊಲೀಸರು ಬಂಡಾಯ ಅಭ್ಯರ್ಥಿಗಳಿಗೆ ತಿಳಿಸಿದ್ದು ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಜಾಲಿ ಕೋಡಿ ಮತ್ತು ಹುರಳಿಸಾಲ ಹೊರತು ಪಡಿಸಿದರೆ ಉಳಿದೆಡೆ ಶಾಂತಿಯುತವಾದ ಮತದಾನ ನಡೆದಿದೆ. ೧೩ ವಾರ್ಡನ ಪೊಲೀಂಗ್ ಸ್ಟೇಶನ್‌ನಲ್ಲಿ ಜನಜಂಗುಳಿ ಕಂಡು ಬರದಿದ್ದರೂ ಮತದಾನ ನಡೆಯುವ ೧೦೦ಮಿ. ಹೊರಗೆ ಮಾತ್ರ ಆಯಾ ಪಕ್ಷದ ಬೆಂಬಲಿಗರ ಸಂಖ್ಯೆಯೆ ಜಾಸ್ತಿ ಇತ್ತು.

error: