May 5, 2024

Bhavana Tv

Its Your Channel

ಜಿಲ್ಲೆಯ ಎಲ್ಲರನ್ನು ಒಗ್ಗೂಡಿಸಿ ಆಭಿವೃದ್ದಿಯ ಕಡೆಗೆ ಸಾಗುತ್ತೇನೆ-ನೂತನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಭಟ್ಕಳ:– ಜಿಲ್ಲೆಯ ಎಲ್ಲರನ್ನು ಒಗ್ಗೂಡಿಸಿ ಆಭಿವೃದ್ದೀಯ ಕಡೆಗೆ ಸಾಗುತ್ತೆನೆ ಎಂದು ಉತ್ತರ ಕನ್ನಡ ಜಿಲ್ಲೆಯ ನೂತನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದರು. ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರಥಮಬಾರಿಗೆ ಆಗಮಿಸಿ ಭಟ್ಕಳದಲ್ಲಿ ಶಾಸಕ ಸುನೀಲ ನಾಯ್ಕರವರ ನಿವಾಸದಲ್ಲಿ ಭಾವನಾ ಟಿವಿಯೊಂದಿಗೆ ತಮ್ಮ ಇಂಗಿತವನ್ನು ಹಂಚಿಕೊAಡರು.

     ಗೌರವಾನ್ವಿತ ಮುಖ್ಯ ಮಂತ್ರಿಗಳು ನನಗೆ ನೀಡಿದ ಆದೇಶದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಆಗಮಿಸುತ್ತಿದ್ದೇನೆ. ನಾಳೆ ಕಾರವಾರದಲ್ಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳುತ್ತೆನೆ. ಸ್ವಾಭಾವಿಕವಾಗಿ ಯರ‍್ಯಾರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು  ಎಂಬುದು ಪಕ್ಷದ ಹಿರಿಯರು, ವರಿಷ್ಟರು ಹಾಗೂ ಮುಖ್ಯಮಂತ್ರಿಗಳು  ತೀರ್ಮಾನ ಮಾಡಿರುತ್ತಾರೆ. ಆ ತೀರ್ಮಾನದ ಹಿಂದೆ ಒಂದಿಷ್ಟು ತೀರ್ಮಾನಗಳು ಹಾಗೂ ಅಭಿವೃದ್ದಿ ವಿಷಂiÀiಗಳು ಇರುತ್ತವೆ. ಎಲ್ಲರನ್ನು ಎಲ್ಲಾ ಕಡೆ ಹೊಂದಾಯಿಸುವ ವಿಚಾರವು ಇರುತ್ತದೆ. ಆ ಕಾರಣಕ್ಕೆ ಯಾರು ಯಾವ ಜಿಲ್ಲೆಯಲ್ಲಿ ಮೂಲ ವಾಸ್ತವ್ಯದಲ್ಲಿರುತ್ತಾರೋ ಅದನ್ನು ಬದಲಿಸಿ ಬೇರೆಡೆಗೆ ಇರಬೇಕೆಂಬುದು ಪಕ್ಷದ ವರಿಷ್ಠರ ತೀರ್ಮಾನವಾಗಿದೆ.

ಆ ಹಿನ್ನಲೆಯಲ್ಲಿ ಉಡುಪಿ ನನ್ನ ತವರು ಜಿಲ್ಲೆ. ಅಲ್ಲಿಂದ ನೆರೆಯ ಜಿಲ್ಲೆಯ ಉತ್ತರ ಕನ್ನಡಕ್ಕೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಬಹುದೊಡ್ಡ ಕೈಗಾರಿಕವಲಯವಾಗುವ ಅರ್ಹತೆ ಹೊಂದಿರುವ ಜಿಲ್ಲೆ. ಮೀನುಗಾರಿಕೆಗೆ ಉತ್ತಮ ಪ್ರಾಶಸ್ತö್ಯ ನೀಡಬೇಕಾದ ಜಿಲ್ಲೆ. ಅಭಿವೃದ್ಧಿಗೆ ಸಂಭAದಿಸಿದAತೆ ಅನೇಕ ಕೆಲಸ ಕಾರ್ಯಗಳು ಆಗಬೇಕಾಗಿದೆ. ಬಹುತೇಕ ಹೆಚ್ಚಿನವರೆ ಪಕ್ಷದ ಹಿರಿಯರಿದ್ದಾರೆ, ಶಾಸಕರಿದ್ದಾರೆ.ಸಂಸದರಿದ್ಧಾರೆ. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ನಮ್ಮ ಪಕ್ಷ ಪ್ರತಿನಿಧಿಗಳಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರರವರು ಶುಭಹಾರೈಸಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರಿಗೆ ಭೇಟಿ ಮಾಡುತ್ತೆನೆ. ಗಣರಾಜ್ಯೋತ್ಸವ ಮುಗಿದ ನಂತರ ಎಲ್ಲಾ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಎಲ್ಲು ಕೂಡಾ ಆಡಳಿತಾತ್ಮಕವಾಗಿ ಗೊಂದಲವಾಗದAತೆ ಒಟ್ಟಾಗಿ ಒಂದಾಗಿ ಎಲ್ಲರನ್ನು ಕರೆದುಕೊಂಡು ಅಭಿವೃದ್ದಿ ಕಡೆಗೆ ಗಮನ ಹರಿಸುವುದು ನನ್ನ ಉದ್ದೇಶ ಎಂದರು.
ಜಿಲ್ಲೆಯ ಅಭಿವೃದ್ದಿಯಿಂದ ಒಬ್ಬರಿಂದ ಮಾತ್ರ ಅವಲಂಬಿತವಾಗಿಲ್ಲ. ಜಿಲ್ಲೆಯ ಶಾಸಕರ, ಸಂಸದರ, ಜನಪ್ರತಿನಿಧಿಗಳ ಹಾಗೂ ಹಿರಿಯರ ಮಾರ್ಗ ಸೂಚಿಯ ಅನುಸಾರವಾಗಿ ಅಭಿವೃದ್ದಿ ಕೆಲಸ ಆಗಬೇಕಾಗಿದೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರ ಅಭಿವೃದ್ದೀಯಾಗಬೇಕು. ಉತ್ತರ ಕನ್ನಡ ಜಿಲ್ಲೆ ಹೆಚ್ಚು ಉದ್ದದ ಕಡಲ ಕಿನಾರೆ ಹೊಂದಿದ್ದು ಇಲ್ಲೀಯ ಮೀನುಗಾರರಿಗೆ ಆಧುನಿಕ ಯಂತ್ರೋಪಕರಣಗಳೊAದಿಗೆ ಅಭಿವೃದ್ದಿಗೆ ಯಾವ ರೀತಿಯಲ್ಲಿ ಉತ್ತೇಜನ ನೀಡಬಹುದು ಎಂದು ಯೋಚಿಸಬೇಕಾಗಿದೆ. ಇಲ್ಲಿಯ ನೈಸರ್ಗಿಕ ಸಂಪತ್ತು ವಿಶಾಲವಾಗಿದೆ. ಹೆಚ್ಚು ಅರಣ್ಯ ಸಂಪತ್ತು ಹೊಂದಿದೆ, ಅದರೊಂದಿಗೆ ಇಲ್ಲಿಯ ಬಡವರಿಗೆ ಹಕ್ಕು ಪತ್ರ ಇನ್ನು ವಿತರಣೆ ಆಗಿಲ್ಲ. ನಿವೇಶನಗಳು ದೊರೆತ್ತಿಲ್ಲ, ಅರಣ್ಯ ಒತ್ತುವರಿ ಪ್ರದೇಶದಲ್ಲಿ ಬಡವರಿದ್ದಾರೆ. ಅವರಿಗೆ ಮನೆ ಕಟ್ಟಲು ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಾರೆ. ಹೀಗೆ ಸಾಮಾಜಿಕ ಸಮಸ್ಯೆಗಳು ಇರುವ ಜಿಲ್ಲೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯಾಗಿರುವ ಬಡವರು, ಪರಿಷ್ಟರು,ಹಾಲಕ್ಕಿಗಳು ಇರುವ ಜಿಲ್ಲೆ. ಅವರ ಮೂಲಭೂತ ಸೌಲಭ್ಯ ಅಭಿವೃದ್ದೀ ಪಡಿಸುವುದು ಒಟ್ಟಾರೆ ಇಡಿ ಕರ್ನಾಟದಲ್ಲಿ ಗಮನದಲ್ಲಿರಿಸಿದ್ದಾಗ ಅಭಿವೃದ್ದಿಯ ಸೂಚ್ಯಂಕದಲ್ಲಿ ಇನ್ನು ಕೂಡ ಎತ್ತರದಲ್ಲಿ ಎರಬಹುದಾದ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಒಂದು ಎಂದು ನನ್ನ ಗಮನಕ್ಕೆ ಬಂದ ಸಂಗತಿಯಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಲ್ಲಾ ಜನಪ್ರನಿಧಿಗಳನ್ನು ಹಾಗೂ ಆಧಿಕಾರಿವರ್ಗದ ಒಂದುತAಡವನ್ನಾಗಿ ಕೆಲಸ ಮಾಡುತ್ತೆನೆ ಎಂದರು.

error: