May 6, 2024

Bhavana Tv

Its Your Channel

ಶಾಸಕ ಸ್ಥಾನದ ಜವಾಬ್ದಾರಿಯನ್ನು ಅರ್ಥಪೂರ್ಣಗೊಳಿಸಿ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶ ನನ್ನದು – ಶಾಸಕ ಸುನೀಲ ನಾಯ್ಕ

ಭಟ್ಕಳ ಶಾಸಕ ಸುನೀಲ ನಾಯ್ಕ ಅವರು ಅವರ ಕ್ಷೇತ್ರದಲ್ಲಿ 4 ನೇ ಹಳ್ಳಿ ವಾಸ್ತವ್ಯ ಕಾರ್ಯಕ್ರಮ ಹಾಗೂ ವಿಶೇಷ ಜನ ಸಂಪರ್ಕ ಸಭೆಯನ್ನು ಭಾನುವಾರದಂದು ಕೊಪ್ಪ ವಂದಲ್ಸೆಯ ಗುಂಡ್ಲಾಕಟ್ಟಾ ಶಾಲಾ ಆವರಣದಲ್ಲಿ ನಡೆಸಲಾಯಿತು.

ಸಭೆಯನ್ನು ಶಾಸಕ ಸುನೀಲ ನಾಯ್ಕ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ‘ ಜನ್ಮದಿನದ ಆಚರಣೆಯು ಪರಿಪೂರ್ಣ ಹಾಗೂ ಅರ್ಥಪೂರ್ಣವಾಗಿ ಆಗಬೇಕೆಂಬ ಉದ್ದೇಶ ನನ್ನದು. ಸಾಮಾನ್ಯವಾಗಿ ಶಾಸಕರೆಂದ ಮೇಲೆ ತಮ್ಮ ಜನ್ಮದಿನವನ್ನು ಮೋಜು ಮಸ್ತಿ ಮಾಡಲಿದ್ದಾರೆ. ಅದರಿಂದ ಕ್ಷೇತ್ರದ ಜನರಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ಈ ನಿಟ್ಟಿನಲ್ಲಿ ಒಂದು ಸಂಕಲ್ಪ ಮಾಡಿ ನನ್ನ ಜನ್ಮ ದಿನವನ್ನು ಕ್ಷೇತ್ರದ ಕುಗ್ರಾಮವೊಂದನ್ನು ಆಯ್ಕೆ ಮಾಡಿ ಅಲ್ಲಿನ ಸಮುದಾಯದ ಜೊತೆಗೆ ಒಂದು ದಿನ ಉಳಿದು ಅವರ ಕಷ್ಟ ಸುಖ ಸಮಸ್ಯೆಗಳನ್ನು ಆಲಿಸಿ ಅವರ ಮನವರಿಕೆಯಾಗದಲ್ಲಿ ಕೆಲಸಕ್ಕೆ ಉತ್ಸಾಹ, ಪರಿಹಾರದ ಮಾರ್ಗೋಪಾಯದ ದಾರಿ ಸಿಗಲಿದೆ ಎಂಬುದು ನನ್ನ ನಂಬಿಕೆ.
ಅದರಂತೆ ಈ ಬಾರಿ ನಾಲ್ಕನೇ ಹಳ್ಳಿ ವಾಸ್ತವ್ಯವನ್ನು ಆಯೋಜಿಸುವ ಪೂರ್ವದಲ್ಲಿ ಕೊಪ್ಪ ಪಂಚಾಯತ ಭಾಗದಲ್ಲಿ ಆಗಬೇಕಾದ ರಸ್ತೆ ಹಾಗೂ ಸಂಪರ್ಕ ಸೇತುವೆಯ ಗುದ್ದಲಿ ಪೂಜೆಯನ್ನು ಸಹ ಅಂದೆಯೇ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.
ಮುಖ್ಯವಾಗಿ ಹಳ್ಳಿ ವಾಸ್ತವದಿಂದ ಅಲ್ಲಿನ ಜನರ ಕಷ್ಟ ನಷ್ಟ ಹಾಗೂ ಅವರೊಂದಿಗಿನ ಬಾಂದವ್ಯ ಪ್ರೀತಿ ಹೆಚ್ಚಾಗಲಿದೆ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಭಾಗ ಕಾಡು ಪ್ರದೇಶ ಹೊಂದಿರುವ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಕೊಪ್ಪ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸುವ ಚಿಂತನೆ ನನ್ನದಾಗಿದೆ.

ಕೇವಲ ಭಾಷಣ, ಪ್ರವಾಸ, ಸದನದಲ್ಲಿ ಭಾಗಿ ಅಥವಾ ಇನ್ಯಾವುದೇ ಪ್ರಚಾರದ ಗೀಳು ಹತ್ತಿಸಿಕೊಳ್ಳದೇ ನೇರ ಜನರೊಂದಿಗೆ ಬೆರೆತು ನನ್ನ ಕೆಲಸ ಮಾತನಾಡಬೇಕು ಎಂಬ ಹಠದಲ್ಲಿ ಹಳ್ಳಿ ವಾಸ್ತವ್ಯಕ್ಕೆ ಮುಂದಾಗಿದ್ದೇನೆ. ವರ್ಷದಲ್ಲಿ ಎರಡು ಬಾರಿಯಾದರು ಕುಗ್ರಾಮದಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಆಲಿಸುವ ತೀರ್ಮಾನಿಸಲಾಗಿದೆ.

ಅದರಂತೆ ಇನ್ನು 10 ದಿನದಲ್ಲಿ ಬಸ್ತಿಯಿಂದ ಕೊಪ್ಪದ ತನಕ 25 ಕಿಮೀ ಸಹ ಯಾವುದೇ ಹೊಂಡವಿಲ್ಲದೇ ಇರುವ ರೀತಿಯಲ್ಲಿ ವ್ಯವಸ್ಥಿತ ರಸ್ತೆ ನಿರ್ಮಾಣ ಮಾಡಿಕೊಡಲಿದ್ದೇನೆ. ಅದರಂತೆ ಮುಂದಿನ ದಿನಗಳಲ್ಲಿ ಜನರು ಹೇಳಿದ ಕಡೆಯಲ್ಲಿ ರಸ್ತೆ ಸೇತುವೆ ಹಾಗೂ ಮುಂದಿನ ಅವಧಿಯಲ್ಲಿ ನನ್ನನ್ನು ಗೆಲ್ಲಿಸಿದರೆ ಎಲ್ಲಾ ಮೂಲಭೂತ ಸೌಕರ್ಯಗಳು ಸಿಗುವಂತೆ ಜವಾಬ್ದಾರಿ ಕೆಲಸ ಮಾಡಲಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಹೊನ್ನಾವರ ಮಾವಿನಕುರ್ವೆ ಪಂಚಾಯತ ಅಧ್ಯಕ್ಷ ಜಿ.ಜಿ. ಶಂಕರ ಮಾತನಾಡಿ ‘ ರಾಜಕೀಯದಿಂದ ಹಣ ಮಾಡಬೇಕು ಅಥವಾ ದುರುದ್ದೇಶ ಇಟ್ಟುಕೊಂಡು ಬರುವವರೇ ಹೆಚ್ಚಿರುವ ಸಂದರ್ಭಗಳಲ್ಲಿ ತನ್ನ ಕ್ಷೇತ್ರದಲ್ಲಿ ಜನರಿಗೆ ಸಾಕಷ್ಟು ವರ್ಷದಿಂದ ಆಗದ ಕೆಲಸ ಮಾಡಿಕೊಂಡುವ ಸತತ ಪ್ರಯತ್ನ ಶಾಸಕ ಸುನೀಲ ನಾಯ್ಕ ಮಾಡಿಕೊಟ್ಟಿದ್ದಾರೆ. ಶೋಷಿತ ವರ್ಗದ ಜನರ ಶ್ರೇಯೋಭಿವ್ರದ್ದಿ ಮಾಡಬೇಕೆಂಬ ಸದುದ್ದೇಶ ಹೊಂದಿರುವವರಲ್ಲಿ ಶಾಸಕ ಸುನೀಲ ನಾಯ್ಕ ಅವರು ಮುಂಚೂಣಿಯಲ್ಲಿದ್ದಾರೆ. ಕೋವಿಡ್ ಅವಧಿಯಲ್ಲಿಯೂ ಸಹ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅವರ ಚಿಕ್ಕ ವಯಸ್ಸಿನಲ್ಲಿ ಶಾಸಕರಾದ ಮೇಲೆ ಕ್ರಿಯಾಶೀಲರಾಗಿರುವುದು ಸಂತಸ. ಇನ್ನು 50-60ನೇ ವಯಸ್ಸಿನಲ್ಲಿ ಅವರ ರಾಜಕೀಯ ಭವಿಷ್ಯ ಹಾಗೂ ಅವರ ಕೆಲಸಗಳು ಅವರನ್ನು ನಮ್ಮ ಜಿಲ್ಲೆಯಲ್ಲಿ ಸಚಿವರನ್ನಾಗಿ ಮಾಡಬೇಕೆಂಬ ಹಂಬಲ ನಮ್ಮದಾಗಿದೆ. ಅತೀ ಮುಖ್ಯ ಸೇತುವೆಯನ್ನು ನಿರ್ಮಿಸಿ ಸೇತುಬಂಧ ಶಾಸಕರು ಹಾಗೂ ಧಾರ್ಮಿಕವಾಗಿ ದೇವಾಲಯದ ಮಹಾದ್ವಾರವನ್ನು ವೈಯಕ್ತಿಕ ಹಣದಿಂದ ಕಟ್ಟಿಸಿಕೊಡುವುದರ ಮೂಲಕ ಗೋಪುರದ ನಿರ್ಮಾಣದ ಶಾಸಕರಾಗಿದ್ದಾರೆ. ಇವರು ಜಿಲ್ಲೆಯ ಆಸ್ತಿಯಾಗಿದ್ದು ಅವರನ್ನು ನಾವು ಮತ್ತೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಕ್ಷೇತ್ರದ ವಿವಿಧ ಭಾಗದಿಂದ ಬಂದAತಹ ಶಾಸಕರ ಅಭಿಮಾನಿಗಳು ಕೇಕ್ ಹಾಗೂ ಹೂ ಕುಚ್ಚವನ್ನು ತಂದಿದ್ದು ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅದೇ ರೀತಿ 3.28 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಶಾಸಕ ಸುನೀಲ ನಾಯ್ಕ ಉಪಸ್ಥಿತರಿದ್ದ ವಿವಿಧ ಇಲಾಖೆಯ ಅಧಿಕಾರಿಗಳೊಂದೊಗೆ ಗ್ರಾಮದ ಜನರ ಸಮಸ್ಯೆಯನ್ನು ಆಲಿಸಿ ಕೆಲವೊಂದಕ್ಕೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದ್ದು ಕೆಲವನ್ನು ಅಧಿಕಾರಿಗಳ ಮಟ್ಟದಲ್ಲಿ ಮಾಡುವಂತೆ ಸೂಚನೆ ನೀಡಿದರು.

ಅದರಂತೆ ಹಳ್ಳಿ ವಾಸ್ತವ್ಯದ ಮೊದಲ ದಿನ ಉತ್ತರಕೊಪ್ಪ ಭಾಗದ ಬಂಗ್ಲೋಡಿ, ಗುಂಡ್ಲಕಟ್ಟಾ, ಕೊಳೆಗೇರಿ, ಗುಜಮಾವು, ಒಂದಲ್ಸು ಭಾಗಗಳಿಗೆ ಭೇಟಿ ನೀಡಿ ಸಭೆ ನಡೆಸಿ ಅಲ್ಲಿನ ಜನರ ಸಮಸ್ಯೆಗಳನ್ನು ಅರಿತು, ಆತಿಥ್ಯವನ್ನು ಸ್ವೀಕರಿಸಿ, ಮರಾಠ ಸಮಾಜದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಮಾಸ್ತಿ ಗೊಂಡ ಅವರ ಮನೆಯಲ್ಲಿ ವಾಸ್ತವ್ಯವನ್ನು ಹೂಡಿದ್ದರು.

ಈ ಸಂಧರ್ಭದಲ್ಲಿ ಕೊಪ್ಪ ಪಂಚಾಯತ ಅಧ್ಯಕ್ಷ ರಾಜು ನಾಯ್ಕ, ಲಕ್ಷ್ಮೀ ಮೊಗೇರ, ಪಂಚಾಯತ ಪಿಡಿಓ ದಿನೇಶ ನಾಯ್ಕ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಹೊನ್ನಾವರ ಭಾಗದ ಪಂಚಾಯತ ಸದಸ್ಯರಾದ ಮಂಜುಳಾ ಗೌಡ, ಪ್ರಮೋದ ನಾಯ್ಕ ಮುಂತಾದವರು ಇದ್ದರು.

error: