March 12, 2025

Bhavana Tv

Its Your Channel

ಮಾದ್ಯಮ ಕಪ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಉದ್ಯಮಿ ಮತ್ತು ರಾಜ್ಯ ಕಾಸ್ಕಾರ್ಡ ಬ್ಯಾಂಕ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ

ಭಟ್ಕಳ :ಸದಾ ಒತ್ತಡದಲ್ಲಿರುವ ಸರಕಾರಿ ನೌಕರರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು ಎಂದು ಉದ್ಯಮಿ ಮತ್ತು ರಾಜ್ಯ ಕಾಸ್ಕಾರ್ಡ ಬ್ಯಾಂಕ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.

ಅವರು ತಾಲೂಕು ಕ್ರೀಡಾಂಗಣ ದಲ್ಲಿ ಭಟ್ಕಳ ಮಾಧ್ಯಮ ಗೆಳೆಯರು ಹಮ್ಮಿಕೊಂಡ ಮಾದ್ಯಮ ಕಪ್ ಪಂದ್ಯಾವಳಿಯನ್ನು ಉದ್ಘಾಟಿ ಸಿ ಮಾತನಾಡಿದರು.
ಮಾದ್ಯಮ ಮಿತ್ರರು ಇಂದು ವಿವಿಧ ಸರಕಾರಿ ಇಲಾಖೆಗಳ ನೌಕರರು ಹಾಗೂ ಸೌಹಾರ್ಧ ಪಂದ್ಯಾವಳಿಯನ್ನು ನಡೆಸಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದರಲ್ಲದೆ ಇಂತಹ ಪಂದ್ಯಾಟದ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ಉಂಟುಮಾಡುತ್ತಿರುವ ಮಾಧ್ಯಮದವರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ ಸರಕಾರಿ ನೌಕರರು ಹಾಗೂ ಸಮಾಜ ಸೇವೆಯಲ್ಲಿರುವ ಸಂಘಸoಸ್ಥೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುವದರಿಂದ ಎಲ್ಲರ ಪರಿಚಯ ಹಾಗೂ ಸ್ನೇಹದ ಭಾವನೆ ಉಂಟಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ ಯೂನಿಯನ್ ಅಧ್ಯಕ್ಷ ಮನಮೋಹನ ನಾಯ್ಕ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.ವೇದಿಕೆಯಲ್ಲಿದ್ದ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಎ.ಎಸ್.ಐ ಅಂತೋನಿ ಮಾತನಾಡಿದರು.

ಪ್ರಾರಂಭದಲ್ಲಿ ವರದಿಗಾರ ಕುಮಾರ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಪ್ರಸನ್ನ ಭಟ್, ಉದಯ ನಾಯ್ಕ, ಮಂಜು ನಾಯ್ಕ, ರಾಮಚಂದ್ರ ಕಿಣಿ, ಮೋಹನ ನಾಯ್ಕ ಭಾಗವಹಿಸಿದ್ದರು.

error: