March 12, 2025

Bhavana Tv

Its Your Channel

ಭಟ್ಕಳ ತಾಲೂಕಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಭಟ್ಕಳ ತಾಲೂಕಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅತ್ಯಂತ ಶಾಂತಯುತವಾಗಿ ನಡೆದಿದ್ದು ಒಟ್ಟೂ ೨೧೮೫ ವಿದ್ಯಾರ್ಥಿಗಳಲ್ಲಿ ೫ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆಯನ್ನು ಬರೆದಿದ್ದಾರೆ.

ಗೈರಾದ ವಿದ್ಯಾರ್ಥಿಗಳಲ್ಲಿ ಮುರ್ಡೇಶ್ವರ ನ್ಯಾಶನಲ್ ಹೈಸ್ಕೂಲ್‌ನ ವಿದ್ಯಾರ್ಥಿನಿಯೋರ್ವಳು ಊರಿನಲ್ಲಿಯೇ ಇಲ್ಲ ಎನ್ನಲಾಗಿದೆ. ನ್ಯೂ ಇಂಗ್ಲೀಷ್ ಶಾಲೆಯ ಓರ್ವ ವಿದ್ಯಾರ್ಥಿನಿ ಅನ್ಯ ಕಾರಣದಿಂದ ಗೈರಾಗಿದ್ದಾಳೆನ್ನಲಾಗಿದೆ. ಉಳಿದಂತೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢ ಶಾಲೆಯ ೧ ವಿದ್ಯಾರ್ಥಿ, ನ್ಯಾಶನಲ್ ಪಬ್ಲಿಕ್ ಶಾಲೆಯ ೧ ವಿದ್ಯಾರ್ಥಿ, ಬೆಳಕೆ ಪ್ರೌಢ ಶಾಲೆಯ ೧ ವಿದ್ಯಾರ್ಥಿ ಗೈರಾಗಿದ್ದಾರೆ. ಇನ್ನೂ ನಾಲ್ವರು ಗಂಡು ಮಕ್ಕಳು ವಿವಿಧ ಕಾರಣಕ್ಕಾಗಿ ಹಾಜರಾಗಿಲ್ಲ ಎನ್ನಲಾಗಿದೆ.
ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳೂ ಸೇರಿ ಒಟ್ಟು ೧೦ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ವಿಶೇಷ ಕೊಠಡಿಗಳೂ ಸೇರಿ ೧೨೩ ಕೊಠಡಿಗಳನ್ನು ಪರೀಕ್ಷೆಗಾಗಿ ಸಿದ್ಧ ಪಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಎಲ್ಲಾ ಕೇಂದ್ರಗಳಲ್ಲಿಯೂ ಕೂಡಾ ಪರೀಕ್ಷಾ ಕೇಂದ್ರಗಳ ಎದುರು ಯಾವುದೇ ಗೊಂದಲವಿಲ್ಲದೇ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಇತ್ತೀಚೆಗೆ ಉಚ್ಚ ನ್ಯಾಯಾಲಯವು ಸರಕಾರಿ ಶಾಲೆಗಳಲ್ಲಿ ಸರಕಾರ ನಿಗದಿಪಡಿಸಿದ ಹಾಗೂ ಖಾಸಗೀ ಶಾಲೆಗಳಲ್ಲಿ ಆಯಾಯ ಶಾಲಾ ಮುಖ್ಯಸ್ಥರು ನಿಗದಿ ಪಡಿಸಿದ ಸಮವಸ್ತ್ರವನ್ನು ಧರಿಸುವುದನ್ನು ಕಡ್ಡಾಗೊಳಿಸಿ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಾಗಿತ್ತು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿನಿಯರು ತಮ್ಮ ತಮ್ಮ ಶಾಲೆಯಲ್ಲಿ ನಿಗದಿ ಪಡಿಸಿದ್ದ ಸಮವಸ್ತ್ರದಲ್ಲಿಯೇ ಬಂದು ಪರೀಕ್ಷೆ ಬರೆದಿದ್ದರಿಂದ ಹಿಜಾಬ್ ಕುರಿತು ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲವಾಗಿತ್ತು.

error: